CM Siddaramaiah: ನನ್ನ ಹೆಸರಿಗೆ ಮಸಿ ಬಳಿಯಲು ವಿಪಕ್ಷಗಳು ಪ್ರತಿಭಟನೆ ಮಾಡುತ್ತಿವೆ ಎಂದ ಸಿಎಂ….!

ಕರ್ನಾಟಕ ರಾಜ್ಯದಲ್ಲಿ ಸದ್ಯ ವಾಲ್ಮೀಕಿ, ಮುಡಾ ಹಗರಣಗಳೂ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ನಡುವೆ ವಿಧಾನಸಭಾ ಕಲಾಪದಲ್ಲಿ ವಿಪಕ್ಷಗಳು ಅಹೋರಾತ್ರಿ ಧರಣಿ ಮಾಡುತ್ತಿವೆ. ಈ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ವಿಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ. ನನ್ನ ವಿರುದ್ದ ಹೊಟ್ಟೆ ಕಿಚ್ಚು ಹಾಗೂ ನನ್ನ ಹೆಸರಿಗೆ ಮಸಿ ಬಳಿಯಲು ಮುಡಾ ಹಗರಣದಲ್ಲಿ ರಾಜಕೀಯ ಮಾಡುತ್ತಿವೆ ಎಂದು ವಿಪಕ್ಷಗಳ ಅಹೋರಾತ್ರಿ ಧರಣಿಯ ವಿರುದ್ದ ಕಿಡಿಕಾರಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇರವಾಗಿ ಭಾಗಿಯಾಗಿದ್ದಾರೆ, ಅವರು ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಹೋರಾಟ ಮಾಡುತ್ತಿವೆ. ವಿಧಾನ ಪರಿಷತ್ ಕಲಾಪ ಆರಂಭವಾದ ಕೂಡಲೇ ವಿಪಕ್ಷಗಳು ಸದನದ ಬಾವಿಗಿಳಿದು ಮುಡಾ ಹಗರಣದ ಚರ್ಚೆಗೆ ಅವಕಾಶ ಕೇಳಿದರು. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಅವರು ವಿಷಯವೇ ಇಲ್ಲದನ್ನು ವಿಷಯ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ  ಮುಡಾ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ನಿಯಮಾನುಸಾರವೇ ಸೈಟ್ ಗಳನ್ನು ಪಡೆಯಲಾಗಿದೆ, ಎಲ್ಲವೂ ಕಾನೂನು ಪ್ರಕಾರವಾಗಿದೆ. ಮುಡಾ ಸೈಟು ಕೊಟ್ಟ ಸಮಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆದರೂ ನನ್ನ (CM Siddaramaiah) ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ದ ಕಿಡಿಕಾರಿದರು.

CM Siddaramaiah counter to bjp protest 0

ಇನ್ನೂ ಮುಡಾ ಪ್ರಕರಣ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತನಿಖೆ ಮಾಡುವಾಗ ಚರ್ಚೆ ಮಾಡುವುದು ಸರಿಯಲ್ಲ ವೆಂದು ಸಭಾಪತಿ ರೂಲಿಂಗ್ ಸಮರ್ಥನೆ ಮಾಡಿದ್ದಾರೆ. 50:50 ನಿಯಮ ಮಾಡಿದ್ದು ಬಿಜೆಪಿ ಅವಧಿಯಲ್ಲಿ, ಸೈಟ್ ತೆಗೆದುಕೊಂಡಿರುವುದರಲ್ಲಿ ನನ್ನ (CM Siddaramaiah) ತಪ್ಪಿಲ್ಲ. ನಮ್ಮ ಜಮೀನಿಗೆ ಪರ್ಯಾಯವಾಗಿ ಸೈಟ್ ಕೇಳಿದಾಗ ಮುಡಾ ಸೈಟ್ ಕೊಟ್ಟಿದೆ. ನಾವು ಇದೇ ಜಾಗದಲ್ಲಿ ಸೈಟ್ ಕೊಡಿ ಅಂತಾ ನಾವು ಕೇಳಿರಲಿಲ್ಲ. ಆದರೆ ಮುಡಾ ದವರೇ ಸೈಟ್ ಕೊಟ್ಟರು, ನಾವು ತೆಗೆದುಕೊಂಡೆವು. 40 ವರ್ಷಗಳಿಂದ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆಯಿಲ್ಲ, ಆದ್ದರಿಂದ ವಿಪಕ್ಷಗಳಿಗೆ ಹೊಟ್ಟೆ ಕಿಚ್ಚು ಪಟ್ಟು ಈ (CM Siddaramaiah) ರೀತಿ ಮಾತನಾಡುತ್ತಿದ್ದಾರೆ, ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಕ್ರೋಷ ಹೊರಹಾಕಿದರು.

Leave a Comment

Your email address will not be published. Required fields are marked *

Scroll to Top