Tuesday, June 24, 2025
HomeStateConstitution Day : ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಸಂವಿಧಾನ ಸಮರ್ಪಣಾ ದಿನಾಚರಣೆ....!

Constitution Day : ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಸಂವಿಧಾನ ಸಮರ್ಪಣಾ ದಿನಾಚರಣೆ….!

Constitution Day- ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ (Constitution Day) ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಈ ಸಮಯದಲ್ಲಿ ಮಾತನಾಡಿದ ದಲಿತ ಮುಖಂಡ ಈಶ್ವರಪ್ಪ, (Constitution Day) ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ಭಾರತ ಸಂವಿಧಾನ ಶ್ರೇಷ್ಟವಾದ ಸಂವಿಧಾನವಾಗಿದೆ ಸಂವಿಧಾನವನ್ನುರಚಿಸುವಲ್ಲಿ ಶ್ರಮ ವಹಿಸಿದಂತಹ ಅಂಬೇಡ್ಕರ್ ಸೇರಿದಂತೆಎಲ್ಲರಿಗೂ ನಾವೆಲ್ಲ ಚಿರಋಣಿಯಾಗಿದ್ದೇವೆ. ಇಂದು ನಾವೆಲ್ಲ ಸಂವಿಧಾನದ ಅಡಿಯಲ್ಲೇ ಬದುಕುತ್ತಿದ್ದೇವೆ. (Constitution Day)ಸಂವಿಧಾನದ ಮೂಲಕ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಜಾತಿ ಪದ್ದತಿ ಸೇರಿದಂತೆ ಅನೇಕವುಗಳನ್ನು ದೂರ ಮಾಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಸೇರಿದಂತೆ ಹಿಂದುಳಿದ ವರ್ಗಗಳಿಗೂ ಸಹ ಸಂವಿಧಾನ ನೆರವಾಗಿದೆ ಎಂದರು.

Constitution Day in Gudibande 1

ಬಳಿಕ ದಲಿತ ಮುಖಂಡ ಗಂಗರಾಜು ಮಾತನಾಡಿ (Constitution Day) ಇತ್ತೀಚಿಗೆ ಅನೇಕ ಸಂಘಟನೆಗಳು ಅಂಬೇಡ್ಕರ್‍ ರವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಆದರೆ ಅಂತಹ ಸಂಘಟನೆಗಳಿಂದ ಸಮುದಾಯಗಳ ಅಭಿವೃದ್ದಿ ಆಗುವುದಿಲ್ಲ. ಅಂಬೇಡ್ಕರ್‍ ರವರೂ ಸಹ ಜಾತಿಗೊಂದು ಸಂಘಟನೆ ಕಟ್ಟಿ ಎಂದು ಹೇಳಿಲ್ಲ. ಅವರ ಸಲಹೆ ಹಾಗೂ ಆದರ್ಶಗಳನ್ನು ಪಾಲನೆ ಮಾಡಿದಾಗ ಸಮುದಾಯಗಳ ಅಭಿವೃದ್ದ ಸಾಧ್ಯವಾಗುತ್ತದೆ. ಜೊತೆಗೆ ಎಲ್ಲಾ (Constitution Day) ರಾಜಕೀಯ ಪಕ್ಷಗಳೂ ದಲಿತರ ವಿರೋಧಿಯಾಗಿದೆ. ಮತದಾರರು ಹಣದ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಮತ ಚಲಾಯಿಸಿದಾಗ ಉತ್ತಮ ನಾಯಕ ಆಯ್ಕೆಯಾಗುತ್ತಾನೆ. ಇದೇ ಸಂವಿಧಾನದ ಪ್ರಮುಖ ಆಶಯವಾಗಿದೆ ಎಂದರು.

ಬಳಿಕ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ಮಾತನಾಡಿ, (Constitution Day) ಸಂವಿಧಾನ ರಚನೆಯಾಗಿ ಡಾ.ಬಿ.ಆರ್‍ ಅಂಬೇಡ್ಕರ್‍ ರವರು ಅವಿರಥವಾಗಿ ಶ್ರಮಿಸಿದ್ದಾರೆ. ಹಲವು ದೇಶಗಳ ಕಾನೂನುಗಳ ಬಗ್ಗೆ ಅಧ್ಯಯನ ಮಾಡಿ ಭಾರತಕ್ಕೆ ಉತ್ತಮವಾದ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಭಾರತದ ಸಂವಿಧಾನವನ್ನು (Constitution Day) ಪ್ರಪಂಚದ ಶ್ರೇಷ್ಟ ಸಂವಿಧಾನ ಎಂತಲೂ ಕರೆಯುತ್ತಾರೆ. ದೇಶದ ಸಂವಿಧಾನ ರಚನೆಯ ಹಿಂದಿನ ದೊಡ್ಡ ಶಕ್ತಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಮಾಜದಲ್ಲಿ ದುರ್ಬಲರು, ಕಾರ್ಮಿಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅವರು ಸುದೀರ್ಘ ಹೋರಾಟ ನಡೆಸಿದರು. ಕೆಳವರ್ಗದವರಿಗೆ ಸಮಾನತೆಯ ಹಕ್ಕನ್ನು ನೀಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಎಲ್ಲರ ಸಮುದಾಯಗಳಿಗೂ (Constitution Day) ಅಂಬೇಡ್ಕರ್‍ ರವರು ದೇವರಿದ್ದಂತೆ ಎಂದರು.

Constitution Day in Gudibande 0

ಇದೇ ಸಮಯದಲ್ಲಿ ಬಿಇಒ ಕೃಷ್ಣಪ್ಪ, ದಲಿತ ಮುಖಂಡ ಜಿ.ವಿ.ಗಂಗಪ್ಪ (Constitution Day) ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಅಂಬೇಡ್ಕರ್‍ ವೃತ್ತದಲ್ಲಿರುವ ಬಾಬಾ ಸಾಹೇಬ್ (Constitution Day)ಅಂಬೇಡ್ಕರ್‍ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಇದೇ ಸಮಯದಲ್ಲಿ ದಲಿತ ಮುಖಂಡರುಗಳು ಅಂಬೇಡ್ಕರ್ ರವರ ಕುರಿತು ಕ್ರಾಂತಿ ಗೀತೆಗಳನ್ನು ಹಾಡಿದರು. ಬಳಿಕ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಈ ವೇಳೆ (Constitution Day) ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ದಲಿತಪರ ಸಂಘಟನೆಗಳ ಮುಖಂಡರುಗಳು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿವರ್ಗ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular