ಪ್ರಾಣ ಎಂಬುದು ತುಂಬಾನೆ ಪ್ರಮುಖವಾದುದು, ಆ ಪ್ರಾಣವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ರೂಡಿಸಿಕೊಳ್ಳಬೇಕು (Helmet Distribution) ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಗುಡಿಬಂಡೆ ಟೌನ್ ಸೇರಿದಂತೆ ಎಲ್ಲೋಡು, ಉಲ್ಲೋಡು ಹಾಗೂ ಹಂಪಸಂದ್ರ ಪಂಚಾಯಿತಿ ವ್ಯಾಪ್ತಿಯ ಸುಮಾರು ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಿ ಮಾತನಾಡಿದರು.

Helmet Distribution – ಅಟಲ್ ಜೀ ಜನ್ಮದಿನದ ಅಂಗವಾಗಿ ಸಮಾಜ ಸೇವೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಹಪೇಯಿ ರವರ ಜನ್ಮದಿನಾಚರಣೆ ಅಂಗವಾಗಿ ಕ್ಷೇತ್ರದಾದ್ಯಂತ ಉಚಿತವಾಗಿ ಹೆಲ್ಮೆಟ್ ಗಳನ್ನು ಬೈಕ್ ಸವಾರರಿಗೆ ವಿತರಣೆ ಮಾಡುತ್ತಿದ್ದೇನೆ. ಬೈಕ್ ಸವಾರರು ತುಂಬಾನೆ ಎಚ್ಚರಿಕೆಯಿಂದ ಇರಬೇಕು, ಈ ಭಾಗದ ಜನತೆ ಹೆಚ್ಚಾಗಿ ದ್ವಿಚಕ್ರವಾಹನಗಳನ್ನೇ ಬಳಸುತ್ತಾರೆ, ಇದರಿಂದಾಗಿ ಸುರಕ್ಷತೆಯಿಂದ ವಾಹನ ಚಾಲನೆ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೆಲ್ಮೆಟ್ ಗಳನ್ನು ವಿತರಣೆ ಮಾಡುತ್ತಿದ್ದೇವೆ. ಅವುಗಳನ್ನು ಬೈಕ್ ಸವಾರರು ಬಳಸಬೇಕು ಎಂದರು.
ರಾಜ್ಯ ಸರ್ಕಾರದ ವಿರುದ್ದ ಗಂಭೀರ ಆರೋಪ
ಇನ್ನೂ ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ, ಗುಂಡಿ ಬಿದ್ದ ರಸ್ತೆಗಳಲ್ಲಿ ಜನ ಬಿದ್ದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಮತ್ತೆ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕ್ಷೇತ್ರದಲ್ಲೂ ಸಹ ರಸ್ತೆಗಳು ಹದೆಗಟ್ಟಿವೆ. ಶಾಸಕರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ, ಕೇವಲ ಅವರ ಬೆಂಬಲಿಗರು ಅವರ (Helmet Distribution) ಬೆನ್ನು ಅವರು ತಟ್ಟಿಕೊಳ್ಳುತ್ತಿದ್ದಾರೆ ಅಷ್ಟೆ ಎಂದು ಆರೋಪಿಸಿದರು.
2028ರ ಚುನಾವಣೆ ಹಾಗೂ ರಾಜಕೀಯ ಸ್ಪಷ್ಟನೆ
ಇನ್ನೂ ಕ್ಷೇತ್ರದಲ್ಲಿ ಮತ್ತೆ ಕೆಲವರು ಬಿಜೆಪಿ ಅಭ್ಯರ್ಥಿ ಎಂದು ಹೇಳುತ್ತಿರುವ ಕುರಿತು ಮಾತನಾಡಿ, ಕ್ಷೇತ್ರದಲ್ಲಿ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. 2028ಕ್ಕೆ ಚುನಾವಣೆ ನಡೆಯುವುದು, ಕ್ಷೇತ್ರದಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಾರೋ ಮಾಡಲಿ, ನಾನು ನಿಷ್ಟಾವಂತ ಬಿಜೆಪಿ ಕಾರ್ಯಕರ್ತ, ನನಗೆ ಟಿಕೆಟ್ ಕೊಟ್ಟರೂ, ಬೇರೆಯವರಿಗೆ ಟಿಕೆಟ್ ಕೊಟ್ಟರೂ (Helmet Distribution) ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಾನು ಬಿಜೆಪಿ ಪಕ್ಷದ ವತಿಯಿಂದಲೇ ಈ ಸಮಾಜಿಕ ಕಾರ್ಯ ಮಾಡುತ್ತಿದ್ದೇನೆ. ಬೇರೆಯವರು ಈ ರೀತಿಯ ಕೆಲಸ ಮಾಡಲಿ ಅದಕ್ಕೆ ನನಗೆ ವಿರೋಧವಿಲ್ಲ, ಎಲ್ಲರೂ ಜನರಿಗಾಗಿ ಮಾಡುವುದೇ ಎಂದರು.

Read this also : ಪ್ಲಾಸ್ಟಿಕ್ ಡಬ್ಬಿಯಲ್ಲಿ ಸಿಲುಕಿತ್ತು ಪುಟ್ಟ ನರಿಯ ಜೀವ; ಪರ್ವತಾರೋಹಿಗಳ ಮಾನವೀಯ ಕೆಲಸಕ್ಕೆ ಸಲಾಂ…!
ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇನೆ
ಕ್ಷೇತ್ರದಲ್ಲಿ ಚುನಾವಣೆಗೆ (Helmet Distribution) ಸ್ಪರ್ಧಿಸಿ ಸೋತ ಬಳಿಕ ಬೇರೆ ಕಡೆ ಹೊರಟು ಹೋಗುತ್ತಾರೆ ಎಂದು ಆರೋಪ ಮಾಡುತ್ತಾರೆ. ಆದರೆ ನಾನು ಚುನಾವಣೆಯ ಮುಂಚೆಯಿಂದಲೂ ಕ್ಷೇತ್ರದಲ್ಲೇ ಇದ್ದೀನಿ. ಪಕ್ಷದ ಪರ ಕೆಲಸ ಮಾಡುತ್ತಿದ್ದೇನೆ. ಯಾರೋ ಮಾಡುವ ಆರೋಪಗಳಿಗೆ ನಾನು ಕಿವಿಗೊಡುವುದಿಲ್ಲ. ನಾನು ಈಗಾಗಲೇ ಕ್ಷೇತ್ರದ ಶಾಸಕರ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆ. ಅದು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಜಡ್ಜ್‌ಮೆಂಟ್ ಬಳಿಕ ನನಗೆ ಶಾಸಕ ಸ್ಥಾನ ಸಿಗುವ ವಿಶ್ವಾಸವಿದೆ. ಜೊತೆಗೆ ನಾನು ನ್ಯಾಯಾಲಯದ ತೀರ್ಪಿಗೆ ಬದ್ದನಾಗಿರುತ್ತೇನೆ, ತಲೆಬಾಗುತ್ತೇನೆ. ದೇವರ ದಯೆ, ಕೃಪೆ ನನ್ನ ಮೇಲಿದೆ ಎಂದರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಬಿಜೆಪಿ ಮುಖಂಡರಾದ ಗಜನಾಣ್ಯ ನಾಗರಾಜ್, ಗಂಗಿರೆಡ್ಡಿ, ಜಿನ್ನಿ, ಅಂಬರೀಶ್, ಮಧುಸೂಧನ್, ಸಿ.ಆರ್.ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
