Viral Video: ಶಂಕರ್ ದಾದಾ ಜಿಂದಾಬಾದ್ ಎಂಬ ಸಿನೆಮಾದಲ್ಲಿ ವೃದ್ದರೊಬ್ಬರಿಗೆ ಪೆನ್ಷನ್ ಮಾಡಿಕೊಡಲು ಲಂಚ ಕೇಳಿದಾಗ ಆ ವೃದ್ದ ಸಿನೆಮಾ ನಾಯಕ ಹೇಳಿದಂತೆ ತನ್ನಲ್ಲಿದ್ದ ಎಲ್ಲಾ ವಸ್ತುಗಳನ್ನು ನೀಡಿ ಆ ಅಧಿಕಾರಿಗೆ ಅವಮಾನ ಆಗುವ ಕೆಲಸ ಮಾಡುತ್ತಾನೆ. ನಂತರ ಆ ಅಧಿಕಾರಿ ಆ ವೃದ್ದನ ಕೆಲಸ ಮಾಡಿಕೊಡುತ್ತಾನೆ. ಇದೇ ರೀತಿಯಲ್ಲಿ ಭ್ರಷ್ಟ ಅಧಿಕಾರಿಯಿಂದ ಬೇಸತ್ತ ಜನತೆ ಆ ಅಧಿಕಾರಿಯ ಮೇಲೆ ನೋಟುಗಳನ್ನು ಎಸೆದು ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆಯೊಂದು ನಡೆದಿದ್ದು, ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಂದಹಾಗೆ ಈ ಘಟನೆ ಗುಜರಾತ್ ನ ಧೋಲ್ಕಾ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಅಧಿಕಾರಿಯೊಬ್ಬರ ಲಂಚದ ದಾಹಕ್ಕೆ ಬೇಸತ್ತ ಜನರು ಆ ಅಧಿಕಾರಿಯ ಮೇಲೆ ನೋಟುಗಳನ್ನು ಎಸೆದಿದ್ದಾರೆ. ಭ್ರಷ್ಟ ಅಧಿಕಾರಿಯ ವಿರುದ್ದ ಜನ ತಿರುಗಿ ಬಿದ್ದು ಪ್ರತಿಭಟನೆ ಮಾಡಿದ್ದಾರೆ. ಸರ್ಕಾರಿ ಕಚೇರಿಯ ಒಳಗೆ ನುಗ್ಗಿ ಕುರ್ಚಿಯ ಮೇಲೆ ಕುಳಿತಿದ್ದ ಭ್ರಷ್ಟ ಅಧಿಕಾರಿಯ ಕತ್ತಿಗೆ ಭಿತ್ತಿ ಪತ್ರವನ್ನು ನೇತು ಹಾಕಿ ನೋಟುಗಳನ್ನು ಎಸೆದು ತೆಗೆದುಕೊಳ್ಳಿ ಇದನ್ನು ತಿನ್ನಿ ಎಂದು ಕೋಪದಿಂದ ಮಾತನಾಡುತ್ತಾ, ತಮ್ಮ ಆಕ್ರೋಷವನ್ನು ಹೊರಹಾಕಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ವಿಡಿಯೋವನ್ನು ಜ.9, 2025 ರಂದು ನಡೆದಿದೆ ಎನ್ನಲಾಗಿದ್ದು, ಭ್ರಷ್ಟ ಅಧಿಕಾರಿಯ ಮೇಲೆ ಎಸೆದ ನೋಟುಗಳು ನಕಲಿ ನೋಟುಗಳು ಎಂದು ಸಹ ಹೇಳಲಾಗಿದೆ. @kalamkeechot ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ತೆಗೆದುಕೊಳ್ಳಿ, ಅಕ್ರಮವಾಗಿ ಸಂಪಾದಿಸಿದ ಹಣವನ್ನು ಎಷ್ಟು ತಿನ್ನುತ್ತೀರಿ ಎಂದು ಕೋಪದಿಂದ ನೋಟುಗಳನ್ನು ಎಸೆದು ತಮ್ಮ ಆಕ್ರೋಷ ಹೊರಹಾಕುತ್ತಿರುವುದನ್ನು ಕಾಣಬಹುದಾಗಿದೆ. ಜ.12 ರಂದು ಈ ವಿಡಿಯೋ ಹಂಚಿಕೊಂಡಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಭ್ರಷ್ಟ ಅಧಿಕಾರಿಗಳಿಗೆ ಇದೇ ರೀತಿಯ ಕೆಲಸ ಮಾಡಬೇಕೆಂದು ಅನೇಕರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.