1.3 C
New York
Sunday, February 16, 2025

Buy now

DYSP: ಪೊಲೀಸ್ ಕಚೇರಿಯಲ್ಲಿ ಮಹಿಳೆಯ ಜೊತೆ ರಾಸಲೀಲೆ ಪ್ರಕರಣ, ಮಧುಗಿರಿ DYSP ಅಮಾನತು…!

Table of Contents

DYSP – ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗದ DYSP ರಾಮಚಂದ್ರಪ್ಪ ತಮ್ಮ ಕಚೇರಿಯಲ್ಲಿಯೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಆರೋಪದ ಮೇರೆಗೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದೂರು ಕೊಡಲು ಬಂದ ಮಹಿಳೆಯೊಂದಿಗೆ DYSP ರಾಮಚಂದ್ರಪ್ಪ ತಮ್ಮ ಕಚೇರಿಯಲ್ಲಿ ರಾಸಲೀಲೆ ನಡೆಸಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿದ್ದು, ಈ ಬೆನ್ನಲ್ಲೆ DYSP ರಾಮಚಂದ್ರಪ್ಪ ರನ್ನು ಅಮಾನತ್ತು ಮಾಡಿ ಡಿಜಿ ಆದೇಶ ಹೊರಡಿಸಿದ್ದಾರೆ.

Tumkur DYSP Ramachandrappa Suspended 1

DYSP – ಘಟನೆಯ ಹಿನ್ನೆಲೆ: ಪಾವಗಡ ಮೂಲದ ಮಹಿಳೆಯೊಬ್ಬರು ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಮಾತುಕತೆ ನಡೆಸಲು ಹಾಗೂ ಕೆಲವೊಂದು ವಿಚಾರಗಳ ಕುರಿತು ವಿಚಾರಣೆ ನಡೆಸಬೇಕು ಅಂತಾ ಮಹಿಳೆಯನ್ನು DYSP ಕಚೇರಿಗೆ ಕರೆಸಲಾಗಿತ್ತು. ಈ ವೇಳೆ DYSP ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ತನಗೆ ನ್ಯಾಯ ಸಿಗಬೇಕೆಂಬ ದೃಷ್ಟಿಯಿಂದ ಮಹಿಳೆ ಒಪ್ಪಿಕೊಂಡಿರಬಹುದು ಎನ್ನಲಾಗಿದೆ. ನಂತರ DYSP ಮಹಿಳೆಯನ್ನು ಕಚೇರಿಯಲ್ಲಿದ್ದ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ರಾಸಲೀಲೆ ಆರಂಭಿಸಿದ್ದಾನೆ. ಈ ವೇಳೆ ಶೌಚಾಲಯದ ಕಿಟಕಿಯಿಂದ ಯಾರೋ ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಅನೇಕರು ಪೊಲೀಸ್ ಅಧಿಕಾರಿ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಈ ಬೆನ್ನಲ್ಲೇ DYSP ರಾಮಚಂದ್ರಪ್ಪ ರನ್ನು ಅಮಾನತ್ತು ಮಾಡಿ ಡಿಜಿ ಆದೇಶ ಹೊರಡಿಸಲಾಗಿದೆ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಂತಹ ಪೊಲೀಸರಿಂದ ನಿಷ್ಟಾವಂತ ಪೊಲೀಸರೂ ತಲೆ ತಗ್ಗಿಸುವಂತಾಗಿದೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles