Viral Video – ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೆ ಹರಿದಾಡುತ್ತವೆ. ಕೆಲವೊಂದು ಕೆಟ್ಟ ವಿಡಿಯೋಗಳು ವೈರಲ್ ಆದರೇ ಕೆಲವೊಂದು ಒಳ್ಳೆಯ ಸಂದೇಶವಿರುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ತುಂಬಾನೆ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿರುವ ಬಾಲಕ ನಾನು ದುಡಿದು ಸಂಪಾದನೆ ಮಾಡುತ್ತೇನೆ ವಿನಃ ನಕಲಿ ಕೆಲಸ ಅಥವಾ ಭಿಕ್ಷೆ ಬೇಡಿ ಹಣ ಸಂಪಾದಿಸುವುದಿಲ್ಲ ಎಂದು ಹೇಳಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರ ಮನಗೆದ್ದಿದೆ. ವಿವಿಧ ರೀತಿಯ ಕಾಮೆಂಟ್ ಗಳು, ಲೈಕ್ ಗಳು ಹರಿದುಬರುತ್ತಿವೆ.
ಇಂದಿನ ಕಾಲದಲ್ಲಿ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಲು ಸಾಧ್ಯವಾಗದೇ ಅನೇಕರು ಅಡ್ಡದಾರಿಗಳನ್ನು ಹಿಡಿಯುತ್ತಾರೆ. ಜನರನ್ನು ಮೋಸ ಮಾಡುವುದು, ಕಳ್ಳತನ, ದರೋಡೆಯಂತಹ ಕೆಲಸಗಳನ್ನು ಮಾಡಿ ಹಣ ಸಂಪಾದನೆ ಮಾಡುವಂತಹವರನ್ನೂ ನೋಡಿರುತ್ತೇವೆ. ಅಂತಹವರಿಗೆ ಈ ವಿಡಿಯೋ ಕಪಾಳಮೋಕ್ಷ ಮಾಡಿದಂತಾಗುತ್ತದೆ ಎನ್ನಬಹುದಾಗಿದೆ. ಈ ಬಾಲಕ ಹೇಳಿದಂತೆ ನಾನು ಕಷ್ಟಪಟ್ಟು ದುಡಿಯುತ್ತೇನೆ ವಿನಃ ಭಿಕ್ಷೆ ಬೇಡಿ ಹಣ ಸಂಪಾದನೆ ಮಾಡುವುದಿಲ್ಲ ಎಂದು ಚಿಕ್ಕ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ದುಡಿದು ಬದುಕುವ ಮಾತುಗಳನ್ನಾಡಿರುವುದು ಎಲ್ಲರ ಮನ ಗೆದ್ದಿದೆ.
ಪಾಪಡ್ ಮಾರಾಟ ಮಾಡುವ ಹುಡುಗನ ವಿಡಿಯೋ ಇದಾಗಿದ್ದು, ವ್ಯಕ್ತಿಯೊಬ್ಬರು ಹಾಗೂ ಹುಡುಗನ ನಡುವೆ ನಡೆಯುವಂತಹ ಸಂಭಾಷಣೆ ಇದಾಗಿದೆ. ಪಾಪಡ್ ಮಾರಾಟ ಆಗುತ್ತಿಲ್ಲ ಎಂದು ಚಿಕ್ಕ ಹುಡುಗ ಹೇಳಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದವರು 5 ರೂಪಾಯಿಗೆ ಕೊಡಿ ಎಂದು ಕೇಳುತ್ತಾರೆ. 5 ರೂಪಾಯಿಗೆ ಪಾಪಡ್ ಕೊಡೋಕೆ ಆಗಲ್ಲ ಅಣ್ಣ ಎಂದು ಹುಡುಗ ಹೇಳುತ್ತಾನೆ. ಬಳಿಕ ಆ ವ್ಯಕ್ತಿ ನೀನು ನಿನ್ನ ತಾಯಿಯನ್ನು ಪ್ರೀತಿ ಮಾಡುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಹುಡುಗ ಹೌದು ಎಂದು ಉತ್ತರಿಸುತ್ತಾನೆ. ನಾನು ನನ್ನ ತಾಯಿಗೆ ಪಾಪಡ್ ಖರೀದಿಸುತ್ತೇನೆ, ನನ್ನ ತಾಯಿ ನಿನ್ನ ತಾಯಿಯಲ್ಲವೇ ಎಂದು ಕೇಳುತ್ತಾನೆ. ಈ ಮಾತುಗಳನ್ನು ಕೇಳಿದ ಬಾಲಕ 30 ರೂಪಾಯಿಯ ಪಾಪಡ್ ಅನ್ನು 5 ರೂಪಾಯಿಗೆ ಕೊಡಲು ಒಪ್ಪುತ್ತಾನೆ.
ಬಾಲಕನ ಮಾತುಗಳನ್ನು ಕೇಳಿದ ಆ ವ್ಯಕ್ತಿ ಎಷ್ಟು ಪಾಪಡ್ ಮಾರಾಟವಾಗಿದೆ ಎಂದು ಕೇಳುತ್ತಾನೆ. ಅದಕ್ಕೆ ಬಾಲಕ ಇನ್ನೂ ಮಾರಾಟವಾಗಿಲ್ಲ ಎಂದು ಹೇಳುತ್ತಾನೆ. ನಂತರ ಆ ವ್ಯಕ್ತಿ ಬಾಲಕನಿಗೆ 500 ರೂಪಾಯಿ ಕೊಡುತ್ತಾನೆ. ಆದರೆ ಆ ಬಾಲಕ ಅಣ್ಣ ನಾನು ಈ ಹಣ ತೆಗೆದುಕೊಳ್ಳಲಾರೆ ಎನ್ನುತ್ತಾನೆ. ಆಗ ಆ ವ್ಯಕ್ತಿ ಎಲ್ಲಾ ಪಾಪಡ್ ಗಳನ್ನು ತೆಗೆದುಕೊಳ್ಳುತ್ತೇನೆ. ನನ್ನ ತಾಯಿಗೆ ಪಾಪಡ್ ಕೊಟ್ಟಿದ್ದೀಯಾ ನಿಮ್ಮ ತಾಯಿಗಾಗಿ ಇವುಗಳನ್ನು ನನ್ನಿಂದ ಇಟ್ಟುಕೊಳ್ಳಿ ಎಂದು ಹೇಳುತ್ತಾರೆ. ಆಗ ಬಾಲಕ ನಾನು ಕೆಲಸ ಮಾಡಬಲ್ಲೆ ಅಣ್ಣ, ಆದರೆ ಭಿಕ್ಷೆ ಬೇಡಲು ಸಾಧ್ಯವಿಲ್ಲ. ಬೇರೆಯವರ ಹಣವನ್ನು ಏಕೆ ತೆಗೆದುಕೊಳ್ಳುತ್ತೇನೆ ಹೇಳಿ ಎಂದು ವ್ಯಕ್ತಿಯ ಬಳಿ ಹೇಳುತ್ತಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚಿದ್ದಾರೆ. ಬಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಕೆಲಸ ಮಾಡಿ ದುಡಿಯದೇ ಸೋಂಬೇರಿಗಳಿಗೆ ಈ ಬಾಲಕ ಮಾತುಗಳು ಕಪಾಳಮೋಕ್ಷ ಮಾಡಿದಂತಿದೆ ಎಂದು ಅನೇಕರು ಅಭಿಪ್ರಾಯಗಳನ್ನು ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.