Dharmastala – ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಹ ಒಂದಾಗಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಶ್ರೀ ಮಂಜುನಾಥನ ದರ್ಶನಕ್ಕೆ ಪ್ರತಿನಿತ್ಯ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಧರ್ಮಸ್ಥಳಕ್ಕೆ ತೆರಳುವಂತಹ ಭಕ್ತರು ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ನಂತರ ಮಂಜುನಾಥನ ದರ್ಶನ ಪಡೆಯುತ್ತಾರೆ. ಆದರೆ ಈ ಪುಣ್ಯ ನದಿಗೆ ಗೋಮಾಂಸದ ತಾಜ್ಯವನ್ನು ಎಸೆಯಲಾಗಿದ್ದು, ಇದು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಹೇಳಬಹುದಾಗಿದೆ. ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಹಿಂದೂಗಳ ಹಬ್ಬಕ್ಕೆ ನಿಯಮಗಳನ್ನು ರೂಪಿಸುವ ರಾಜ್ಯ ಸರ್ಕಾರಕ್ಕೆ ಕಣ್ಣಿಲ್ಲವೇ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದಂತಹ ಯತ್ನಾಳ್, ಧರ್ಮಸ್ಥಳದ ಪವಿತ್ರ ಸನ್ನಿಧಿಯಲ್ಲಿರುವ ನೇತ್ರಾವತಿಯ ಉಪನದಿಯಲ್ಲಿ ಗೋ ಮಾಂಸದ ತ್ಯಾಜ್ಯವನ್ನು ಎಸೆದಿರುವುದು ಹೇಯಕೃತ್ಯವಾಗಿದೆ. ಗಣೇಶ ಚತುರ್ಥಿ, ದೀಪಾವಳಿ ಹಬ್ಬಗಳ ಆಚರಣೆಗೆ ಪುಗಟ್ಟಲೇ ನಿಯಮಾವಳಿ ರೂಪಿಸುವಂತಹ ಜಿಲ್ಲಾಡಳಿತ ಹಾಗೂ ಮಾಲಿನ್ಯ ಮಂಡಳಿಗೆ ಇದು ಕಣ್ಣಿಗೆ ಬೀಳದೇ ಇರೋದು ನಿಜಕ್ಕೂ ಆಶ್ಚರ್ಯ ತಂದಿದೆ. ಹಿಂದೂ ಪವಿರ ಸ್ಥಳದ ನೈಮರ್ಲಯ್ಯವನ್ನು ಕೆಡಿಸುತ್ತಿರುವವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಹಾಗೂ ನೇತ್ರವಾತಿಯ ಪಾವಿತ್ಯ್ರತೆಯನ್ನು ಕಾಪಾಡಲೂ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.
ನೇತ್ರಾವತಿ ನದಿಯು ಧರ್ಮಸ್ಥಳದ ಪಕ್ಕದಲ್ಲೇ ಹರಿಯುತ್ತದೆ. ಈ ನೇತ್ರಾವತಿ ನದಿಯ ಉಪನದಿಯಾದ ಮೃತ್ಯುಂಜಯ ನದಿಗೆ ಕಿಡಿಗೇಡಿಗಳು ಗೋಮಾಂಸದ ತಾಜ್ಯವನ್ನು ಮೂಟೆಗಳಲ್ಲಿ ಹಾಕಿ ಎಸೆದು ಹೋಗಿದ್ದಾರೆ. ಇದು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಕೆಲ ಕಿಡಿಗೇಡಿಗಳು ಬೇಕು ಅಂತಾನೇ ನೈರ್ಮಲ್ಯ ಮಾಡುತ್ತಾರೆ. ಮೂಟೆಗಳಲ್ಲಿ ಗೋವುಗಳ ತಲೆ ಹಾಗೂ ಮಾಂಸ ಸೇರಿದಂತೆ ತ್ಯಾಜ್ಯವನ್ನು ಎಸೆಯಲಾಗಿದೆ. ಈ ಕೃತ್ಯವೆಸಗಿರುವಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಭಕ್ತರು ಸೇರಿದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.