Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಮಂಜುಳ ಮದ್ದರೆಡ್ಡಿಯವರು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜ್ ಘೋಷಣೆ ಮಾಡಿದ್ದಾರೆ.
ಗುಡಿಬಂಡೆ ತಟ್ಟಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ಜ.13 ರಂದು ಆಯೋಜಿಸಲಾಗಿತ್ತು. ಈ ಚುನಾವಣೆಯಲ್ಲಿ ಮಂಜುಳ ಮದ್ದರೆಡ್ಡಿ ಸತತವಾಗಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೌರಮ್ಮ ರಾಮಲಿಂಗಾರೆಡ್ಡಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷೆ ಮಂಜುಳ ತಟ್ಟಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ದಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಕೃಷ್ಣಮ್ಮ ಟಿ.ಎಂ.ವೆಂಕಟೇಶಪ್ಪ, ನಾಗಮಣಿ ಟಿ.ಬಿ.ಮದ್ದರೆಡ್ಡಿ, ಶೋಭಾ ಟಿ.ಸಿ.ಮದರಡ್ಡಿ, ನಾರಾಯಣಮ್ಮ ಚಿಕ್ಕ ಕಾಮಯ್ಯ, ಕಾಂತಮ್ಮ ಲೇಟ್ ಲಕ್ಷ್ಮಣರೆಡ್ಡಿ, ವೆಂಕಟಲಕ್ಷ್ಮಮ್ಮ ಆದೆಪ್ಪ, ನರಸಮ್ಮ ವೆಂಕಟರಾಯಪ್ಪ ಹಾಜರಿದ್ದರು. ಈ ಸಮಯದಲ್ಲಿ ಮುಖಂಡರಾದ ರೋಗಿತ್ ಹಾರ್ಡ್‌ವೇರ್ ನ ಮದ್ದರೆಡ್ಡಿ, ನಂದೀಶ್, ಟಿ.ವಿ.ಮದ್ದರೆಡ್ಡಿ, ಮದರೆಡ್ಡಿ, ಟಿ ವಿ ವೆಂಕಟೇಶ, ಅಶೋಕ, ಲಕ್ಕೇನಹಳ್ಳಿ ನರಸಿಂಹಪ್ಪ, ನರಸಿಂಹಮೂರ್ತಿ, ಚೆಂಡೂರು ಚಿಕ್ಕನಾರಾಯಣಪ್ಪ, ಪೋತಲಪ್ಪ ಸೇರಿದಂತೆ ಹಲವರು ಇದ್ದರು.