Illegal Affair – ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಅನಾಹುತಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯಾಗಿದ್ದ ಆಂಟಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಯುವಕ ಕೆಲವು ದಿನಗಳಿಂದ ಆಕೆ ಪೋನ್ ರಿಸೀವ್ ಮಾಡಿಲ್ಲ ಅಂತಾ ಆಕೆಯ ಮನೆಗೆ ಹೋಗಿದ್ದಾನೆ. ಈ ನಡುವೆ ಆಂಟಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿಯಾಗಿ ಆಂಟಿ ಯುವಕನಿಗೆ ಚಾಕುವಿನಿಂದ ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಾಯಗೊಂಡ ಯುವಕನನ್ನು ಗೋಕಾಕ್ ನ ಸಂಗಮೇಶ್ವರದ ನಿವಾಸಿ ಆನಂದ್ ಎಂದು ಗುರ್ತಿಸಲಾಗಿದೆ. ಆನಂದ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು ದಿನಗಳಿಂದ ಆನಂದ್ ಗೋಕಾಕ್ ಮೂಲದ ಆಂಟಿಯೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ. ಕಳೆದ 15 ದಿನಗಳಿಂದ ಆಕೆ ಪೋನ್ ರಿಸೀವ್ ಮಾಡುತ್ತಿಲ್ಲ ಅಂತಾ ಆಕೆಯ ಮನೆಗೆ ಹೋಗಿದ್ದಾನೆ. ಈ ಸಮಯದಲ್ಲಿ ಆಂಟಿ ಹಾಗೂ ಯುವಕನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕೋಪಗೊಂಡ ಆಂಟಿ ಯುವಕನಿಗೆ ಚಾಕುವಿನಿಂದ ಇರಿದಿದ್ದಾಳೆ. ಈ ಘಟನೆಯಿಂದ ಗಾಯಗೊಂಡ ಯುವಕ ಆನಂದ್ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೂ ಮಹಿಳೆಯನ್ನು ಶೋಭಾ ಎಂದು ಗುರ್ತಿಸಲಾಗಿದ್ದು, ಆಕೆ ಗೋಕಾಕ್ ನ ಸಂಗಮೇಶ್ವರದಲ್ಲಿ ವಾಸವಿದ್ದಳು. ಈ ಹಿಂದೆ ಶೋಭಾ ಮದುವೆಯಾಗಿದ್ದು, ಮೊದಲನೆ ಗಂಡನಿಂದ ದೂರವಾಗಿದ್ದಳು. ಬಳಿಕ ಮಂಜುನಾಥ್ ಎಂಬಾತನನ್ನು 2ನೇ ಮದುವೆ ಆಗಿದ್ದಳು. ಆದರೂ ಕಳೆದ ಒಂದೂವರೆ ವರ್ಷದಿಂದ ಆನಂದ್ ಎಂಬ ಯುವಕನ ಜೊತೆಗೆ ಲವ್ವಿಡವ್ವಿ ಆಟ ಆಡುತ್ತಿದ್ದಳಂತೆ. ಆದರೆ ಕಳೆದ 15 ದಿನಗಳಿಂದ ಆನಂದ್ ಪೋನ್ ಮಾಡಿದರೂ ಶೋಭಾ ಪೋನ್ ಸ್ವಿಕರಿಸುತ್ತಿರಲಿಲ್ಲವಂತೆ. ಈ ಕಾರಣದಿಂದ ಕೋಪಗೊಂಡ ಆನಂದ್ ಕಳೆದೆರಡು ದಿನಗಳ ಹಿಂದೆ ಗೋಕಾಕ್ ಗೆ ಆಂಟಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದಾನೆ ಎನ್ನಲಾಗಿದೆ.
ಇನ್ನೂ ಶೋಭಳನ್ನು ನೋಡಲು ಹೋದ ಆನಂದ್ ಗೆ ಆಕೆ ತನ್ನ ಗಂಡನೊಂದಿಗೆ ಇರೋದು ಕಂಡಿದೆ. ಇದರಿಂದ ಕೋಪಗೊಂಡ ಆನಂದ್ ಚಾಕು ತೆಗೆದು ಶೋಭಾಳ ಕೈ ಹಾಗೂ ಹಣೆಗೆ ಇರಿದಿದ್ದಾನೆ. ನಂತರ ಶೋಭಾ ಹಾಗೂ ಆಕೆಯ ಗಂಡ ಇಬ್ಬರೂ ಆನಂದ್ ಕೈನಲ್ಲಿದ್ದ ಚಾಕು ಕಸಿದುಕೊಂಡು ಆನಂದ್ ನ ತಲೆ, ಹೊಟ್ಟೆ ಹಾಗೂ ಎದೆಗೆ ಇರಿದಿದ್ದಾರೆ. ಈ ಘಟನೆಯಲ್ಲಿ ಆನಂದ್ ಹಾಗೂ ಶೋಭಾ ಇಬ್ಬರಿಗೂ ಗಾಯಗಾಳಾಗಿದ್ದು ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಕುರಿತು ಗೋಕಾಕ್ ನಗರ ಠಾಣೆಯಲ್ಲಿ ಇಬ್ಬರ ಕಡೆಯಿಂದಲೂ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.