HomeNationalViral News: ಸಿಕ್ಕಿಬಿದ್ದ ಕಳ್ಳನನ್ನು ಹೊಡೆಯುವಾಗ ಹಸಿವು ಎಂದು ಕೂಗಿದಾಗ ಕೈಯಾರೆ ಊಟ ತಿನ್ನಿಸಿದ ಯುವಕ…!

Viral News: ಸಿಕ್ಕಿಬಿದ್ದ ಕಳ್ಳನನ್ನು ಹೊಡೆಯುವಾಗ ಹಸಿವು ಎಂದು ಕೂಗಿದಾಗ ಕೈಯಾರೆ ಊಟ ತಿನ್ನಿಸಿದ ಯುವಕ…!

ತಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳರು ಸಿಕ್ಕಿಬಿದ್ದಾಗ ಕೆಲವರು ಪೊಲೀಸರಿಗೆ ಒಪ್ಪಿಸುತ್ತಾರೆ, ಮತ್ತೆ ಕೆಲವರು ಸ್ಥಳದಲ್ಲಿರುವ ಕಂಬಗಳಿಗೆ ಕಟ್ಟಿಹಾಕಿ ಹೊಡೆದು ಬಳಿಕ ಪೊಲೀಸರಿಗೆ ಒಪ್ಪಿಸುವಂತಹ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಇದೀಗ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದು, ಆತನನ್ನು ಕಂಬಕ್ಕೆ ಕಟ್ಟಿಹಾಕಿ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಈ ವೇಳೆ ಆತ ನನಗೆ ಹಸಿವಾಗ್ತಾ ಇದೆ ಏನಾದರೂ ಕೊಡಿ ಎಂದು ಕೇಳಿದ್ದಾನೆ. ಈ ವೇಳೆ ಆ ಗ್ರಾಮದ ಯುವಕರು ಊಟ ಮಾಡಿಸಿದ್ದಾರೆ. ಬಳಿಕ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ ಈ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ನಲ್ಗೋಂಡ ಜಿಲ್ಲೆಯ ನಾರ್ಕೆಟ್ ಪಲ್ಲಿ ಮಂಡಲದ ಎಲ್ಲರೆಡ್ಡಿಗುಡೆಂ ಎಂಬ ಗ್ರಾಮಕ್ಕೆ ಕುಖ್ಯಾತ ಕಳ್ಳ ಪೋಗಲ್ ಗಣೇಶ್ ಎಂಬಾತ ಕಳ್ಳತನ ಮಾಡಲು ಬಂದಿದ್ದಾನೆ. ಕಳ್ಳತನ ಮಾಡಲು ಬಂದ ಆತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮತ್ತೆ ಕಳ್ಳತನ ಮಾಡ್ತೀಯಾ ಅಂತಾ ಕಂಬಕ್ಕೆ ಕಟ್ಟಿ ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಆ ಕಳ್ಳ ನನಗೆ ಹಸಿವಾಗ್ತಾ ಇದೆ ತಿನ್ನಲು ಏನಾದರೂ ಕೊಡಿ ಎಂದು ಕಳ್ಳ ಬೇಡಿಕೊಂಡಿದ್ದಾನೆ. ಈ ವೇಳೆ ತಮಗಿದ್ದ ಕೋಪವನ್ನು ಬಿಟ್ಟು ಮಾನವೀಯತೆ ಮರೆದಿದ್ದಾರೆ. ಗ್ರಾಮದ ಯುವಕರು ಮಾನವೀಯತೆಯಿಂದ ಕಳ್ಳನಿಗೆ ಕೈಯಾರೆ ಊಟ ಮಾಡಿಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ https://x.com/sayesekhar/status/1835904751843614819

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಸಾಯಿ ಶೇಖರ್‍ ಅಂಗಾರ (sayesekhar) ಎಂಬವರು ತಮ್ಮ ಎಕ್ಸ್‌ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗ್ರಾಮದ ಯುವಕರು ಹಸಿವು ಎಂದ ಕಳ್ಳನಿಗೆ ಯುವಕನೋರ್ವ ತನ್ನ ಕೈಯಾರೆ ಊಟ ತಿನ್ನಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಹಸಿವು ಎಂದಾಗ ಕಳ್ಳನಿಗೂ ಊಟ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಯುವಕರ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular