ಶತ್ರು ಸಂಹಾರ ಯಾಗ ನಡೆದಿಲ್ಲ ಎಂದ ತಳಿಪರಂಬ ದೇವಾಲಯ, ಈ ಕುರಿತು ಸ್ಪಷ್ಟನೆ ಕೊಟ್ಟ ಡಿಕೆಶಿ…..!

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬೀಳಿಸಲು ನನ್ನ ಹಾಗೂ ಸಿಎಂ ವಿರುದ್ದ ಶತ್ರು ಸಂಹಾರ ಯಾಗವನ್ನು ಕೇರಳದಲ್ಲಿ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‍ ತಿಳಿಸಿದ್ದರು. ಈ ಹೇಳಿಕೆ ಬೆನ್ನಲ್ಲೆ ತಳಿಪರಂಬ ರಾಜರಾಜೇಶ್ವರಿ ದೇವಾಲಯದ ಆಡಳಿತ ಮಂಡಳಿ ಈ ಆರೋಪವನ್ನು ತಳ್ಳಿಹಾಕಿತ್ತು. ತಳಿಪರಂಬ ದೇವಾಲಯದ ಆಡಳಿತ ಮಂಡಳಿ ಹೇಳಿಕೆ ನೀಡಿದ ಬೆನ್ನಲ್ಲೆ ಡಿಸಿಎಂ ಡಿ.ಕೆ. ಶಿವಕುಮಾರ್‍ ಸ್ಪಷ್ಟನೆ ನೀಡಿದ್ದಾರೆ.

D K Shivakumar gave clarity about yaga 1

ಈ ಕುರಿತು ಟ್ವೀಟ್ ಮಾಡುವ ಮೂಲಕ ಈ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ದೇವಿ ರಾಜರಾಜೇಶ್ವರಿಯ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ದೇವಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಸ್ಪಷ್ಟಪಡಿಸುತ್ತೇನೆ. ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ‌ಭೇಟಿ‌ ನೀಡಿ ದೇವಿಯ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂಬುದು ನನ್ನ ವಿನಂತಿ.

ಇನ್ನೂ ಕಣ್ಣೂರು ತಳಿಪರಂಬ ರಾಜರಾಜೇಶ್ವರಿ ದೇವಾಸ್ಥಾನದ ಸಮೀಪದಲ್ಲಿ ಪ್ರಾಣಿಬಲಿ ನೀಡಿ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ. 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ನನ್ನ ಹಾಗೂ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಕುರಿ, ಹಂದಿ ಬಲಿ ಕೊಡುವ ಕಾರ್ಯ ಕೂಡ ನಡೆದಿದೆ ಅಂತ ಗಂಭೀರ ಆರೋಪ ಮಾಡಿದ್ದರು. ಆದರೆ ಡಿ.ಕೆ.ಶಿವಕುಮಾರ್‍ ಹೇಳಿಕೆಯನ್ನು ರಾಜರಾಜೇಶ್ವರಿ ದೇವಾಲಯದ ಆಡಳಿತ ಮಂಡಳಿ ತಳ್ಳಿಹಾಕಿತ್ತು. ದೇವಸ್ವಂ ಟ್ರಸ್ಟಿ ಮಂಡಳಿಯ ಸದಸ್ಯ ಮಾಧವನ್ ಈ ಹೇಳಿಕೆಯ ಬಗ್ಗೆ ರಿಯಾಕ್ಟ್ ಆಗಿದ್ದರು.

ಡಿ.ಕೆ.ಶಿವಕುಮಾರ್‍ ಪೋಸ್ಟ್ ನೋಡಲು ಲಿಂಕ್ ಓಪೆನ್ ಮಾಡಿ : https://x.com/DKShivakumar/status/1796535352812818633

ಕಣ್ಣೂರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಸಮೀಪದಲ್ಲಿ ಯಾವುದೇ ಯಾಗ, ಪೂಜೆ ನಡೆದಿಲ್ಲ ಎಂದು ದೇವಸ್ವಂ ಟ್ರಸ್ಟಿ ಮಂಡಳಿ ಸದಸ್ಯ ಮಾಧವನ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ದೇವಾಲಯವನ್ನು ಕೊಲ್ಲುವ ಶತ್ರು-ಸಂಹಾರ ಪೂಜೆ ಅಥವಾ ಪ್ರಾಣಿ ಬಲಿ ದೇವಾಲಯದಲ್ಲಿ ಅಥವಾ ದೇವಾಲಯದ ಸುತ್ತಲೂ ನಡೆದಿರುವುದು ತಿಳಿದಿಲ್ಲ. ಅವರು ಹೇಳಿದಂತೆ ಮೇಕೆ, ಎಮ್ಮೆಗಳನ್ನು ಬಲಿ ಕೊಡಲಾಗಿದೆ ಎಂಬುದು 100% ರಷ್ಟು ಸುಳ್ಳು. ತಳಿಪರಂಬ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಗೌಪ್ಯವಾಗಿ ನಡೆಯಲು ಸಾಧ್ಯವಿಲ್ಲ. ದೇವಸ್ಥಾನದ ಆವರಣದಲ್ಲಿ ಯಾಗ ನಡೆಯುತ್ತಿದೆ ಎಂದು ಹೇಳಿ ದೇವಸ್ಥಾನದ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲಿ ಎಂದು ಹೇಳಿಕೆ ನೀಡಿದ್ದರು.

Leave a Reply

Your email address will not be published. Required fields are marked *

Next Post

Im Single, I Need Girl Friend ಎಂದು ಪೊಲೀಸರನ್ನು ಆಶ್ರಯಿಸಿದ ಯುವಕ, ಪೊಲೀಸರು ಮಾಡಿದ್ದು ಏನು ಗೊತ್ತಾ?

Sat Jun 1 , 2024
ಕಳ್ಳತನ, ಕೊಲೆ, ದೌರ್ಜನ್ಯ, ಜಗಳಗಳು ಹೀಗೆ ಪೊಲೀಸರಿಗೆ ಪ್ರತಿನಿತ್ಯ ದೂರು ಗಳು ಬರುತ್ತಿರುತ್ತದೆ. ದೂರಿನಂತೆ ಪೊಲೀಸರು ಕ್ರಮ ಸಹ ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಯುವಕ ಪೊಲೀಸರ ಬಳಿ ವಿಭಿನ್ನವಾದ ಮನವಿ ಮಾಡಿದ್ದಾನೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. Im Single, I Need Girl Friend ಎಂದು ಪೊಲೀಸರ ಮೊರೆ ಹೋಗಿದ್ದಾನೆ. ನಾನು ಇನ್ನೂ ಸಿಂಗಲ್, ನೀವು ನನಗೆ ಗರ್ಲ್ ಫ್ರೆಂಡ್ ಹುಡುಕಲು ಸಹಾಯ ಮಾಡಿ […]
Boy requvest to delhi police viral post
error: Content is protected !!