Guru Purnima: ಜೀವನ ರೂಪಿಸುವ ಶಕ್ತಿ ಇರುವುದು ಗುರುವಿನಲ್ಲಿ ಮಾತ್ರ: ಎ.ಜಿ.ಸುಧಾಕರ್

ಬಾಗೇಪಲ್ಲಿ:  ಇಡೀ ವಿಶ್ವದಲ್ಲಿ ಮಾನವನ ಜೀವಮಾನದ ಭವಿಷ್ಯವನ್ನು ರೂಪಿಸುವ ಶಕ್ತಿ ಒಬ್ಬ ವಿದ್ಯೆ ಕಲಿಸಿದ ಗುರುವಿಗೆ ಮಾತ್ರ ಸಾದ್ಯ (Guru Purnima) ಎಂದು  ಗಂಗಮ್ಮ ದೇವಿ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್ ಅಧ್ಯಕ್ಷ ಎ.ಜಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗುರು ಪೌರ್ಣಿಮೆ (Guru Purnima) ಅಂಗವಾಗಿ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್‍ವತಿಯಿಂದ ಪಟ್ಟಣದ ಗ್ರಾಮದೇವತೆ ಗಂಗಮ್ಮ ದೇವಾಲಯದಲ್ಲಿ  ಅಯೋಜಿಸಲಾಗಿದ್ದ ಕಾಲಜ್ಞಾನಿ ಶ್ರೀ ಯೋಗಿ ಅಮರನಾರಾಯಣ(ಕೈವಾರ ತಾತಯ್ಯ) ರವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,  ನಾವು ಗಳಿಸಿದ ಸಂಪತ್ತು ಕಸಿದುಕೊಳ್ಳಬಹುದು ಆದರೆ ಗುರುಗಳು ಕಲಿಸಿದ ವಿದ್ಯೆ ಮಾತ್ರ ಯಾರಿಂದಲ್ಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದ ಅವರು  ಇಡೀ ವಿಶ್ವದಲ್ಲಿ ಮಹತ್ವದ ಸ್ಥಾನ ನೀಡಿ ಗೌರವಿಸಲ್ಪಡುವ ಏಕೈಕ ವ್ಯಕ್ತಿ ವಿದ್ಯೆ ಕಲಿಸಿದ ಗುರುಗಳು (Guru Purnima) ಮಾತ್ರ.

(Guru Purnima) ಗುರು ಕಲಿಸಿದ ವಿದ್ಯೆಯಿಂದ ಮನುಷ್ಯನ ಜೀವನದ ಭವಿಷ್ಯವನ್ನು ರೂಪಿಸುವ ಶಕ್ತಿ ಇದೆ ಎಂದ ಅವರು ಗುರು ಸ್ಥಾನವನ್ನು ಅಲಂಕರಿಸಿದವರಿಗೆ ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಶ್ರದ್ದಾಭಕ್ತಿಯಿಮದ ಪೂಜಿಸಿ ಗೌರವಿಸಬೇಕೆಂದರು. ಈ ಸಂದರ್ಭದಲ್ಲಿ ವಿ.ನಾರಾಯಣಪ್ಪ, ಕೆ.ಆರ್.ಅಂಜಿನಪ್ಪ, ಬಿ.ಎಸ್.ನಾರಾಯಣಸ್ವಾಮಿ, ಟಿ.ರಘುನಾಥರೆಡ್ಡಿ, ಬಿ.ಎಸ್.ನಾಗಭೂಷಣ್ ಮತ್ತಿತರರು ಗುರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Next Post

Phonepe: ಕನ್ನಡಿಗರ ತಾಕತ್ತು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಪೋನ್ ಪೇ ಸಿಇಒ, ಬೇಷರತ್ ಕ್ಷಮೆ….!

Mon Jul 22 , 2024
ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಶೇ.50-75 ರಷ್ಟು ಮೀಸಲಾತಿ ನೀಡುವ ಮಸೂದೆಯ ಕುರಿತು ಹೇಳಿಕೆ ನೀಡಿದ್ದ ಪೋನ್ ಪೇ (Phonepe) ಸಿಇಒ ಸಮೀರ್ ನಿಗಮ್ (Sameer Nigam) ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ರಾಜ್ಯದಾದ್ಯಂತ ಪೋನ್ ಪೇ ಬಾಯ್ಕಾಟ್ (Uninstall Phonepe) ಎಂಬ ಅಭಿಯಾನ ಶುರು ಮಾಡಿದರು, ಈ ಆಕ್ರೋಷಕ್ಕೆ ಪೋನ್ ಪೇ ಸಿಇಒ ಬೇಷರತ್ ಕ್ಷಮೆಯಾಚಿಸಿದ್ದಾರೆ. ಪೋನ್ ಪೇ (Phonepe) ಸಿಇಒ ಸಮೀರ್ ನಿಗಮ್ […]
Phonepe ceo says
error: Content is protected !!