Lakshmi Hebbalkar: ಬೀಚ್ ನೋಡೋಕೆ ಬಂದ್ರಾ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಆಕ್ರೋಷ….!

ಸದ್ಯ ಕರ್ನಾಟಕದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ, ರಾಜ್ಯದ ಹಲವು ಕಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ (Lakshmi Hebbalkar) ಕರಾವಳಿಯ ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸುಮಾರು 10 ದಿನಗಳಾಗಿದೆ. ಆದರೆ ನೆರೆ ಕಡಿಮೆಯಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ನೆರೆ ಹಾನಿ ಪ್ರದೇಶ ವೀಕ್ಷಣೆ ಮಾಡಲು ಬಂದಿದ್ದರಿಂದ ಸ್ಥಳೀಯರು ಆಕ್ರೋಷ ಹೊರಹಾಕಿದ್ದಾರೆ.

Lakshmi Hebbalkar udupi visit 0

ಉಡುಪಿಯಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಮಳೆಯಾಗುತ್ತಿದೆ. ಗಾಳಿ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ ಜೊತೆಗೆ ಸಾವು ನೋವುಗಳೂ ಸಹ ಸಂಭವಿಸಿದೆ. ಅದರಲ್ಲೂ ಭಾರಿ ಮಳೆಗೆ ನದಿ ಪಾತ್ರದಲ್ಲಿ ವಾಸ ಮಾಡುವಂತಹ ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಇಲ್ಲಿಯವರೆಗೂ ಈ ಭಾಗಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ಭೇಟಿ ನೀಡಿಲ್ಲ. ನೆರೆ ಇಳಿಯಾಗುತ್ತಿದ್ದಂತೆ ಅವರು ನೆರೆ ಪ್ರವಾಸ ಕೈಗೊಂಡಿದ್ದು, ಗುಜ್ಜರಬೆಟ್ಟು ಕಡಲಕೊರೆತ ಆದ ಪ್ರದೇಶಕ್ಕೆ ಭೇಟಿ ನೀಡಿದ್ದರು. ಸಮುದ್ರ ಕೊರೆತದ ಜಾಗಕ್ಕೆ ಸೂಕ್ತ ಕಲ್ಲುಗಳನ್ನು ಜೋಡಿಸಲು ಸೂಚನೆ ನೀಡಿದ್ದಾರೆ.

ಇನ್ನೂ ಉಡುಪಿಯ ನಾವುಂದ, ಬಡಾಕೆರೆ, ಸಾಲ್ಚುಡ ಭಾಗದ ಸುಮಾರು ಮನೆಗಳು ಜಲಾವೃತಗೊಂಡಿದೆ. ಸೋಮೇಶ್ವರ ಗುಡ್ಡದ ಮಣ್ಣು ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ, ನೋಡಿ ತೆರಳಿದ್ದಾರೆ. ಇದನ್ನು ದೂರದಿಂದಲೇ ವೀಕ್ಷಣೆ ಮಾಡಿ ಸಚಿವೆ ಹೋಗಿದ್ದು, ಈ ಕುರಿತು ಸ್ಥಳೀಯರು ಅಸಮಧಾನ ಹೊರಹಾಕಿದ್ದಾರೆ. ಸಚಿವರು ಏನು ಬೀಚ್ ನೋಡಕೆ ಬಂದ್ರಾ ಅಥವಾ ಗುಡ್ಡ ನೋಡಲು ಬಂದ್ರಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವು ದಿನಗಳಿಂದ ಸಮಸ್ಯೆಯಿದೆ. ರಸ್ತೆ, ಖಾಸಗಿ ರೆಸಾರ್ಟ್‌ಗಳ ನಿರ್ಮಾಣದಿಂದ ಈ ಸಮಸ್ಯೆ ಉದ್ಬವಿಸಿದೆ. ಕಡಲ ಕೊರೆತದ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸ್ಥಳದಲ್ಲಿ ಪರಿಶಿಷ್ಟ ಜಾತಿಯ ಮನೆಗಳಿದೆ. ಉಡುಪಿಯಲ್ಲೆ ಸಚಿವರು ಇದ್ದು, ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕೆಂದು ಜನರು ಒತ್ತಾಯಿಸಿದರು.

Lakshmi Hebbalkar udupi visit

ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ಮಾತನಾಡಿ ನಾನು ಇಲ್ಲಿಯೇ ಮನೆ ಮಾಡಿ ಇರಲು ತಯಾರಿದ್ದೇನೆ. ನನಗೂ ಜವಾಬ್ದಾರಿಯಿದೆ, ಅಧಿವೇಷನ ನಡೆಯುತ್ತಿದೆ. ಭಾನುವಾರ ರಜೆ ಇದ್ದಾಗಲೂ ಬಂದಿದ್ದೇನೆ. ನನ್ನ ಅವಶ್ಯಕತೆಯಿದ್ದಾಗ ಇಲ್ಲಿಗೆ ಬರುತ್ತೇನೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚರವಾಗಿಯೇ ಇದೆ. ಪರಿಹಾರ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *

Next Post

Guru Purnima: ಜೀವನ ರೂಪಿಸುವ ಶಕ್ತಿ ಇರುವುದು ಗುರುವಿನಲ್ಲಿ ಮಾತ್ರ: ಎ.ಜಿ.ಸುಧಾಕರ್

Mon Jul 22 , 2024
ಬಾಗೇಪಲ್ಲಿ:  ಇಡೀ ವಿಶ್ವದಲ್ಲಿ ಮಾನವನ ಜೀವಮಾನದ ಭವಿಷ್ಯವನ್ನು ರೂಪಿಸುವ ಶಕ್ತಿ ಒಬ್ಬ ವಿದ್ಯೆ ಕಲಿಸಿದ ಗುರುವಿಗೆ ಮಾತ್ರ ಸಾದ್ಯ (Guru Purnima) ಎಂದು  ಗಂಗಮ್ಮ ದೇವಿ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್ ಅಧ್ಯಕ್ಷ ಎ.ಜಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಗುರು ಪೌರ್ಣಿಮೆ (Guru Purnima) ಅಂಗವಾಗಿ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್‍ವತಿಯಿಂದ ಪಟ್ಟಣದ ಗ್ರಾಮದೇವತೆ ಗಂಗಮ್ಮ ದೇವಾಲಯದಲ್ಲಿ  ಅಯೋಜಿಸಲಾಗಿದ್ದ ಕಾಲಜ್ಞಾನಿ ಶ್ರೀ ಯೋಗಿ […]
Guru Purnima in Bagepalli
error: Content is protected !!