Local News – ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ದೇಶದ ಕಟ್ಟಕಡೆಯ ವ್ಯಕ್ತಿ ಸ್ವಾತಂತ್ರವಾಗಿ ಜೀವಿಸಲು, ನಾನಾ ಸೌಲಭಗಳನ್ನು ಪಡೆಯುವಂತಹ ಹಕ್ಕು ಸಂವಿಧಾನ ನೀಡಿದೆ ಆದರೆ ದುರ್ದೈವ ಎಂದರೆ ದೆಹಲಿಯಲ್ಲಿರುವ ನಾಯಕರೊಬ್ಬರು ಸಂಸತ್‍ನಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ರವರ ಬಗ್ಗೆ ಕೀಳಾಗಿ ಮಾತನಾಡಿರುವುದಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೆಸರು ಪ್ರಸ್ಥಾಪಿಸದೆ ಪರೋಕ್ಷವಾಗಿ ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತಾ ಶಾ ರವರ ವಿರುದ್ದ ವಾಗ್ದಾಳಿ ನಡೆಸಿದ್ದಲ್ಲದೆ ಇಂತಹವರಿಗೆ ಮುಂದಿನ ದಿನಗಳಲ್ಲಿ ದುರ್ಗತಿ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.

ಭೀಮಾ ಕೋರೇಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಚಿಕ್ಕಬಳ್ಳಾಫುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ತಾ.ಪಂ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಭೀಮಾ ಕೋರೇಂಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಡೋಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿನ ಬಡವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಹಾಗೂ ನಾನಾ ಸೌಲತ್ತುಗಳನ್ನು ಪಡೆದು ವಿವಿಧ ಉನ್ನತ ಹುದ್ದೆಗಳನ್ನ ಅಲಂಕರಿಸಿರುವ ಅವಕಾಶವನ್ನು ಒದಗಿಸಿಕೊಟ್ಟಿರುವಂತಹ ಸಂವಿಧಾನವನ್ನು ಹಾಗೂ ಸಂವಿಧಾನ ರಚಿಸಿರುವ ಅಂಬೇಡ್ಕರ್ ರವರನ್ನು ಸಂಸತ್ತಿನಲ್ಲಿಯೇ ಕೇಂದ್ರ ಸಚಿವರೊಬ್ಬರು ಅವಹೇಳಕಾರಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು ಈ ರೀತಿಯಲ್ಲಿ ಕೀಳಾಗಿ ಮಾತನಾಡಿರುವವರಿಗೆ ಮುಂದಿನ ದಿನಗಳಲ್ಲಿ ಅವನತಿ ಕಾಣಲಿದ್ದಾರೆ ಎಂದರು.
ಕೋರೇಗಾಂವ್‍ನಲ್ಲಿ ದಲಿತರ ಶಿಕ್ಷಣಕ್ಕಾಗಿ ದಲಿತರು ಪ್ರಾಣ ತ್ಯಾಗ ಮಾಡಿದ ಸ್ಥಳವಾಗಿದೆ, 500 ಮಂದಿ ದಲಿತರು 30 ಸಾವಿರ ಸೈನಿಕರನ್ನು ಸದೆಬಡೆದ ಚರಿತ್ರೆ ಅಲ್ಲಿನ ದಲಿತರಿಗೆ ಇದೆ. ಇಂತಹ ರಕ್ತ ಹೊಂದಿರುವ ದಲಿತರು ಯಾವುದೆ ವಿಚಾರದಲ್ಲಿ ಹಿಂದೆ ಉಳಿಯವ ಪ್ರಶ್ನೆಯೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಇಂತಹ ಪ್ರಾಣ ತ್ಯಾಗ ಮಾಡಿರುವ ಸ್ಥಳದಲ್ಲಿ ವೀರ ಮರಣವನ್ನು ಹೊಂದಿದ ದಲಿತರ ನೆನಪಿಗಾಗಿ ಅಲ್ಲಿ ಸ್ಥೂಪವನ್ನು ನಿರ್ಮಾಣ ಮಾಡಲಾಗಿದೆ ಅದೇ ರೀತಿಯಲ್ಲಿ ಈ ಭಾಗದ ಜನರಿಗೆ ಇಂತಹ ಚರಿತ್ರೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಲ್ಲಿ ಸ್ಥೋಪವನ್ನು ನಿರ್ಮಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಹಿಂದಿನ ದಿನಗಳಲ್ಲಿ ಅನಿಷ್ಠ ಪದ್ದತಿಗಳಲ್ಲಿ ಒಂದಾಗಿರುವ ಜಾತಿ ಪದ್ದತಿ ದೇಶದಲ್ಲಿ ತಾಂಡವಾಡುತ್ತಿತ್ತು ಆದರೆ ಅಂಬೇಡ್ಕರ್ ರವರು ಸಂವಿಧಾನ ರಚಿಸಿದ ನಂತರ ದಿನಗಳಲ್ಲಿ ಕಾಲಕ್ರಮೇಣವಾಗಿ ಬದಲಾವಣೆ ಕಂಡು ಉತ್ತಮ ನಾಗರೀಕ ಸಮಾಜ ಬಂದಿದೆ ಎಂದ ಅವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗದ ಅಗತ್ಯವಿದೆ. ವಿದ್ಯೆ ಇಲ್ಲದೆ ಇದ್ದರೆ ಯಾವುದೇ ಸಮುದಾಯ ಯಾವುದೇ ರಿತಿಯ ಸಮಸ್ಯೆಗಳನ್ನು ಎದುರಿಸಲು ಸಾದ್ಯವಾಗಲ್ಲ ಶಿಕ್ಷಣದಿಂದ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ದಿ ಕಾಣಲು ಸಾದ್ಯ ಎಂದ ಅವರು ಅತೀ ಶೀಘ್ರದಲ್ಲಿಯೇ ಬಾಗೇಪಲ್ಲಿ ಪಟ್ಟಣದ ತಾ.ಪಂ ಆವರಣದಲ್ಲಿ ಇಡೀ ಜಿಲ್ಲೆಯಲ್ಲಿಯೇ ಮಾಧರಿಯಾಗಿ ಸುಸಜ್ಜಿತವಾಗಿ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗುವುದು ಎಂದು ಭರವಸೆ ನಿಡಿದರು.
ಭೀಮಾ ಕೋರೇಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ ಮಾತನಾಡಿ ಭೀಮಾ ಕೋರೇಗಾಂವ್‍ನಲ್ಲಿ ವಿದ್ಯೆ ಹಕ್ಕಿಗಾಗಿ ದಲಿತರು ಪ್ರಾಣ ತ್ಯಾಗ ಮಾಡಿರುವ ಚರಿತ್ರೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಅಂದು ನಡೆದ ಯುದ್ದದಲ್ಲಿ ಹುತಾತ್ಮರಾದವರನ್ನು ನೆನೆಯುವ ಏಕೈಕ ಉದ್ದೇಶದಿಂದ ಇಲ್ಲಿ ಸ್ಥೂಪವನ್ನು ನಿರ್ಮಿಸಿ ಪ್ರಥಮ ವರ್ಷದ ಭೀಮಾ ಕೋರೇಗಾಂವ್ ವಿಜಯೋತ್ಸವನ್ನು ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಪ್ರತಿ ವರ್ಷ ಜನವರಿ 1ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಮುದಾಯದವರಿಗೆ ಭರವಸೆ ನೀಡಿದರು.

ಇದಕ್ಕೂ ಮೊದಲು ಭೀಮಾ ಕೋರೇಗಾಂವ್ ಹುತಾತ್ಮರಾದ ದಲಿತರ ನೆನೆಪಿಗಾಗಿ ನಿರ್ಮಿಸಲಾಗಿದ್ದ ಸ್ಥೂಪಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಮನ ಸಲ್ಲಿಸಿದರು. ಇದೇ ವೇಳೆ ಕೋರೇಗಾಂವ್‍ನಲ್ಲಿ ನಡೆದ ಯುದ್ದದ ಬಗ್ಗೆ ಚಿಂತಾಮಣಿ ದೇವು ಮತ್ತು ಕಲಾತಂಡದವರಿಂದ ನೃತ್ಯ ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್, ಸದಸ್ಯ ಹಾಗೂ ವಕೀಲರ ಸಂಘದ ಅಧ್ಯಕ್ಷ ಎ. ನಂಜುಂಡಪ್ಪ, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ಜಿ.ಪಂ ಮಾಜಿ ಸದಸ್ಯ ನರಸಿಂಹಪ್ಪ, ದಲಿತ ಸಂಘಟನೆಯ ಉಪಾಧ್ಯಕ್ಷ ಕಡ್ಡೀಲು ವೆಂಕಟರಮಣ, ದಲಿತ ಮುಖಂಡರಾದ ಕೋಟಪ್ಪ, ಜೀವಿಕಾ ನಾರಾಯಣಸ್ವಾಮಿ, ಗಂಗುಲಪ್ಪ, ಲಕ್ಷ್ಮೀನರಸಿಂಹಪ್ಪ, ರಮೇಶ್ ಬಾಬು ಮತ್ತಿತರರು ಇದ್ದರು.