ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು (Snake Video) ತುಂಬಾನೆ ವೈರಲ್ ಆಗುತ್ತಿರುತ್ತವೆ. ಕಾರು, ಬೈಕ್, ಬಾತ್ ರೂಂ, ಮನೆ ಹೀಗೆ ಎಲ್ಲಂದರೇ ಅಲ್ಲಿ ಹಾವುಗಳು ಸೇರಿಕೊಂಡಿರುವಂತಹ ವಿಡಿಯೋಗಳನ್ನು ನೋಡಿದ್ದೇವೆ. ಅದೇ ರೀತಿಯಲ್ಲಿ ಹಾವುಗಳನ್ನು ಹಿಡಿಯುವಂತಹ ವಿಡಿಯೋಗಳನ್ನು (Snake Video) ನೋಡಿದ್ದೇವೆ. ಇಲ್ಲೊಬ್ಬ ಮಹಿಳೆ ಮಾರ್ಕೆಟ್ ನಲ್ಲಿ ಪಡವಲ ಕಾಯಿಯನ್ನು ಖರೀದಿ ಮಾಡಿ ಹಿಡಿದುಕೊಂಡು ಬರುವಂತೆ ಹಾವೊಂದನ್ನು ಹಿಡಿದುಕೊಂಡಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Snake Video) ಆಗಿದೆ.
ಸದ್ಯ ಮಳೆಗಾಲವಾದ್ದರಿಂದ ಹಾವುಗಳು ಮನೆಗಳು, ವಾಹನಗಳು ಸೇರಿದಂತೆ ಹಲವು ಕಡೆ ಸೇರಿಕೊಳ್ಳುತ್ತಿರುತ್ತವೆ. ಹೀಗೆ ಸೇರಿಕೊಂಡ ಹಾವುಗಳನ್ನು ನೋಡಿದ ಕೂಡಲೇ ಭಯಭೀತರಾಗಿ ಅಲ್ಲಿದ್ದವರು ಓಡಿ ಹೋಗುತ್ತಿರುತ್ತಾರೆ. ಹಾವು ಕಾಣಿಸದೇ ಇರುವವರೆಗೂ ಏನು ಸಮಸ್ಯೆಯಿರೊಲ್ಲ. ಒಮ್ಮೆ ಹಾವು ಕಾಣಿಸಿದರೇ ಸಾಕು ಅಲ್ಲಿದ್ದವರ ಪ್ರಾಣ ಅಂಗೈಯಲ್ಲಿಟ್ಟುಕೊಂಡು ಕಿರಿಚಾಡುತ್ತಾರೆ. ಹಾವುಗಳು ನಮ್ಮ ಮೇಲೆ ದಾಳಿ ಮಾಡುತ್ತೆ ಅಂತಾ, ಅದೇ ಹಾವುಗಳು ತಮ್ಮ ಮೇಲೆ ಜನರು ದಾಳಿ ಮಾಡುತ್ತಾರೆ ಅಂತಾ ಹಾವುಗಳು ಭಯಪಡುತ್ತಿರುತ್ತವೆ. ಇದೀಗ ಹಾವಿಗೆ ಸಂಬಂಧಪಟ್ಟ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Snake Video) ಆಗಿದೆ.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.instagram.com/p/C9pmRgNvMUn/
ಕಚೇರಿಯೊಂದಕ್ಕೆ ಹಾವೊಂದು ಸೇರಿಕೊಂಡಿದೆ ಕಚೇರಿಯಲ್ಲಿದ್ದ ಕಂಪ್ಯೂಟರ್ ಹಿಣದೆ ಹಾವು ಅಡಗಿ ಕುಳಿತಿದೆ. ಅದನ್ನು ನೋಡಿದವರು ಶಾಕ್ ಆಗಿದ್ದಾರೆ. ಕೂಡಲೇ ಉರಗತಜ್ಞರಿಗೆ ಕರೆ ಮಾಡಿದ್ದಾರೆ. ಈ ವೇಳೆ ಬಂದಂತಹ ಓರ್ವ ಯುವತಿ, ತರಕಾರಿ ಮಾರುಕಟ್ಟೆಯಲ್ಲಿ ಪಡವಲ ಕಾಯಿಯನ್ನು ಹಿಡಿದುಕೊಳ್ಳುವಂತೆ (Snake Video) ಆ ಹಾವನ್ನು ನಗುತ್ತಾ ಹಿಡಿದಿದ್ದಾರೆ. ಆ ಯುವತಿ ಕೈಗಳ ಮೂಲಕ ಹಾವನ್ನು ಹಿಡಿದಿದ್ದಾರೆ. ಹಾವು ಸಿಕ್ಕ ಕೂಡಲೇ ಅಲ್ಲಿದ್ದವರು ನೆಮ್ಮದಿಯಿಂದ ನಿಟ್ಟಿಸುರು ಬಿಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Snake Video) ಆಗಿದೆ. ಈ ವಿಡಿಯೋ ನೋಡುತ್ತಿದ್ದರೇ ಹಾವು ಹಿಡಿಯುವುದರಲ್ಲಿ ಆಕೆ ತುಂಬಾನೆ ಜಾಣೆಯಿದ್ದಾಳೆ ಎಂಬುದು ತಿಳಿಯುತ್ತದೆ. ಬಿಲಾಸ್ ಪುರ್ ಎಂಬ ಪ್ರದೇಶಕ್ಕೆ ಸೇರಿದ ಅಜಿತ ಎಂಬ ಯುವತಿ (Snake Video) ಈ ವಿಡಿಯೋ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (Snake Video) ಈಕೆಯ ಕೆಲಸವೇ ಹಾವುಗಳನ್ನು ಹಿಡಿಯುವುದು. ಆಕೆಯ ಖಾತೆಯಲ್ಲಿ ಹೀಗೆ ಹಾವುಗಳನ್ನು ಹಿಡಿಯುವಂತಹ ವಿಡಿಯೋಗಳನ್ನು ನೋಡಬಹುದಾಗಿದೆ.