Virus – ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ವೈರಸ್ ಸೋಂಕು ಸೃಷ್ಟಿಸಿದ ಭೀಕರತೆಯಿಂದ ಇನ್ನೂ ಜನರು ಎಚ್ಚೆತ್ತುಕೊಂಡಿಲ್ಲ. ಈ ವೈರಸ್ ಕಾರಣದಿಂದ ಅನೇಕ ಕುಟುಂಬಗಳೇ ನಾಶವಾಗಿದೆ. ಈ ವೈರಸ್ ಕಾಣಿಸಿಕೊಂಡು ಸುಮಾರು 5 ವರ್ಷಗಳು ಕಳೆದಿದ್ದು, ಇದೀಗ ಕೋವಿಡ್ ಉಗಮ ಸ್ಥಾನವಾದ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು, 14 ವರ್ಷದ ಒಳಗಿನ ಮಕ್ಕಳನ್ನು ಈ ವೈರಸ್ ಕಾಡುತ್ತಿದೆಯಂತೆ. ಅನೇಕರು ಈಗಾಗಲೇ ವೈರಸ್ ಗೆ ತುತ್ತಾಗಿದ್ದಾರಂತೆ. ಆಸ್ಪತ್ರೆಗಳಲ್ಲಿ ಜನರು ಕಿಕ್ಕಿರಿದು ತುಂಬಿರುವ ವಿಡಿಯೋಗಳೂ ಸಹ ಹರಿದಾಡುತ್ತಿವೆ. ಕೆಲವರು ಹೇಳುವ ಪ್ರಕಾರ ಆಸ್ಪತ್ರೆಗಳು ಹಾಗೂ ಸ್ಮಶಾನಗಳೂ ಸಹ ತುಂಬಿಹೋಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗವು 5 ವರ್ಷಗಳ ಹಿಂದೆ ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿತ್ತು. ಜನರು ತತ್ತರಿಸಿ ಹೋಗಿದ್ದರು. ಕೋವಿಡ್ ವೈರಾಣು ಜಗತ್ತನ್ನು ಕಾಡಿದ 5 ವರ್ಷಗಳ ನಂತರ ಈಗ ಚೀನಾದಲ್ಲಿ(China) ಮತ್ತೊಂದು ನಿಗೂಢ ವೈರಾಣು ಕಂಡು ಬಂದಿದ್ದು, ಎಲ್ಲರಲ್ಲೂ ಆತಂಕ ಹೆಚ್ಚಿದೆ. HMPV ಮಾದರಿಯ ಜ್ವರದ ರೋಗಲಕ್ಷಣ ಹಾಗೂ Covid 19 ರಂತಹ ರೋಗಲಕ್ಷಣಗಳು ಈ ವೈರಸ್ ನಿಂದ ತಗುಲಲಿದೆಯಂತೆ. ಇನ್ನೂ ಈ ವೈರಸ್ ಹರಡುತ್ತಿದ್ದಂತೆ ಆರೋಗ್ಯಾಧಿಕಾರಿಗಳೂ ಸಹ ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರಂತೆ. SARS-CoV-2 (Covid-19) ಎಂಬ ಎಕ್ಸ್ ಖಾತೆಯೊಂದರಲ್ಲಿ, ‘ಚೀನಾ ಇನ್ಫ್ಲುಯೆನ್ಸ A, HMPV, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್‌ಗಳ ಉಲ್ಬಣವನ್ನು ಎದುರಿಸುತ್ತಿದೆ. ಆಸ್ಪತ್ರೆಗಳು ರೋಗಿಗಳು ಮತ್ತು ಸ್ಮಶಾನಗಳು ಮೃತದೇಹಗಳಿಂದ ತುಂಬಿ ಹೋಗಿವೆ ಎಂಬ ಪೋಸ್ಟ್ ಒಂದನ್ನು ಸಹ ಹಂಚಿಕೊಳ್ಳಲಾಗಿದೆ.
ಇನ್ನೂ ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಅಂತಾರಾಷ್ಟ್ರೀಯ ಏಜೆನ್ಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಲಾಗಿದೆ. ನಾವು ಪರಿಸ್ಥಿತಿಯನ್ನು ಹತೋಟಿಗೆ ತರುತ್ತೇವೆ. ಒಂದಷ್ಟು ಕ್ರಮಗಳನ್ನು ಈಗಲೇ ಕೈಗೊಳ್ಳುತ್ತೇವೆ. ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.
HMPV ವೈರಸ್‌ನ ಪ್ರಮುಖ ಲಕ್ಷಣಗಳು:
- ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಉಸಿರಾಟದ ತೊಂದರೆ.
- ಈ ವೈರಸ್ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಉಸಿರಾಟದ ಸೋಂಕುಗಳಿಗೆ ಕಾರಣವಾಗುವ ಇತರ ವೈರಸ್‌ಗಳನ್ನು ಹೋಲುತ್ತದೆ.
- ಸೋಂಕಿನ ಕಾವು ಅವಧಿಯು ಮೂರರಿಂದ ಆರು ದಿನಗಳಾಗಿವೆ. ಅಂದರೆ ಜನರು ಸೋಂಕಿಗೆ ಒಳಗಾದ ಮೂರರಿಂದ ಆರು ದಿನಗಳ ನಂತರ ಅದರ ರೋಗಲಕ್ಷಣಗಳನ್ನು ಎದುರಿಸುತ್ತಾರೆ.