Friday, June 13, 2025
HomeSpecialPawan Kalyan: ಕುವೆಂಪು ಜನ್ಮದಿನದ ಅಂಗವಾಗಿ ಕುವೆಂಪು ರವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ ಆಂಧ್ರ ಡಿಸಿಎಂ...

Pawan Kalyan: ಕುವೆಂಪು ಜನ್ಮದಿನದ ಅಂಗವಾಗಿ ಕುವೆಂಪು ರವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್….!

Pawan Kalyan – ರಾಷ್ಟ್ರಕವಿ ಕುವೆಂಪು ರವರ ಜನ್ಮದಿನವನ್ನು ವಿಶ್ವ ಮಾನವ ದಿನವೆಂದು ಆಚರಿಸಲಾಗುತ್ತದೆ. ಡಿಸೆಂಬರ್‍ 29 ರಂದು ಕರ್ನಾಟಕದ ಅನೇಕ ಕಡೆ ಕುವೆಂಪು ರವರ 120 ನೇ ಜಯಂತಿಯನ್ನು ವಿಶ್ವ ಮಾನವ ದಿನವೆಂದು ಆಚರಣೆ ಮಾಡಲಾಗಿದೆ. ಇನ್ನೂ ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ (Pawan Kalyan) ರವರು ರಾಷ್ಟ್ರಕವಿ  ಕುವೆಂಪು (Kuvempu) ರವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ. ಈ ಸಂಬಂಧ ಅವರು ಹಂಚಿಕೊಂಡ ಟ್ವೀಟ್ ವೈರಲ್ ಆಗುತ್ತಿದ್ದು, ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Pawan Kalyan Tweet about Kuvempu 1

ಮನುಜಪಥ ವಿಶ್ವಪಥ ಎಂದು ಸಾರಿದ ರಾಷ್ಟ್ರಕವಿ ಕುವೆಂಪು ರವರ ಜಯಂತಿ ಅಂಗವಾಗಿ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ರವರು ಟ್ವೀಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ. ಕುವೆಂಪು ರವರ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡ ಸಾಹಿತ್ಯಕ್ಕೆ ಅವರ ಅಗಾಧ ಸೇವೆ ಕನ್ನಡ ನಾಡಿನಲ್ಲಿ ಅಜರಾಮರ. ನನಗೆ ಪರಿಸರವನ್ನು ಸಂರಕ್ಷಿಸುವ ಮಹತ್ವವನ್ನು ಹೇಳಿಕೊಟ್ಟ ಮತ್ತು ಪ್ರಕೃತಿಗೆ ಸಂಬಂಧಿಸಿದಂತೆ ಅವರ ಶಕ್ತಿಯುತ ಕವಿತೆವನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಕುವೆಂಪು ರವರ ಕೆಲವೊಂದು ಸಾಲುಗಳನ್ನು ಬರೆದು ಹಂಚಿಕೊಂಡಿದ್ದಾರೆ.

ಪವನ್ ಕಲ್ಯಾಣ್ ರವರ ಟ್ವೀಟ್ ಇಲ್ಲಿದೆ ನೋಡಿ: Click Here

My heartfelt tribute to Rastrakavi, Jnanpith Awardee, and Padma Vibhushan Sri Kuppalli Venkatappa Puttappa (Kuvempu) on his Birth Anniversary, as Karnataka celebrates Viswa Manava Dina in his honor. His immense service to Kannada literature will forever bloom in the land of Kannada. I recall his powerful poem on nature, Aranya, which taught me the importance of preserving the environment.

ಅರಣ್ಯ, ನಿನ್ನ ಸಡಿಲ ಚಂದನವಾಯು

ನನ್ನ ಚಿತ್ತವೇತ್ತಿ ಬಿಸಿದುಕೊಂಡಿತು!

ನಿನ್ನ ತೊರೆಗಳ ಪಾದಕಲಸ ಜಲವು

ನನ್ನ ದೇಹವನ್ನೂ ಧೋಯಿತು!

Through these lines, he beautifully captured the healing power of nature, leaving an indelible mark on all who read his work. His legacy will forever inspire us to protect and cherish the environment –  @PawanKalyan

ಇನ್ನೂ ನಟ ಪವನ್ ಕಲ್ಯಾಣ್ ರವರು ಇತ್ತೀಚಿಗೆ ಬೆಂಗಳೂರಿಗೆ ಅರಣ್ಯ ಇಲಾಖೆಯ ಕಾರ್ಯಕ್ರಮದ ನಿಮಿತ್ತ ಬಂದಿದ್ದರು. ಈ ವೇಳೆ ಅವರು ಕನ್ನಡದಲ್ಲೇ ಮಾತನಾಡಿದ್ದರು. ಕನ್ನಡ ಭಾಷೆ ಹಾಗೂ ಕುವೆಂಪು ರವರ ಕವಿತೆಯನ್ನು ಹೇಳಿದ್ದರು. ಅವರ ಕನ್ನಡಾಭಿಮಾನಕ್ಕೆ ಕನ್ನಡಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular