Crime News: ಕೆಲವೊಂದು ಕೊಲೆ ಪ್ರಕರಣಗಳು ಪೊಲೀಸರನ್ನೆ ಬೆಚ್ಚಿ ಬೀಳಿಸುವಂತಿರುತ್ತದೆ. ಅಂತಹುದೇ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದೆ. 35 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ತುಂಡು ಮಾಡಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ್ದಾನಂತೆ. ಬಳಿಕ ಕುದಿಸಿದ ದೇಹದ ಭಾಗಗಳನ್ನು ಕೆರೆಯಲ್ಲಿ ಎಸೆದಿರುವುದಾಗಿ ಆರೋಪಿಯೇ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೃತ ದುರ್ದುವಿಯನ್ನು ಮಾಧವಿ (18) ಎಂದು ಗುರ್ತಿಸಲಾಗಿದೆ. ರಕ್ಷಣಾ ಇಲಾಖೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನಿವೃತ್ತ ಸೈನಿಕ ಗುರುಮೂರ್ತಿ ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಜ.18 ರಂದು ಮೃತಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬದವರು ದೂರು ದಾಖಲಿಸಿದ್ದಾರೆ. ದೂರು ಕೊಡುವುದಕ್ಕೂ ಮುನ್ನಾ ಆರೋಪಿ ಗುರುಮೂರ್ತಿಯನ್ನು ಪ್ರಶ್ನೆ ಮಾಡಿದ್ದಾರೆ. ನಂತರ ಮೃತಳ ಪೋಷಕರು ಮೀರ್ ಪೇಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಕ್ಕಾಗಿ ತನ್ನೊಂದಿಗೆ ಜಗಳವಾಡಿ ಬಳಿಕ ನನ್ನಿಂದ ದೂರ ಹೋಗಿದ್ದಳೆ ಎಂದು ಆರೋಪಿ ಗಂಡ ಹೇಳಿಕೊಂಡಿದ್ದಾನೆ.
ಇನ್ನೂ ಗುರುಮೂರ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತ ಕೋಪದಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಆಕೆಯ ದೇಹವನ್ನು ಬಾತ್ ರೂಂ ನಲ್ಲಿ ಕತ್ತರಿಸಿ, ಒಲೆಯ ಮೇಲೆ ಕುಕ್ಕರ್ ನಲ್ಲಿ ಕುದಿಸಿ ಬಳಿಕ ಎಲುಬುಗಳನ್ನು ಬೇರ್ಪಡಿಸಿ, ಮೂಳೆಗಳನ್ನು ಪೆಸ್ಟಲ್ ಬಳಸಿ ಪುಡಿ ಮಾಡಿ ಮತ್ತೆ ಕುದಿಸಿದ್ದಾನಂತೆ. ಮೂರು ದಿನಗಳ ಕಾಲ ಮಾಂಸ ಹಾಗೂ ಎಲುಬುಗಳನ್ನು ಬೇಯಿಸಿದ ಬಳಿಕ ಚೀಲದಲ್ಲಿ ಅವುಗಳನ್ನು ಪ್ಯಾಕ್ ಮಾಡಿಕೊಂಡು ಹತ್ತಿರದ ಕೆರೆಗೆ ಎಸೆದಿದ್ದಾನೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಕೆಲವೊಂದು ಮಾದ್ಯಮಗಳು ವರದಿ ಮಾಡಿದೆ.
ಇನ್ನೂ ಕಳೆದ ಬುಧವಾರ ತಡರಾತ್ರಿಯವರೆಗೂ ಮೀರ್ ಪೇಟ್ ಪೊಲೀಸರು ಕೆರೆಯಲ್ಲಿ ಮೃತ ಮಹಿಳೆಯ ದೇಹದ ಅವೇಶಷಗಳನ್ನು ಹುಡುಕಾಡಿದ್ದಾರೆ. ಆದರೂ ಸಹ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ಆರೋಪಿ ಗುರುಮೂರ್ತಿ ತನ್ನ ಪತ್ನಿಯ ದೇಹದ ಭಾಗಗಳನ್ನು ತುಂಬಿ ಆ ಚೀಲವನ್ನು ಈ ಕೆರೆಗೆ ಎಸೆದಿರುವುದಾಗಿ ಹೇಳಿದ್ದು, ಅದರಂತೆ ಶೋಧಕ್ಕಾಗಿ ವಿಶೇಷ ತಂಡಗಳು ಹಾಗೂ ಶ್ವಾನ ದಳವನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮೃತ ಮಾಧವಿಯ ಪೋಷಕರು ನೀಡಿದ ದೂರನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.