HomeNationalInstagram Love Story : ಮಗನಿಗಿಂತ 5 ವರ್ಷ ಚಿಕ್ಕವನಾದ 14ರ ಬಾಲಕನನ್ನೇ ಪಟಾಯಿಸಿ ಮದುವೆ...

Instagram Love Story : ಮಗನಿಗಿಂತ 5 ವರ್ಷ ಚಿಕ್ಕವನಾದ 14ರ ಬಾಲಕನನ್ನೇ ಪಟಾಯಿಸಿ ಮದುವೆ ಡ್ರಾಮಾ ಆಡಿದ 4 ಮಕ್ಕಳ ತಾಯಿ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ. ರೀಲ್ಸ್‌, ಚಾಟ್‌, ಲೈಕ್‌, ಫಾಲೋಗಳ ಮೂಲಕ ಆರಂಭವಾಗುವ ಪರಿಚಯಗಳು ಕೆಲವೊಮ್ಮೆ ಅಚ್ಚರಿಯ ತಿರುವು ಪಡೆಯುತ್ತವೆ. ಇದೀಗ ಉತ್ತರ ಪ್ರದೇಶದಲ್ಲಿ (Instagram Love Story) ನಡೆದಿರುವ ವಿಚಿತ್ರ ಘಟನೆಯೊಂದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. 40 ವರ್ಷದ ಮಹಿಳೆ ಮತ್ತು 14 ವರ್ಷದ ಬಾಲಕನ ನಡುವೆ ಇನ್‌ಸ್ಟಾಗ್ರಾಂ ಮೂಲಕ ಬೆಳೆದ ಸ್ನೇಹ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

40-year-old woman and teenage boy involved in viral Instagram love story controversy

Instagram Love Story – ಇನ್‌ಸ್ಟಾಗ್ರಾಮ್ ಲೈಕ್‌ನಿಂದ ಶುರುವಾದ ‘ಲವ್ ಜರ್ನಿ’

ಉತ್ತರ ಪ್ರದೇಶದ ಗೋರಾಖ್‌ಪುರ ಮೂಲದ 40 ವರ್ಷದ ಮಹಿಳೆಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದೆಂದರೆ ಭಾರಿ ಕ್ರೇಜ್. ಹೀಗೆ ರೀಲ್ಸ್ ನೋಡುವಾಗ ತಮಿಳುನಾಡಿನ ಚೆನ್ನೈ ಮೂಲದ 14 ವರ್ಷದ ಅಪ್ರಾಪ್ತ ಬಾಲಕನ ಪ್ರೊಫೈಲ್ ಈಕೆಗೆ ಕಣ್ಣಿಗೆ ಬಿದ್ದಿದೆ. ಆರಂಭದಲ್ಲಿ ಕೇವಲ ವಿಡಿಯೋಗಳಿಗೆ ಪರಸ್ಪರ ಲೈಕ್ ಮಾಡುತ್ತಿದ್ದ ಇವರಿಬ್ಬರು, ಆನಂತರ ಇನ್‌ಬಾಕ್ಸ್‌ನಲ್ಲಿ ಚಾಟಿಂಗ್ ಮಾಡಲು ಶುರು ಮಾಡಿದ್ದಾರೆ. ದಿನ ಕಳೆದಂತೆ ಈ ಪರಿಚಯ ಅತಿಯಾದ ಕೌಟುಂಬಿಕ ಮತ್ತು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವ ಮಟ್ಟಿಗೆ ಬೆಳೆದಿದೆ.

ಹಿರಿಯ ಮಗನಿಗಿಂತಲೂ ಪ್ರಿಯಕರ 5 ವರ್ಷ ಚಿಕ್ಕವನು!

ಈ ವಿಲಕ್ಷಣ ಪ್ರೇಮ ಕಥೆಯ ಅಸಲಿ ಟ್ವಿಸ್ಟ್ ಇರುವುದೇ ಇಲ್ಲಿದೆ. ಪ್ರೀತಿಯ ಜಾಲದಲ್ಲಿ ಬಿದ್ದಿರುವ ಈ 40 ವರ್ಷದ ಮಹಿಳೆಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ವಿಶೇಷ ಎಂದರೆ ಆಕೆಯ ಮೊದಲನೇ ಮಗನಿಗೆ ಸದ್ಯ 19 ವರ್ಷ ವಯಸ್ಸು. ಅಂದರೆ ಈಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ಚೆನ್ನೈನ ಬಾಲಕ, ಈಕೆಯ ಸ್ವಂತ ಮಗನಿಗಿಂತಲೂ (Instagram Love Story) ಬರೋಬ್ಬರಿ 5 ವರ್ಷ ಚಿಕ್ಕವನು! ಮಗನ ವಯಸ್ಸಿನ ಹುಡುಗನೊಂದಿಗೆ ಮಹಿಳೆ ರೋಮ್ಯಾನ್ಸ್ ಚಾಟಿಂಗ್ ನಡೆಸಿರುವ ವಿಷಯ ಸದ್ಯ ನೆಟ್ಟಿಗರ ನಿದ್ದೆ ಕೆಡಿಸಿದೆ.

