Wednesday, July 9, 2025
HomeNationalPawan Kalyan: ಪ್ರಾಯಶ್ಚಿತ್ತ ದೀಕ್ಷೆ ತೆಗೆದುಕೊಂಡ ಪವನ್ ಕಲ್ಯಾಣ್, 11 ದಿನಗಳ ಕಾಲ ದೀಕ್ಷೆ ಮಾಡಲಿದ್ದಾರೆ...

Pawan Kalyan: ಪ್ರಾಯಶ್ಚಿತ್ತ ದೀಕ್ಷೆ ತೆಗೆದುಕೊಂಡ ಪವನ್ ಕಲ್ಯಾಣ್, 11 ದಿನಗಳ ಕಾಲ ದೀಕ್ಷೆ ಮಾಡಲಿದ್ದಾರೆ ಆಂಧ್ರ ಡಿಸಿಎಂ….!

ಸದ್ಯ ದೇಶದಾದ್ಯಂತ ತಿರುಪತಿ ಲಡ್ಡು ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕೋಟ್ಯಂತರ ಜನತೆ ಪೂಜಿಸುವಂತಹ ತಿಮ್ಮಪ್ಪನ ದೇವಾಲಯದಲ್ಲಿ ನೀಡುವಂತಹ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂಬುದು ದೃಢವಾಗಿರುವುದು ವರದಿಗಳಿಂದ ತಿಳಿದುಬಂದಿದೆ. ಈ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ (Tirupati Tirumala) ಕ್ಷಮೆ ಕೋರಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಸೆ.22 ರಿಂದ  11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಳ್ಳಲಿದ್ದಾರೆ. ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಕ್ರೋಷ ಹೊರಹಾಕಿದ್ದಾರೆ.

Pawan Kalyan Deeksha for tirupati 1

ತಿರುಪತಿ ಎಂದ ಕೂಡಲೇ ನೆನಪಿಗೆ ಬರುವುದು ತಿರುಪತಿ ತಿಮ್ಮಪ್ಪನ ಪವಿತ್ರ ಪ್ರಸಾದ ಲಡ್ಡು. ತಿರುಪತಿ ಲಡ್ಡು ಸಾಕ್ಷಾತ್ ಶ್ರೀನಿವಾಸನ ಪ್ರಸಾದ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆ. ಈ ನಂಬಿಕೆಗೆ ಶ್ರದ್ಧೆಗೆ ಇದೀಗ ಅಪಚಾರವಾಗಿದೆ. ಕೆಲವೇ ದಿನಗಳಲ್ಲಿ ನಡೆಯಲಿರೋ ಬ್ರಹ್ಮಮಹೋತ್ಸವಕ್ಕೆ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಟಿಟಿಡಿ ಆಹ್ವಾನಿಸಿದೆ. ಈ ನಡುವೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ ದೀಕ್ಷೆಯನ್ನು ತೊಟ್ಟಿದ್ದಾರೆ. ಕಳೆದ ಸೆ.11 ರಂದು ಗುಂಟೂರು ಜಿಲ್ಲೆಯ ನಂಬೂರು ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಾಲಯಲ್ಲಿ ವಿಶೇಷ ಪೂಜೆ ನಡೆಸಿ ದೀಕ್ಷೆ ಪಡೆದುಕೊಂಡಿದ್ದಾರೆ. 11 ದಿನಗಳ ದೀಕ್ಷೆ ಮುಗಿದ ಬಳಿಕ ತಿರುಮಲಕ್ಕೆ ತೆರಳಿ ಶ್ರೀನಿವಾಸನ ದರ್ಶನ ಪಡೆದುಕೊಳ್ಳುವುದಾಗಿ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.

