ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಶೇ.50-75 ರಷ್ಟು ಮೀಸಲಾತಿ ನೀಡುವ ಮಸೂದೆಯ ಕುರಿತು ಹೇಳಿಕೆ ನೀಡಿದ್ದ ಪೋನ್ ಪೇ (Phonepe) ಸಿಇಒ ಸಮೀರ್ ನಿಗಮ್ (Sameer Nigam) ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ರಾಜ್ಯದಾದ್ಯಂತ ಪೋನ್ ಪೇ ಬಾಯ್ಕಾಟ್ (Uninstall Phonepe) ಎಂಬ ಅಭಿಯಾನ ಶುರು ಮಾಡಿದರು, ಈ ಆಕ್ರೋಷಕ್ಕೆ ಪೋನ್ ಪೇ ಸಿಇಒ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಪೋನ್ ಪೇ (Phonepe) ಸಿಇಒ ಸಮೀರ್ ನಿಗಮ್ (Sameer Nigam) ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕ್ಷಮೆ ಕೋರಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಯ ಬಗ್ಗೆ ತಮ್ಮ ಅಭಿಪ್ರಾಯದ ಬಗ್ಗೆ ಸ್ಪಷ್ಟಪಡಿಸುವ ವೈಯುಕ್ತಿಕ ಹೇಳಿಕೆ ನೀಡಿದ್ದರು. ಪೋನ್ ಪೇ (Phonepe) ಬೆಂಗಳೂರಿನಲ್ಲಿ ಹುಟ್ಟಿದೆ. ಹಾಗೂ ವಿಶ್ವ ಮಟ್ಟದ ತಂತ್ರಜ್ಞಾನ ಪ್ರತಿಭೆ ಹಾಗೂ ರೋಮಾಂಚಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಕಳೆದೊಂದು ದಶಕದಲ್ಲಿ ನಾವು ಭಾರತದ ಉದ್ದ ಮತ್ತು ಅಗಲದಾದ್ಯಂತ ವಿಸ್ತರಿಸಿದ್ದೇವೆ. ಈ ಮೂಲಕ ದೇಶದ 55 ಕೋಟಿಗೂ ಹೆಚ್ಚಿನ ಜನರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಪಾವತಿಗಳನ್ನು ನೀಡಲು ಸಾಧ್ಯವಾಗಿದೆ. ಉದ್ಯೋಗ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕಳೆದ ವಾರ ನಾನು ಮಾಡಿದ ಕೆಲವು ವೈಯುಕ್ತಿಕ ಹೇಳಿಕೆಗಳಿಗೆ ಸಂಬಂಧಿಸಿದ ಬಗ್ಗೆ ವಿರೋಧದ ಬಗ್ಗೆ ಕೆಲವೊಂದು ಮಾದ್ಯಮಗಳಲ್ಲಿ ಓದಿದ್ದೇನೆ. ಕರ್ನಾಟಕ ಹಾಗೂ ಜನರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ.
https://x.com/_sameernigam/status/1815044657367445794
ಇನ್ನೂ ನನ್ನ ಹೇಳಿಕೆಗಳಿಂದ ಯಾರಿಗಾದರೂ, ಯಾರ ಭಾವನೆಗಳಿಗಾದರೂ ನೋವು ಉಂಟು ಮಾಡಿದ್ದರೇ, ನಾನು ನಿಜವಾಗಿಯೂ ನಿಮಗೆ ಬೇಷರತ್ ಕ್ಷಮೆಯಾಚಿಸಲು ಬಯಸುತ್ತೇನೆ. ಕನ್ನಡ ಹಾಗೂ ಭಾರತದ ಎಲ್ಲಾ ಭಾಷೆಗಳ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ದೇಶದಲ್ಲಿ ಒಂದು ಖಾಸಗಿ ಕಂಪನಿಯಾಗಿ ಎಲ್ಲಾ ವೈವಿದ್ಯತೆಯನ್ನು ಒಳಗೊಂಡು ಅಭಿವೃದ್ದಿಯಾಗಿದ್ದೇವೆ. ಆದ್ದರೀಮದ ಸ್ಥಳೀಯ ಕನ್ನಡಿಗರು ಸೇರಿದಂತೆ ಎಲ್ಲಾ ಭಾರತೀಯರಿಗೆ ನ್ಯಾಯಯುತ ಹಾಗೂ ಪಕ್ಷಪಾತವಿಲ್ಲದ, ಅರ್ಹತೆ ಆಧಾರಿತ ಉದ್ಯೋಗಾವಕಾಶಗಳನ್ನು ನೀಡಿದ್ದೇವೆ. ನನ್ನ ಉದ್ದೇಶ ಕನ್ನಡಿಗರನ್ನು ಅವಮಾನಿಸುವುದು ಆಗಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೇ ನಾನು ಬೇಷರತ್ ಕ್ಷಮೆ ಕೇಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.