Local News: ಕಾನೂನು ಚೌಕಟ್ಟಿನಲ್ಲಿ ವಕಾಲತ್ತು ನಡೆಸುವಂತೆ ನ್ಯಾಯಾಧೀಶ ಮಂಜುನಾಥಚಾರಿ ಸಲಹೆ

ಕಾನೂನಿನ ಚೌಕಟ್ಟಿನಲ್ಲಿ ವಕಾಲತ್ತು ನಡೆಸಿ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ವಕೀಲರ ಜವಾಬ್ದಾರಿ ಎಂದು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ  ಮಂಜುನಾಥಚಾರಿ ತಿಳಿಸಿದರು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.

ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇಬ್ಬರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು  ಪ್ರಾಮಾಣಿಕ ಹಾಗೂ ಸತ್ಯ ಧೋರಣೆಯೊಂದಿಗೆ  ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕಾನೂನಿನ ಚೌಕಟ್ಟಿನಲ್ಲಿ ವಕಾಲತ್ತು ವಹಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ಪ್ರತಿಯೊಬ್ಬ ವಕೀಲರ ಕರ್ತವ್ಯ ಎಂದರು. ಈ ವೇಳೆ  ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಹಿರಿಯ ವಕೀಲರಾದ ಕರುಣಾಸಾಗರರೆಡ್ಡಿ, ಅಪ್ಪಿಸ್ವಾಮಿ, ಎ,ಜೆ.ನಂಜಪ್ಪ, ಅಲ್ಲಾಭಕಾಷ್, ಮಂಜುನಾಥ್,  ಸುಧಾಕರ್, ಬಾಲು, ನಾಗಭೂಷಣ್ ಮತ್ತಿತರರು ಇದ್ದರು.

ಬಾಗೇಪಲ್ಲಿಯ ವಿವಿಧ ವಾರ್ಡ್ ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ರವೀಂದ್ರ ಪಟ್ಟಣದ ವಿವಿದ ವಾರ್ಡುಗಳಿಗೆ ಬೇಟಿ ನೀಡಿ ವಿವಿದ ಕಾಮಗಾರಿಗಳನ್ನು ಪರಿಶೀಲಿಸಿದರು. ನಗರೋತ್ಥಾನ 15ನೇ ಹಣಕಾಸು ಯೋಜನೆ ಮತ್ತು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪಟ್ಟಣದಲ್ಲಿ ನಡೆಸಲಾಗಿರುವ ವಿವಿದ ಕಾಮಗಾರಿಗಳನ್ನು  ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

Bagepalli Local news 1

ಬಾಗೇಪಲ್ಲಿ ಪಟ್ಟಣದ 3, 8, 9, 10, 20 ಮತ್ತು 21ನೇ ವಾರ್ಡ್‍ಗಳಲ್ಲಿ ನಡೆದಿರುವ  ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ  10ನೇವಾರ್ಡಿನ ಜಿಪಂ ಕಚೇರಿ ಎದುರಿನ ರಸ್ತೆಯಲ್ಲಿ ಕೆಲ ತಿಂಗಳ ಹಿಂದೆಯಷ್ಠೆ  ರಸ್ತೆ ಕಾಮಗಾರಿ ಮಾಡಿದ್ದರು. ಈ ಸಿಸಿ ರಸ್ತೆಯಲ್ಲಿ ಮಳೆ ಬಂದರೆ ಕೆರೆಯಂತೆ ನೀರು ನಿಂತುಕೊಳ್ಳುತ್ತಿದ್ದು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿ ನಿವಾಸಿ ಬಿ.ಎಸ್.ಸುರೇಶ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತಕ್ಷಣವೇ ನೀರು ರಸ್ತೆಯಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡುವಂತೆ ಹಾಗೂ ಪಟ್ಟಣದ 21 ನೇ ವಾರ್ಡಿನಲ್ಲಿ ಒಳಚರಂಡಿ ಮ್ಯಾನ್ ಹೋಲ್ ರಸ್ತೆಗಿಂತ ಎತ್ತರದಲ್ಲಿದ್ದು ಓಡಾಡಕ್ಕೆ ತೊಂದರೆಯಾಗುತ್ತಿದೆ ಎಂದು ನಿವಾಸಿ ಬಿ.ಸಾವಿತ್ರಮ್ಮ  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ  ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ  ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕರಾದ ಮಾಧವಿ, ಮುಖ್ಯಾಧಿಕಾರಿ ಶ್ರೀನಿವಾಸ್, ಎಇಇ ಬಿ.ಎಸ್.ರಘುನಾಥ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Next Post

Health News: ಮಧ್ಯಾಹ್ನ ನಿದ್ದೆ ಮಾಡೋದು ಒಳ್ಳೆಯದಾ ಅಥವಾ ಕೆಟ್ಟದಾ? ತಿಳಿಯಲು ಈ ಸುದ್ದಿ ಓದಿ….!

Wed Oct 9 , 2024
ಮನುಷ್ಯನ ಆರೋಗ್ಯಕ್ಕೆ ನಿದ್ದೆ ತುಂಬಾನೆ ಮುಖ್ಯವಾದದು. ಸಾಮಾನ್ಯವಾಗಿ ನಿದ್ದೆ ಕೆಟ್ಟರೇ ಆರೋಗ್ಯ ಸಹ ಕೆಡುತ್ತದೆ (Health News)  ಎಂದು ಹೇಳಲಾಗುತ್ತದೆ. ಇನ್ನೂ ಅನೇಕರಿಗೆ ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುವ ಅಭ್ಯಾಸವನ್ನು ಸಹ ರೂಡಿಸಿಕೊಂಡಿರುತ್ತಾರೆ. ಇದೀಗ ಮಧ್ಯಾಹ್ನ ನಿದ್ದೆ ಮಾಡುವುದು (Health News) ಒಳ್ಳೆಯದಾ ಅಥವಾ ಕೆಟ್ಟದಾ ಎಂಬುದರ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಮಧ್ಯಾಹ್ನದ ಊಟ ಸೇವನೆ ಮಾಡಿದ ಬಳಿಕ ನಿದ್ದೆ (Health […]
Day time sleeping
error: Content is protected !!