ಏನಿದು ಹೈಡ್ರಾಮಾ? ಚೆನ್ನೈನಲ್ಲಿ ತಂದೆಯ ಜೊತೆಗಿದ್ದ ಬಾಲಕ ಇತ್ತೀಚೆಗೆ ಮಹಿಳೆಯ ಓವರ್ ಆಕ್ಟಿಂಗ್‌ನಿಂದ ಬೇಸತ್ತು ಮೆಸೇಜ್ ಮಾಡುವುದನ್ನು ನಿಲ್ಲಿಸಿದ್ದಾನೆ. ಇದರಿಂದ ಸೈಕೋ ತರ ಆಡಿದ ಮಹಿಳೆ, ಆತನನ್ನು ಬ್ಲ್ಯಾಕ್‌ಮೇಲ್ ಮಾಡಲು ನೇರವಾಗಿ ಯುಪಿಯ ನೌತನವಾ ಪೊಲೀಸ್ ಸ್ಟೇಷನ್‌ಗೆ ಓಡಿ ಹೋಗಿದ್ದಾಳೆ. Read this also : “ಇನ್‌ಸ್ಟಾಗ್ರಾಮ್ ಪ್ರೇಯಸಿಯನ್ನು ನೋಡಲು ಹೋದ ಗಂಡನಿಗೆ ಕಾದಿತ್ತು ಘೋರ ಆಘಾತ; ಮಂದಿರದಲ್ಲಿದ್ದ ಯುವತಿಯನ್ನು ನೋಡಿ ಶಾಕ್…!

“ನಮಗೆ ಮದುವೆಯಾಗಿದೆ” ಎಂದು ಸುಳ್ಳು ಕಥೆ ಕಟ್ಟಿದ ಕಿಲಾಡಿ ಲೇಡಿ!

ಪೊಲೀಸ್ ಠಾಣೆಗೆ ಬಂದು ಹೈಡ್ರಾಮಾ ಸೃಷ್ಟಿಸಿದ ಮಹಿಳೆ, “ನಮ್ಮಿಬ್ಬರಿಗೂ ಮದುವೆಯಾಗಿದೆ, ಈಗ ಆತ ನನ್ನನ್ನು ಬಿಟ್ಟು ಮೋಸ ಮಾಡುತ್ತಿದ್ದಾನೆ” ಎಂದು ದೂರು ನೀಡಿದ್ದಾಳೆ. ವಿಷಯ ಕೇಳಿ ಬೆಚ್ಚಿಬಿದ್ದ ಪೊಲೀಸರು ತಕ್ಷಣವೇ ತಮಿಳುನಾಡಿನಲ್ಲಿದ್ದ ಬಾಲಕ ಮತ್ತು ಆತನ ತಂದೆಯನ್ನು ಉತ್ತರ ಪ್ರದೇಶಕ್ಕೆ ಕರೆಸಿದ್ದಾರೆ. (Instagram Love Story) ಠಾಣೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಮದುವೆಯಾಗಿರುವ ಬಗ್ಗೆ ಕಾನೂನಾತ್ಮಕ ದಾಖಲೆಗಳನ್ನು ಕೇಳಿದಾಗ ಮಹಿಳೆ ತಡಬಡಾಯಿಸಿದ್ದಾಳೆ. ಯಾವುದೇ ಪ್ರೂಫ್ ಇಲ್ಲದ ಕಾರಣ, ಬಾಲಕನನ್ನು ಹೆದರಿಸಿ ತನ್ನ ಬಳಿ ಇಟ್ಟುಕೊಳ್ಳಲು ಆಕೆ ಮದುವೆಯ ಸುಳ್ಳು ಕಥೆ ಕಟ್ಟಿದ್ದು ತನಿಖೆಯಲ್ಲಿ ಸಾಬೀತಾಗಿದೆ.

40-year-old woman and teenage boy involved in viral Instagram love story controversy

ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here
ಕೊನೆಗೂ ಬುದ್ಧಿ ಕಲಿಸಿ ಕಳುಹಿಸಿದ ಪೊಲೀಸರು

ಬಾಲಕ ಅಪ್ರಾಪ್ತನಾಗಿದ್ದರಿಂದ (Instagram Love Story) ಮತ್ತು ಇಬ್ಬರ ಕುಟುಂಬದವರು ಪರಸ್ಪರ ದೂರು ನೀಡಲು ನಿರಾಕರಿಸಿದ್ದರಿಂದ ಪೊಲೀಸರು ಪ್ರಕರಣವನ್ನು ಕೌನ್ಸೆಲಿಂಗ್ ಮೂಲಕ ಮುಕ್ತಾಯಗೊಳಿಸಿದ್ದಾರೆ. “ಇನ್ನೊಮ್ಮೆ ಆ ಬಾಲಕನಿಗೆ ಮೆಸೇಜ್ ಮಾಡಿದರೆ ಅಥವಾ ಸಂಪರ್ಕಿಸಲು ಯತ್ನಿಸಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ” ಎಂದು ಮಹಿಳೆಗೆ ಖಡಕ್ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ. ಸದ್ಯ ಈ ವಿಚಿತ್ರ ಇನ್‌ಸ್ಟಾಗ್ರಾಮ್ ಲವ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದು, ಅಪರಿಚಿತರ ಜೊತೆ ಸೋಶಿಯಲ್ ಮೀಡಿಯಾ ಸ್ನೇಹ ಎಷ್ಟು ಡೇಂಜರ್ ಎಂಬುದಕ್ಕೆ ಸಾಕ್ಷಿಯಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular