Street Lights: ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸುವಂತೆ ಸಾರ್ವಜನಿಕರ ಆಗ್ರಹ….!

Street Lights –  ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಅಳವಡಿಸಿರುವಂತಹ ಕೆಲವೊಂದು ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ, ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Street light problem 0

ಗುಡಿಬಂಡೆ  ಪಟ್ಟಣದ ಅಂಚೆ ಕಚೇರಿ ಬಳಿ ಸೇರಿದಂತೆ ಹಲವು ಕಡೆ ಬೀದಿ ದೀಪಗಳು ಅಳವಡಿಸಲಾಗಿದೆ. ರಾತ್ರಿ ಸಮಯದಲ್ಲಿ ಸಂಚರಿಸುವಂತಹ ಪಾದಾಚಾರಿಗಳಿಗೆ ಬೀದಿ ದೀಪಗಳ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರಗಳೂ ಸಹ ಬೀದಿ ದೀಪಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಅಳವಡಿಸುತ್ತವೆ. ಆದರೆ ಗುಡಿಬಂಡೆ ಪಟ್ಟಣದ ಹಲವು ಬೀದಿ ದೀಒಗಳ ಸಮಸ್ಯೆ ಹೆಚ್ಚಾಗಿದೆ. ಕೆಲವೊಮ್ಮೆ ಬೀದಿ ದೀಪಗಳು ಸರಿಯಾಗಿ ಉರಿಯುವುದೇ ಇಲ್ಲ. ಕೆಲವೊಮ್ಮೆ ಡಿಸ್ಕೋ ಲೈಟ್ ಗಳ ಮಾದರಿಯಲ್ಲಿ ಉರಿಯುತ್ತವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಬೀದಿ ದೀಪಗಳನ್ನು ಸರಿಪಡಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Street light problem 2

ಇನ್ನೂ ಈ ಕುರಿತು ಮಾತನಾಡಿದ ಸ್ಥಳೀಯ ಅಂಗಡಿ ಮಾಲೀಕ ಶ್ರೀನಿವಾಸ, ಗುಡಿಬಂಡೆಯ ಮುಖ್ಯರಸ್ತೆಯಲ್ಲಿಯೇ ಕೆಲವೊಮ್ಮೆ ಬೀದಿ ದೀಪಗಳು ಸರಿಯಾಗಿ ಉರಿಯುವುದಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವಂತಹ ಸ್ಥಳೀಯರಿಗೆ ತುಂಬಾನೆ ಸಮಸ್ಯೆಯಾಗಿದೆ. ಅಂಚೆ ಕಚೇರಿಯ ಬಳಿ ಅಳವಡಿಸಲಾದ ದೀಪ ಒಮ್ಮೆ ಉರಿದರೇ ಮತ್ತೊಮ್ಮೆ ಉರಿಯುವುದಿಲ್ಲ. ಕೆಲವೊಮ್ಮೆ ಆನ್ ಆಗೋದು ಆಫ್ ಆಗೋದು ಆಗುತ್ತದೆ. ಅದರ ಪಕ್ಕದಲ್ಲೇ ಹಾಕಿರುವ ಮತ್ತೊಂದು ಬೀದಿ ದೀಪವನ್ನು ಮರಕ್ಕೆ ಬೆಳಕು ಬೀಳುವಂತೆ ಮಾಡಲಾಗಿದೆ. ಇದರಿಂದ ಜನರಿಗೆ ಏನು ಉಪಯೋಗ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

Leave a Comment

Your email address will not be published. Required fields are marked *

Scroll to Top