Satish Jarkiholi: ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೇಸ್ ನಾಯಕರುಗಳ ನಡುವೆ ವಾದ ವಿವಾದಗಳು ಜೋರಾಗಿದೆ. ಬೆಳಗಾವಿ ಅಭಿವೃದ್ದಿಯ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಗೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಈ ಕ್ರೆಡಿಟ್ ವಾರ್ ರಾಜ್ಯ ಕಾಂಗ್ರೇಸ್ ಉಸ್ತುವಾರಿ ಸುರ್ಜೇವಾಲ ಸಭೆಯಲ್ಲೂ ಬ್ಲಾಸ್ಟ್ ಆಗಿದೆ. ಬೆಳಗಾವಿಯ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಸುರ್ಜೇವಾಲ ರವರ ಮುಂದೆಯೇ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ಕಾಂಗ್ರೇಸ್ ಕಾರ್ಯಕರ್ತರಿಂದ ಗದ್ದಲ ಜೋರಾಗಿ ನಡೆದಿದೆ ಎನ್ನಲಾಗಿದೆ.

ಜ.17 ರಂದು ಬೆಳಗಾವಿ ನಗರದಲ್ಲಿ ಗಾಂಧಿ ಭಾರತ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಮುಖಂಡರ ಜೊತೆಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪೂರ್ವಭಾವಿ ಸಭೆ ನಡೆಸಿದ್ದರು. ಈ ಸಭೆಯಲ್ಲಿಯೇ ಗದ್ದಲ ನಡೆದಿದೆ. ಈ ಗಾಂಧಿ ಭಾರತ ಸಮಾವೇಶದ ಬಗ್ಗೆ ಈಗಾಗಲೇ ಸಭೆ ಮಾಡಿದ್ದೇವೆ ಎಂದು ಸುರ್ಜೇವಾಲ ಹೇಳಿದ್ದಾರೆ. ಇದಕ್ಕೆ ಕಾರ್ಯಕರ್ತರು ನೇರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಸಭೆ ಮಾಡಿಲ್ಲ ಎಂದು ನೇರವಾಗಿ ಉಸ್ತುವಾರಿಗಳ ಸಭೆಯಲ್ಲಿ ಗಲಾಟೆ ಮಾಡಿದ್ದಾರೆ. ನಂತರ ಕಾಂಗ್ರೇಸ್ ಕಚೇರಿ ನಿರ್ಮಾಣದ ಕುರಿತು ಕಾರ್ಯಕರ್ತರು ಆಕ್ರೋಷ ಹೊರಹಾಕಿದ್ದಾರೆ. ಸತೀಶ್ ಜಾರಕಿಹೊಳಿಯವರು ಕಚೇರಿಯನ್ನು ಈಗ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇದಕ್ಕೆ ಸುರ್ಜೇವಾಲ ರವರು ಸತೀಶ್ ಜಾರಕಿಹೊಳಿ ರವರನ್ನು ಖುಷಿ ಪಡಿಸಲು ಮಾತನಾಡುತ್ತಿದ್ದೀರಾ ಎಂದು ಹೇಳಿದ್ದಾರೆ.

ಇದಕ್ಕೆ ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಎಂಬುವವರು ಆಕ್ರೋಷ ಹೊಕಿದ್ದಾರೆ. ಸತೀಶ್ ಜಾರಕಿಹೊಳಿಯವರು ನಮ್ಮ ಹೆಮ್ಮೆ, ಅವರ ಸಲುವಾಗಿ ನಾವು ಜೀವ ಕೊಡುತ್ತೇವೆ. ಇಲ್ಲಿಗೆ ಬಂದಿರುವ ಜನರು ಸತೀಶ್ ಜಾರಕಿಹೊಳಿಯವರಿಗಾಗಿ ಬಂದಿದ್ದಾರೆ ಎಂದು ನೇರವಾಗಿಯೇ ಸುರ್ಜೇವಾಲರಿಗೆ ತಿಳಿಸಿದ್ದಾರೆ. ಈ ಸಮಯದಲ್ಲಿ ಸುರ್ಜೇವಾಲ ರವರು ಸುಮ್ಮನೇ ಇದ್ದರು. ಜೊತೆಗೆ ಸತೀಶ್ ಜಾರಕಿಹೊಳಿ ರವರು ವೇದಿಕೆಯ ಮೇಲಿದ್ದರು. ಬಳಿಕ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ, ಯಾರಿಗೆ ಏನು ಅವಶ್ಯಕತೆಯಿದೆ. ವಾಹನ ವ್ಯವಸ್ಥೆಯೆ ಜೊತೆಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತೇವೆ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.