ಹೈನುಗಾರಿಕೆಯಲ್ಲಿ ಲಾಭ ಸಿಗಬೇಕಾದರೆ ರೈತರು ಹೆಚ್ಚಿನ ಪ್ರಮಾಣದ ಹಾಲನ್ನು ಸರಬರಾಜು ಮಾಡಬೇಕು ಹಾಗೂ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು, ಇಲ್ಲದಿದ್ದರೆ ರೈತರಿಗೆ 5 ರೂಪಾಯಿ ಹೆಚ್ಚುವರಿ ಹಣ ಸಿಗುವುದಿಲ್ಲ, ಇದರಿಂದ ಸಂಘಕ್ಕೂ ನಷ್ಟ ಉಂಟಾಗಲಿದೆ ಎಂದು ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸತ್ಯನಾರಾಯಣ ತಿಳಿಸಿದರು.
ಚಿಕ್ಕಬಳ್ಳಾಪುರ (Chikkaballapura News) ತಾಲೂಕಿನ ಬೊಮ್ಮಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2023-2024 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘದಿಂದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಉತ್ಪಾಧಿಸಿ ಮಾರಾಟ ಮಾಡಿದರೆ ನಿಮ್ಮ ಸಂಘವು ಅಭಿವೃದ್ಧಿ ಹೊಂದಲಿದೆ, ಜೊತೆಗೆ ತಾವು ಆರ್ಥಿಕವಾಗಿ ಅಭಿವೃದ್ಧಿ ಆಗುತ್ತೀರಿ ಎಂದರು.
ನಂತರ ಕಮ್ಮಗುಟ್ಟಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಿ. ಟಿ. ಪೃಥ್ವಿರಾಜ್ ರೆಡ್ಡಿ ಮಾತನಾಡಿ (Chikkaballapura News) ಸಂಘವು ಅಭಿವೃದ್ಧಿಯತ್ತ ಮುಂದುವರಿಯುತ್ತಿದ್ದು ಇನ್ನೂ ಹೆಚ್ವಿನ ಸಂಖ್ಯೆಯಲ್ಲಿ ಸದಸ್ಯರು ಶ್ರಮ ಹಾಕಿದರೆ ಹೆಚ್ಚಿನ ಹಾಲು ಮಾರಾಟ ಮಾಡುವ ಮೂಲಕ ಆದಾಯಗಳಿಸಲು ಅವಕಾಶವಿದ್ದು ಸಹಾಯದನ ಸೇರಿದಂತೆ ವಿವಿಧ ಸೌಲಭ್ಯ ಪಡೆಯುವಂತೆ ಕರೆ ನೀಡಿದರು.

ನಂತರ ಸಂಘದ ಅಧ್ಯಕ್ಷ ಜಯರಾಮರೆಡ್ಡಿ ಮಾತನಾಡಿ ಸರ್ಕಾರದ (Chikkaballapura News) ನೌಕರರಿಗೆ ಸಿಗುವಂತ ಸೌಲಭ್ಯಗಳು ನಮ್ಮ ಒಕ್ಕೂಟದ ಸದಸ್ಯರಿಗೂ ಸಿಗುತ್ತದೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳ ಬೇಕೆಂದರು. ಹೆೈನು ಉದ್ಯಮವನ್ನು ಲಾಭದಾಯಕವಾಗಿ ಬಳಸಲು ಹೈನೋದ್ಯಮದ ಬೆಳವಣಿಗೆಗೆ ಅವಶ್ಯಕತೆ ಇರುವ ಎಲ್ಲಾ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಸದಸ್ಯರಿಗೆ ಒಕ್ಕೂಟ ರೈತರಿಗೆ ಸಹಕಾರ ನೀಡುತ್ತಾ ಬಂದಿದೆ. ಸದಸ್ಯರು ನಮ್ಮ (Chikkaballapura News) ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಿದ್ದರಿಂದ ಸಂಘಕ್ಕೆ ಲಾಭವಾಗಿದೆ ಇದರಲ್ಲಿ ಇಂತಿಷ್ಟು ಹಣವನ್ನು ರೈತರಿಗೆ ಬೋನಸ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ ರೈತರು ಕೃಷಿಯಲ್ಲಿ ನಷ್ಟ ಅನುಭವಿಸಿದರೂ ಹೈನುಗಾರಿಕೆಯಿಂದ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ನೂರುಲ್ಲಾ (Chikkaballapura News) ಮಾತನಾಡಿ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 2,99,020 ಲೀಟರ್ ಹಾಲು ಖರೀದಿಸಿದ್ದು, ಸ್ಥಳೀಯವಾಗಿ 13,632 ಲೀಟರ್ ಹಾಲು ಮಾರಾಟವಾಗಿದೆ, ಒಕ್ಕೂಟಕ್ಕೆ 2,86,388 ಲೀಟರ್ ಹಾಲನ್ನು ಒಕ್ಕೂಟಕ್ಕೆ ಪೂರೈಕೆ ಮಾಡಲಾಗಿದ್ದು ಸಂಘವು ಈ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ ನ4 ಲಕ್ಷ ಆದಾಯವನ್ನು ಗಳಿಸಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಶ್ವತಪ್ಪ ಮಾತನಾಡಿ ಸಂಘವನ್ನು (Chikkaballapura News) ಕಳೆದ 3 ದಶಕಗಳಿಂದ ಉತ್ತಮವಾಗಿ ನಡೆಸಿಕೊಂಡು ಬಂದಿದ್ದು ಎಂತಹದ್ದೇ ಸಮಸ್ಯೆ ಬಂದರು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಂಡು ಹೋಗಿ ಸಂಘದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿ, ಕೆಲಸ ಮಾಡುವಾಗ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಳೆದ (Chikkaballapura News) 40 ವರ್ಷಗಳಿಂದ ಹಾಲು ಉತ್ಪಾದಕರ ಸಂಘದಲ್ಲಿ ಹಾಲು ಪರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾದ ಡೈರಿ ಅಶ್ವತಪ್ಪ ನವರಿಗೆ ಸನ್ಮಾನ ಮಾಡಿ ಮುಂದಿನ ಜೀವನ ಸುಖ, ಸಂತೋಷ ಹಾಗೂ ನೆಮ್ಮದಿಯಿಂದ ಇರಲಿ ಎಂದು ಶುಭ ಹಾರೈಸಿದರು. ಈ ಸಮಯದಲ್ಲಿ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎ. ಕೇಶವ, ಮುಖಂಡರಾದ ಪ್ರಭಾಕರ್ ರೆಡ್ಡಿ, ಇ. ಕೃಷ್ಣಪ್ಪ, ಚಿಕ್ಕನಾರಪನಹಳ್ಳಿ ಬೈರಾರೆಡ್ಡಿ, ದಿನ್ನಹಳ್ಳಿ ಅಶ್ವತ್ತಪ್ಪ, ಉಪ್ಪಗುಟ್ಟಹಳ್ಳಿ ನಾರಾಯಣಪ್ಪ, ಬೊಮ್ಮಗಾನಹಳ್ಳಿ ಸೀತಾರಾಮಪ್ಪ, ಬಿ. ಎಂ. ದೇವರಾಜ್, ಬಿ. ಎ. ಮುರಳಿ, ಆನಂದಮ್ಮ, ರೇಣುಮಾಕಾಲಹಳ್ಳಿ ವಜೀರ್ ಅಹಮದ್, ಆರ್. ಎಸ್. ಮಹಾಬೂಬ್, ಆರ್. ಚೊಕ್ಕನಹಳ್ಳಿ ರವಿಕುಮಾರ್, ಕಮ್ಮಲಮೋರಿ ದ್ಯಾವಮ್ಮ, ಬೊಮ್ಮಗಾನಹಳ್ಳಿ ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಎನ್.ನಾಗೇಶ್, ಎಸ್.ಸುಬ್ರಮಣ್ಯ, ಚಂದ್ರಶೇಖರ್, ಸಂಘದ ಸರ್ವ ಸದಸ್ಯರು, ಹಲವು ಮುಖಂಡರು, ಗ್ರಾಮಸ್ಥರು ಸೇರಿದಂತೆ ಹಲವರು ಭಾಗವಹಿಸಿದ್ದರು.