Brahamana Maha Sabha: ಸಮುದಾಯದ ಸಂಘಟನೆಗಾಗಿ ಹಮ್ಮಿಕೊಂಡ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ: ನಾಗಭೂಷಣರಾವ್

ಗುಡಿಬಂಡೆ: ಸಮುದಾಯದ ಸಂಘಟನೆ, ಸನಾತನ ಧರ್ಮ ಉಳಿವು ಸೇರಿದಂತೆ ಸಮುದಾಯದ ಕೆಲ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಜು.28 ರಂದು ಭಾನುವಾರ ಚಿಕ್ಕಬಳ್ಳಾಪುರದ ಶ್ರೀ ಹರ್ಷೋದಯ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಮ್ಮೇಳನ (Brahamana Maha Sabha) ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮುದಾಯದ ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾಗಭೂಷಣರಾವ್ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಮಹಾಸಭಾ (Brahamana Maha Sabha) ವತಿಯಿಂದ ಈ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ವಿವಿಧೆಡೆ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಈ ಸಮ್ಮೇಳನ ಸಂಘಟನೆಯ ದೃಷ್ಟಿಯಿಂದ ಒಂದು ಮೈಲಿಗಲ್ಲಾಗಲಿದೆ. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಕಾರ್ಯಕ್ರಮದ ಕೇವಲ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗದೇ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಸಹ ಇಡಲಾಗುತ್ತದೆ. ಸಮುದಾಯದ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗಿಯಾದಾಗ ನಮ್ಮ ಬೇಡಿಕೆಗಳು ಸಹ ಸರ್ಕಾರಕ್ಕೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಜು.28 ರಂದು ಸಮುದಾಯದ ಪ್ರತಿಯೊಬ್ಬರು ಸಮ್ಮೇಳನದಲ್ಲಿ ಭಾಗಿಯಾಗಬೇಕೆಂದರು.

Brahamana sammelana meeting 0

ಬಳಿಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (Brahamana Maha Sabha) ಸಹ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಸಂಘಟನೆ, ಸ್ವಾವಲಂಬನೆ, ಸಂಸ್ಕಾರ ಈ ಮೂರು ಧ್ಯೆಯಗಳೊಂದಿಗೆ ವಿಪ್ರ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನದೊಂದಿಗೆ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ದಂಪತಿಗಳಿಗೆ ವಿಶೇಷವಾದ ರೀತಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಾತಿ, ವಿದ್ಯಾರ್ಥಿ ವೇತನ, ಆದಾಯ ಪ್ರಮಾಣ ಪತ್ರದ ಬಗ್ಗೆ ಸಹ ಸಮ್ಮೇಳನದಲ್ಲಿ ಚರ್ಚಿಸಿ ರಾಜ್ಯಾಧ್ಯಕ್ಷರ ಮೂಲಕ ಸರ್ಕಾರದಲ್ಲಿ ಬೇಡಿಕೆ ಇಡಲಾಗುತ್ತದೆ. ಈ ಸಮ್ಮೇಳನ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲು ಎಲ್ಲಾ ಸಿದ್ದತೆಗಳು ನಡೆದಿದೆ. ಈ ಸಮ್ಮೇಳನದಲ್ಲಿ (Brahamana Maha Sabha) ರಾಜ್ಯ ಮಟ್ಟದ ಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಹಾಜರಾಗಲಿದ್ದಾರೆ ಎಂದರು.

ಈ ಪತ್ರಿಕಾಗೋಷ್ಟಿಯಲ್ಲಿ (Brahamana Maha Sabha) ಎಲ್ಲೋಡು ಬ್ರಾಹ್ಮಣರ ಸಂಘದ ಅಧ್ಯಕ್ಷ  ಸೂರ್ಯಪ್ರಕಾಶ್ ಹಾಗೂ ಗುಡಿಬಂಡೆ ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಶ್ರೀನಿವಾಸ ಕಾರ್ತಿಕ್ ಎಲ್ಲಾ ಬ್ರಾಹ್ಮಣ ಬಂಧುಗಳು ಸಮ್ಮೇಳನದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಯಾಗಿಸಲು ಮನವಿ ಮಾಡಿದರು. ಈ ಸಮಯದಲ್ಲಿ ಗುಡಿಬಂಡೆ ತಾಲ್ಲೂಕು ಬ್ರಾಹ್ಮಣರ ಸಂಘದ ಕಾರ್ಯದರ್ಶಿ ಜೆ.ವಿ.ಮಂಜುನಾಥ್, ಉಪಾಧ್ಯಕ್ಷ ಗು.ನ.ನಾಗೇಂದ್ರ ಭಟ್, ಜಂಟಿ ಕಾರ್ಯದರ್ಶಿ ನಿರಂಜನ್, ನಿರ್ದೇಶಕ ರಾದ ವೇಣುಗೋಪಾಲ, ಶ್ರೀಧರ್, ರಮೇಶ್, ವಿಪ್ರ ವನಿತಾ ಸಂಘದ ಅಧ್ಯಕ್ಷೆ ಲಕ್ಷ್ಮಿ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

Next Post

Traffic Rules: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಿದ್ಯಾರ್ಥಿಯಿಂದ ದಂಡ ಕಟ್ಟಿಸಿಕೊಂಡು, ಪುನಃ ವಾಪಸ್ ನೀಡಿದ ಪೊಲೀಸ್, ಯಾಕೆ ಗೊತ್ತಾ?

Fri Jul 26 , 2024
Traffic Rules ವಾಹನ ಸವಾರರು ಕೆಲವೊಮ್ಮೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣದಿಂದ ಅಂತಹ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿರುತ್ತಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ತುಂಬಾನೆ ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಆದರೆ ಇದೀಗ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಮಹಿಳಾ ಪಿ.ಎಸ್.ಐ ಅಧಿಕಾರಿಯೊಬ್ಬರು ಹಿಡಿದು ದಂಡ ವಿಧಿಸಿದ್ದಾರೆ. ಬಳಿಕ ಆ ಪೊಲೀಸ್ ಅಧಿಕಾರಿ ದಂಡ ಕಟ್ಟಿಸಿಕೊಂಡ ಹಣ ವಾಪಸ್ಸು ಕೊಟ್ಟು, ಸಹೋದರಿಯಂತೆ ಪ್ರೀತಿಯ ಅಪ್ಪುಗೆ ಕೊಟ್ಟ ಸಂತೈಸಿದ್ದಾರೆ. ಅಷ್ಟಕ್ಕೂ […]
lady police officer helped
error: Content is protected !!