RRB Recruitment 2025 – ಕೇಂದ್ರ ಸರ್ಕಾರದ ಉದ್ಯೋಗ ಬಯಸುವಂತಹವರಿಗೆ ಇಲ್ಲೊಂದು ಭರ್ಜರಿ ಅವಕಾಶವಿದೆ. ರೈಲ್ವೆ ನೇಮಕಾತಿ ಮಂಡಳಿ ಯು ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಡಿ ಒಟ್ಟು 32438 ಹುದ್ದೆಗಳ ನೇಮಕಾತಿ (RRB Group D Recruitment 2025) ಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಇದೇ ಜ.23 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. RRB ಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಫೆ.22 ಕೊನೆಯ ದಿನಾಂಕವಾಗಿದೆ.
RRB Recruitment 2025 – ಅಧಿಸೂಚನೆಯ ಸಂಕ್ಷಿಪ್ತ ವಿವರ:
Organization Name: | Railway Recruitment Board |
Category: | Central Govt Jobs |
Vacancy: | 32438 |
Post Name: | Group D |
Place of Posting: | All Over India |
Apply Mode: | Online |
Starting Date: | 23.01.2025 |
Last Date: | 0.941493056 |
Official Website: | https://www.rrbapply.gov.in/ |
RRB Recruitment 2025 – ಹುದ್ದೆಗಳ ವಿವರ :
- ಪಾಯಿಂಟ್ಸ್‌ಮ್ಯಾನ್-ಬಿ (Pointsman-B)- 5,058 ಹುದ್ದೆ
- ಅಸಿಸ್ಟಂಟ್ (ಟ್ರ್ಯಾಕ್ ಮೆಷಿನ್) – 799 ಹುದ್ದೆ
- ಸಹಾಯಕ (ಬ್ರಿಡ್ಜ್) – 301 ಹುದ್ದೆ
- ಟ್ರ್ಯಾಕ್ ನಿರ್ವಹಣೆ ಗ್ರೇಡ್-IV – 13,187 ಹುದ್ದೆ
- ಅಸಿಸ್ಟಂಟ್ ಪಿ-ವೇ – 257 ಹುದ್ದೆ
- ಅಸಿಸ್ಟಂಟ್ (ಸಿ & ಡಬ್ಲ್ಯು) – 2,587 ಹುದ್ದೆ
- ಅಸಿಸ್ಟಂಟ್ ಟಿಆರ್‌ಡಿ – 1,381 ಹುದ್ದೆ
- ಅಸಿಸ್ಟಂಟ್ ಲೋಕೋ ಶೆಡ್ (ಡೀಸೆಲ್) – 2,012 ಹುದ್ದೆ
- ಅಸಿಸ್ಟಂಟ್ ಲೋಕೋ ಶೆಡ್ (ಎಲೆಕ್ಟ್ರಿಕಲ್) – 420 ಹುದ್ದೆ
- ಅಸಿಸ್ಟಂಟ್ ಆಪರೇಷನ್ಸ್ (ಎಲೆಕ್ಟ್ರಿಕಲ್) – 950 ಹುದ್ದೆ
- ಅಸಿಸ್ಟಂಟ್ (ಎಸ್ & ಟಿ) 744 ಹುದ್ದೆ
- ಅಸಿಸ್ಟಂಟ್ ಟಿಎಲ್ & ಎಸಿ 1,041 ಹುದ್ದೆ
- ಅಸಿಸ್ಟಂಟ್ ಟಿಎಲ್ &ಎಸಿ (ವರ್ಕ್ ಶಾಪ್) 624 ಹುದ್ದೆ
- ಅಸಿಸ್ಟಂಟ್ (ವರ್ಕ್‌ಶಾಪ್) (ಮೆಕ್) 3,077 ಹುದ್ದೆ
ವಿದ್ಯಾರ್ಹತೆ ಹಾಗೂ ವಯೋಮಿತಿ: ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಅಥವಾ ಅಧಿಕೃತ ಮಂಡಳಿಯಿಂದ ಐಟಿಐ ಪೂರ್ಣಗೊಳಿಸಿರಬೇಕು. ಇನ್ನೂ ವಯೋಮಿತಿ ವಿಚಾರಕ್ಕೆ ಬಂದರೇ, ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 36 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಸ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಹಾಗೂ ಆಯ್ಕೆ ವಿಧಾನ: ಎಸ್‌ಸಿ/ಎಸ್‌ಟಿ/ಇಬಿಸಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 250 ರೂ. ಪಾವತಿಸಬೇಕು. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಿದೆ. ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT), ಫಿಸಿಕಲ್ ಎಫಿಶ್ಯೆನ್ಸಿ ಟೆಸ್ಟ್ (PET), ದಾಖಲಾತಿ ಪರಿಶೀಲನೆ (Document Verification), ವೈದ್ಯಕೀಯ ಪರೀಕ್ಷೆ (Medical Examination) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಿಬಿಟಿ ತಲಾ 1 ಅಂಕದ 100 ಪ್ರಶ್ನೆಯನ್ನು ಒಳಗೊಂಡಿರುತ್ತದೆ.
How to Apply for RRB Group D Recruitment 2025 : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- RRB ಆನ್‌ಲೈನ್ ಪೋರ್ಟಲ್ ಅಧಿಕೃತ ವೆಬ್‌ಸೈಟ್gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಮೆನು ಬಾರ್‌ನಲ್ಲಿರುವ “Apply” ಬಟನ್ ಕ್ಲಿಕ್ ಮಾಡಿ.
- ಹೊಸ ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ನಂತರ ಮುಖಪುಟಕ್ಕೆ ಹಿಂತಿರುಗಿ ಮತ್ತು ಈಗಾಗಲೇ ನೋಂದಾಯಿಸಲಾದ ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್(Login) ಮಾಡಿ.
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
RRB Recruitment 2025 – Important Dates :
- Start Date to Apply Online : 23.01.2025
- Last Date to Apply Online : 22.02.2025
RRB Recruitment 2025 – Important Links :
Official Website | Link |
Short Notice PDF | Short Notice |
Revised vacancy Notice PDF | Notice Link |
Official Notification PDF | Apply Now |