Local News – ಮಕ್ಕಳಿಗೆ ಶಿಕ್ಷಣ ಎಷ್ಠು ಮುಖ್ಯವೋ ಶಿಸ್ತು, ಉತ್ತಮ ನಡವಳಿಕೆ, ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸುವುದು ಸಹ ಅಷ್ಠೇ ಮುಖ್ಯವಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ತೀಮಾಕಲಪಲ್ಲಿ ಗ್ರಾಮದ ಬಳಿಯಿರುವ ಶ್ರೀ ಪ್ರಗತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಗತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಾಸಂಗದ ಅವದಿಯಲ್ಲಿ ತಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸುವುದೇ ಅಲ್ಲದೆ ಅವರ ನಡುವಳಿಕೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪೋಷಕರು ಗಮನಿಸಬೇಕು ಮತ್ತು ಮನೆಯಲ್ಲಿ ತಮ್ಮ ಮಕ್ಕಳ ವ್ಯಾಸಂಗಕ್ಕೆ ಪೂರಕವಾದ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಬೇಕು ಅಲ್ಲದೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವು ಸಹ ಎಷ್ಠೇ ಮುಖ್ಯ ಎಂದ ಅವರು ವಿದ್ಯಾರ್ಥಿದಿಸೆಯಿಂದಲ್ಲೇ ಪಾಲಕರ ಕಷ್ಟಗಳ ಬಗ್ಗೆ ಮಕ್ಕಳಿಗೆ ಪರಿಚಯಿಸಿ ಜೀವನದ ಬಗ್ಗೆಯೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.
ವಿವಿದ ಸ್ಪರ್ಧೆಗಳಲ್ಲಿ ತಾಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸಾಧನೆಯನ್ನು ಮಾಡಿದ ಪ್ರಗತಿ ವಿದ್ಯಾಸಂಸ್ಥೆಯ ಸಾಧಕ ವಿದ್ಯಾರ್ಥಿಗಳನ್ನು ಪ್ರಗತಿ ಉತ್ಸವ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಗತಿ ಸಂಸ್ಥೆಯ ಶಿಕ್ಷಕರು ನೃತ್ಯಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಂಭ್ರಮವನ್ನು ಮೂಡಿಸಿ ಉತ್ಸವಕ್ಕೆ ವಿಶೇಷ ಕಳೆತಂದುಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ಪ್ರಗತಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಲಲಿತಾ ಮಿರ್ಜಾ, ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ವೈ.ಶ್ರೀನಿವಾಸರೆಡ್ಡಿ, ಪ್ರಗತಿ ಆಡಳಿತ ಮಂಡಳಿ ನಿರ್ದೇಶಕ ಆರನ್ ಮಿರ್ಜಾ, ಮುಖ್ಯ ಶಿಕ್ಷಕಿ ಕೆ. ಸೌರನ್ ಉನ್ನೀಸಾ ಸೇರಿದಂತೆ ಶಾಲಾ ಶಿಕ್ಷಕ, ಶಿಕ್ಷಕಿಯರು, ಪೋಷಕರು ಸಿಬ್ಬಂದಿ ಇದ್ದರು.