Viral Video: ಕಾಲೇಜು ಕ್ಯಾಂಟಿನ್ ನಲ್ಲಿ ಬಟ್ಟೆ ಹರಿಯುವಂತೆ ಕಿತ್ತಾಡಿದ ಯುವತಿಯರು, ವೈರಲ್ ಆದ ವಿಡಿಯೋ….!

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾ ತುಂಬಾನೆ ಸದ್ದು ಮಾಡುತ್ತಿದೆ ಎನ್ನಬಹುದು. ವಿಶ್ವದ ಮೂಲೆ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ನಮ್ಮೆಲ್ಲರಿಗೂ ತಿಳಿದು ಬಿಡುತ್ತದೆ. ಇದೀಗ ವಿದ್ಯಾರ್ಥಿನೀಯರು ಇಬ್ಬರು ಕಾಲೇಜಿನ ಕ್ಯಾಂಟೀನ್ ನಲ್ಲಿ ಬಟ್ಟೆ ಹರಿಯುವಂತೆ (Viral Video) ಕಿತ್ತಾಡಿದ್ದಾರೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral Video) ಆಗುತ್ತಿದೆ.

amity university students fight 0

ಕಾಲೇಜು ಜೀವನ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಬಹುದು. ಉನ್ನತ ಶಿಕ್ಷಣ ಪಡೆದು ಒಳ್ಳೆಯ ಹುದ್ದೆಗಳ, ಸ್ಥಾನಗಳನ್ನು ಗಳಿಸುವ ನಿಟ್ಟಿನಲ್ಲಿ ಕಾಲೇಜುಗಳಿಗೆ ಸೇರುತ್ತಾರೆ. ಆದರೆ ಕೆಲವರು ಕಾಲೇಜಿಗೆ ಸೇರೋದು ಎಂಜಾಯ್ ಮಾಡೋಕೆ ಎಂದೂ ಸಹ ಹೇಳಲಾಗುತ್ತದೆ. ಕಾಲೇಜಿನ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರಿಬ್ಬರ ಜಗಳ ತಾರಕಕ್ಕೇರಿದೆ. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಚೇರ್‍, ಟೇಬಲ್ ಬೀಳಿಸಿಕೊಂಡು ಬಟ್ಟೆ ಹರಿದಾಡಿಕೊಳ್ಳುವ ಹಂತಕ್ಕೆ ತಲುಪಿದೆ. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ (Viral Video)  ಸದ್ದು ಮಾಡುತ್ತಿದೆ.

https://x.com/the_silent_gaze/status/1816317374150169021

ಇನ್ನೂ ಈ ಘಟನೆ ಉತ್ತರ ಪ್ರದೇಶದ ನೋಯ್ಡಾದ ಅಮಿತಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವಿಶ್ವವಿದ್ಯಾಲಯದ ಕ್ಯಾಂಟೀನ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಇರುವಾಗಲೇ ಹುಡುಗಿಯರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿನೀಯರು ಬಟ್ಟೆ ಹಿಡಿದುಕೊಂಡು ಕಿತ್ತಾಡಿದ್ದಾರೆ. ಆದರೆ ಗಲಾಟೆಯನ್ನು ಬಿಡಿಸಬೇಕಾದ ಇತರೆ ವಿದ್ಯಾರ್ಥಿಗಳು, ಸಿನೆಮಾ ನೋಡಿದಂತೆ ಎಂಜಾಯ್ ಮಾಡಿದ್ದಾರೆ. ಇಬ್ಬರ ನಡುವೆ ಗಲಾಟೆಯನ್ನು ಸ್ಪರ್ಧೆ ನಡೆದಾಗ ಚಿಯರ್‍ ಅಪ್ ಮಾಡುವಂತೆ ಮಾಡಿದ್ದಾರೆ. ಜೊತೆಗೆ ಗಲಾಟೆಗೆ ಪ್ರಚೋದಿಸಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈ ಘಟನೆಯ ವಿಡಿಯೋ ಅಲ್ಲಿನ ವಿದ್ಯಾರ್ಥಿಗಳೇ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

amity university students fight 1

ಇನ್ನೂ ಈ ವಿಡಿಯೋ ವೈರಲ್ (Viral Video)  ಆಗುತ್ತಿದ್ದಂತೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಅಮಿಟಿ ವಿಶ್ವವಿದ್ಯಾಲಯ, ಸೆಕ್ಟರ್ -126 ಕೊಟ್ವಾಲಿ, ನೋಯ್ಡಾದಲ್ಲಿ ಈ ಗಲಾಟೆ ಮಾಡಿದ ಇಬ್ಬರೂ ಹುಡುಗಿಯರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಿಡಿಯೋಗೆ ಸೋಷಿಯಲ್ ಮಿಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *

Scroll to Top