Viral Video: ಇಲ್ಲೊಬ್ಬ ಯುಟ್ಯೂಬ್ ತಂತ್ರಜ್ಞ, ಯೂಟ್ಯೂಬ್ ನೋಡಿ ಇಸಿಜಿ ಟೆಸ್ಟ್ ಮಾಡಿದ ಭೂಪ, ವೈರಲ್ ಆಯ್ತು ವಿಡಿಯೋ…!

ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ದೇಶದ ವಿವಿಧ ಕಡೆ ನಡೆಯುವಂತಹ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ನಮ್ಮ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ನೋಡಬಹುದಾಗಿರುತ್ತದೆ. ಅದರಲ್ಲೂ ಯುಟ್ಯೂಬ್ ಮೂಲಕ ಅನೇಕರು ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿರುತ್ತಾರೆ. ಅಡುಗೆ, ಪಾಠ, ಸಂಗೀತ ಸೇರಿದಂತೆ ಹಲವು ವಿಚಾರಗಳನ್ನು ಯುಟ್ಯೂಬ್ ನಲ್ಲೇ ಕಲಿಯುತ್ತಾರೆ. ಆದರೆ ಇಲ್ಲೊಬ್ಬ ಭೂಪ ಅದೇ ಯುಟ್ಯೂಬ್ ನೋಡಿ (Viral Video) ಇಸಿಜಿ ಟೆಸ್ಟ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Attender did ecg by watching youtube

ಯುಟ್ಯೂಬ್ ಮೂಲಕ ಅನೇಕರು ಇಂದು ಜೀವನ ಕಟ್ಟಿಕೊಂಡಿದ್ದಾರೆ. ಯುಟ್ಯೂಬ್ ನೋಡಿ ಒಳ್ಳೆಯ ವಿಚಾರಗಳನ್ನು ಕಲಿತು ಉದ್ದಾರ ಆಗುತ್ತಿದ್ದರೇ, ಮತ್ತೆ ಕೆಲವರು ಯುಟ್ಯೂಬ್ ನೋಡಿ ಕಳ್ಳತನ ಮಾಡುವುದು, ಶಸ್ತ್ರಚಿಕಿತ್ಸೆ ಮಾಡುವುದು, ಬಾಂಬ್ ತಯಾರಿ ಮಾಡುವಂತಹರನ್ನೂ ಸಹ ನೋಡಿದ್ದೇವೆ. ಈ ಸಂಬಂಧ ವಿಡಿಯೋಗಳೂ ಸಹ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಆಸ್ಪತ್ರೆಯೊಂದರಲ್ಲಿ ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ರಜೆಯಲ್ಲಿದ್ದ ಕಾರಣ ಆಸ್ಪತ್ರೆಗೆ ಬಂದ ರೋಗಿಗೆ ಲ್ಯಾಬ್ ಅಟೆಂಡರ್ ಯುಟ್ಯೂಬ್ ನೋಡಿಕೊಂಡು ಇಸಿಜಿ ಮಾಡಿದ್ದು ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಅಂದಹಾಗೆ ಈ ಘಟನೆಯ ರಾಜಸ್ಥಾನದ ಜೋಧ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ದೀಪಾವಳಿ ಹಬ್ಬದ ನಿಮಿತ್ತ ವೈದ್ಯರು ಹಾಗೂ ಲ್ಯಾಬ್ ಸಿಬ್ಬಂದಿಗಳು ರಜೆಯಲ್ಲಿದ್ದರಂತೆ, ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದ ರೋಗಿಗೆ ಆಸ್ಪತ್ರೆಯ ಅಟೆಂಡರ್ ಯುಟ್ಯೂಬ್ ನೋಡಿಕೊಂಡು ಇಸಿಜಿ ಮಾಡಿದ್ದಾನೆ. ಕಳೆದ ಅ.31 ರಂದು ಈ ಘಟನೆ ನಡೆದಿದೆ. ಇಸಿಜಿ ಮಾಡುವಾಗ ರೋಗಿಯ ಸಂಬಂಧಿ ನಿಮಗೆ ಈ ಕುರಿತು ತಿಳಿದಿಲ್ಲ ಅಂದ್ರೆ ಇಲ್ಲಿಗೆ ಬಿಡಿ, ಎಡವಟ್ಟಿನ ಕೆಲಸಕ್ಕೆ ಕೈ ಹಾಕಬೇಡಿ ಎಂದು ಹೇಳಿದ್ದಾರೆ. ಆದರೂ ಅಟೆಂಡರ್‍ ಮಾತ್ರ ಯುಟ್ಯೂಬ್ ನೋಡಿಕೊಂಡು ಇಸಿಜಿ ಪರೀಕ್ಷೆ ಮಾಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಈ ಸಂಬಂಧ ವಿಡಿಯೋವನ್ನು @BhawaniSinghjpr ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಟೆಂಡರ್‍ ಓರ್ವ ಯುಟ್ಯೂಬ್‌ನಲ್ಲಿ ಇಸಿಜಿ ಹೇಗೆ ಮಾಡುವುದು ಎಂಬುದನ್ನು ನೋಡಿ ಇಸಿಜಿ ಪರೀಕ್ಷೆ ಮಾಡಲು ಮುಂದಾಗುತ್ತಿರುವ ದೃಶ್ಯವನ್ನು ಕಾಣಬಹುದು. ರೋಗಿಯ ಸಂಬಂಧಿ ಸರಿಯಾದ ಜ್ಞಾನವಿಲ್ಲದೇ ಈ ರೀತಿ ಸ್ಕ್ಯಾನ್ ಮಾಡುವುದು ಸರಿಯಲ್ಲ ಎಂದು ಹೇಳಿದರೇ ಅದಕ್ಕೆ ಅಟೆಂಡರ್ ಯಾವುದೇ ಸಮಸ್ಯೆಯಾಗಲ್ಲ. ಇಸಿಜಿ ಮಾಡಲು ಬೇಕಾದ ಯಂತ್ರಗಳನ್ನು ಸರಿಯಾಗಿ ಅಳವಡಿಸಲಾಗಿದೆ ಎಂದು ಹೇಳಿ ಇಸಿಜಿ ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಜೋಧ್‌ಪುರ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಬಿಎಸ್‌ ಜೋಧಾ ರವರು ರಿಯಾಕ್ಟ್ ಆಗಿದ್ದು, ಈ ಕುರಿತು ತನಿಖೆ ನಡೆಸಿ, ಅಟೆಂಡರ್ ವಿರುದದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Next Post

Bank Jobs: ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಲ್ಲಿವೆ 85 ಹುದ್ದೆಗಳು, ಅರ್ಜಿ ಸಲ್ಲಿಸಲು ನ.27 ಕೊನೆ….!

Wed Nov 6 , 2024
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇದೀಗ ಹೊಸದಾಗಿ ಅಧಿಸೂಚನೆ (Bank Jobs) ಹೊರಡಿಸಿದ್ದು, ಸಹಾಯಕ ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು, ಕಿರಿಯ ಸಹಾಯಕರು, ಸಹಾಯಕರು/ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು 85 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಸೂಚನೆಯಲ್ಲಿ ಹೊರಡಿಸಿರುವ ಹುದ್ದೆಗಳ ಸಂಖ್ಯೆ, ವೇತನ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಈ ಮುಂದೆ ತಿಳಿಸಲಾಗಿದೆ. ಹುದ್ದೆಗಳು ಹಾಗೂ ವೇತನದ ವಿವರ: ಸಹಾಯಕ ವ್ಯವಸ್ಥಾಪಕರು […]
DCC Bank Recruitment 85 posts
error: Content is protected !!