watch this video: click here

ಇನ್ನೂ ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಏಡುಕೊಂಡಲವಾಡಾ, ಕ್ಷಮಿಸು ಎಂದು ತಮ್ಮ ಪೋಸ್ಟ್ ಶುರು ಮಾಡಿದ್ದಾರೆ. 11 ದಿನಗಳ ಕಾಲ ಪ್ರಾಯಶ್ಚಿತ್ತ ದೀಕ್ಷೆ ಪಡೆದುಕೊಳ್ಳುತ್ತಿದ್ದೇನೆ. ಪರಮ ಪವಿತ್ರವಾಗಿ ಭಾವಿಸುವಂತಹ ತಿರುಮಲ ಲಡ್ಡು ಪ್ರಸಾದ ಕಳೆದ ಆಡಳಿತದಲ್ಲಿ ಅಶುದ್ಧವಾಗಿದೆ. ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಜನಾಂಗಕ್ಕೆ ಕಳಂಕ. ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬೆರಸಿರುವುದು ಗೊತ್ತಾದ ಕ್ಷಣವೇ ನಾನು ಬೆಚ್ಚಿಬಿದ್ದೆ. ತಪ್ಪಿತಸ್ಥ ಎಂಬ ಭಾವನೆ, ಜನರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ನನಗೆ ಆರಂಭದಲ್ಲಿ ಇಂತಹ ತೊಂದರೆಗಳು ಗಮನಕ್ಕೆ ಬಾರದಿರುವುದು ತುಂಬಾ ನೋವು ತಂದಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಅದರ ಭಾಗವಾಗಿಯೇ ನಾನು ಪ್ರಾಯಶ್ಚಿತ ದೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದೇನೆ. 22 ಸೆಪ್ಟೆಂಬರ್‍ 2024 ರ ಭಾನುವಾರ ಗುಂಟೂರು ಜಿಲ್ಲೆಯ ನಂಬೂರು ನಲ್ಲಿರುವ ಶ್ರೀ ದಶಾವತಾರ ವೆಂಕಟೇಶ್ಚರ ಸ್ವಾಮಿ ಆಯಲದಲ್ಲಿ ದೀಕ್ಷೆ ಪಡೆದುಕೊಳ್ಳುತ್ತೇನೆ. 11 ದಿನಗಳ ಕಾಲ ದೀಕ್ಷೆಯನ್ನು ಮುಗಿಸಿ ಬಳಿಕ ಶ್ರೀ ವೆಂಕಟೇಶ್ವರನ ದರ್ಶನ ಪಡೆದುಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

Pawan Kalyan Deeksha for tirupati 2

ಇನ್ನೂ ತಿರುಮಲ ತಿರುಪತಿ ದೇವಸ್ಥಾನ ಎಂಬ ವ್ಯವಸ್ಥೆಯಲ್ಲಿ ಭಾಗವಾದ ಬೋರ್ಡ್ ಸದಸ್ಯರು, ಉದ್ಯೋಗಿಗಳೂ ಸಹ ಅಲ್ಲಿನ ತಪ್ಪುಗಳನ್ನು ಪತ್ತೆಹಚ್ಚದೇ ಇರುವುದು, ಪತ್ತೆ ಹಚ್ಚಿದರೂ ಸಹ ಬಾಯಿ ಬಿಚ್ಚದೇ ಇರುವುದು ಅಂದಿನ ರಾಕ್ಷಸ ಪಾಲನೆಗೆ ಭಯಪಟ್ಟು ಸುಮ್ಮನಾದರೇ? ಎಂದು ಮತಷ್ಟು ವಿಚಾರವನ್ನು ಹಂಚಿಕೊಂಡು ಕೊನೆಯದಾಗಿ ಧರ್ಮೋ ರಕ್ಷತಿ ರಕ್ಷಿತಃ ಎಂದು ತಮ್ಮ ಟ್ವೀಟ್ ಮುಕ್ತಾಯಗೊಳಿಸಿದ್ದಾರೆ. ಇನ್ನೂ ಆಂಧ್ರ ಸರ್ಕಾರ ವೈಎಸ್‍ಆರ್‌ಪಿ ಸರ್ಕಾರದ ಅವಧಿಯಲ್ಲಿ ತಿರುಪತಿ (Tirupati) ದೇವಸ್ಥಾನದ ಲಡ್ಡುಗಳ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ವಿವಾದದ ಬೆನ್ನಲ್ಲೇ ದೇವಾಲಯದ ಅವ್ಯವಹಾರಗಳ ತನಿಖೆಗೆ ಸಿಎಂ ಎನ್.ಚಂದ್ರಬಾಬು ನಾಯ್ಡು (Chandrababu Naidu) ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular