Snake CPR Video : ಸತ್ತೇ ಹೋಯಿತು ಅಂದುಕೊಂಡಿದ್ದ ಹಾವಿಗೆ ಪೈಪ್ ಮೂಲಕ ಉಸಿರು ನೀಡಿ ಕಾಪಾಡಿದ ಯುವಕ! ಗೂಸ್‌ಬಂಪ್ಸ್ ತರಿಸುತ್ತೆ ಈ ವಿಡಿಯೋ

ದೇಶಾದ್ಯಂತ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೂರ್ಯನ ಪ್ರಖರತೆಗೆ ಜನಸಾಮಾನ್ಯರೇ ಮನೆಯಿಂದ ಹೊರಬರಲು ಹೆದರುತ್ತಿರುವ ಈ ಸಮಯದಲ್ಲಿ, ಪಾಪ ಮೂಕ ಪ್ರಾಣಿಗಳ ಪಾಡು ಹೇಳತೀರದು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Snake CPR Video) ಆಗುತ್ತಿರುವ ಒಂದು ವಿಡಿಯೋ, ಬಿಸಿಲಿನ ತಾಪಕ್ಕೆ ಪ್ರಾಣಿಗಳು ಹೇಗೆ ನರಳುತ್ತಿವೆ ಮತ್ತು ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

Viral Snake CPR video shows a man saving a dehydrated snake by giving it air and water during intense heatwave conditions.

Snake CPR Video – ಬಿಸಿಲ ಝಳಕ್ಕೆ ತತ್ತರಿಸಿದ ಮೂಕ ಜೀವಿಗಳು

ಎಲ್ಲಿ ನೋಡಿದರೂ ಬಿಸಿಲಿನದ್ದೇ ಕಾರುಬಾರು. ರೋಹಿಣಿ ಕಾರ್ತೆ ಬೇರೆ ಶುರುವಾಗಿದ್ದು, ಬಿಸಿಲಿನ ತಾಪಕ್ಕೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಅತ್ಯವಸರ ಇದ್ದರೆ ಮಾತ್ರ ಜನ ಮನೆಯಿಂದ ಹೊರಬರುವಂತಾಗಿದೆ. ಇನ್ನು ಕುಡಿಯಲು ನೀರಿಲ್ಲದೆ, ಆಹಾರವಿಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಕೆಲವೊಮ್ಮೆ ನೀರು ಸಿಗದೆ ಪ್ರಾಣಿಗಳು ಪ್ರಾಣವನ್ನೇ ಬಿಡುತ್ತಿವೆ. ಇಂತಹ ಕಠಿಣ ಸಮಯದಲ್ಲಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಾವೊಂದಕ್ಕೆ ವ್ಯಕ್ತಿಯೊಬ್ಬರು ಮರುಜೀವ ನೀಡಿದ ಘಟನೆ ಎಲ್ಲರ ಗಮನ ಸೆಳೆದಿದೆ.

ಸಾಯುತ್ತಿದ್ದ ಹಾವಿಗೆ ‘ಸಿಪಿಆರ್’ ಮಾಡಿದ ಆಪತ್ಬಾಂಧವ!

ಹೌದು, ಬಿಸಿಲಿನ ತಾಪಕ್ಕೆ ಸಿಲುಕಿ ಹಾವೊಂದು ಪ್ರಜ್ಞೆ ತಪ್ಪಿ ಬಿದ್ದಿತ್ತು. ಅದಕ್ಕೆ ಚಲಿಸಲು ಕೂಡ ಆಗುತ್ತಿರಲಿಲ್ಲ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ತಕ್ಷಣವೇ ಹಾವಿನ ನೆರವಿಗೆ ಬಂದಿದ್ದಾರೆ. ಸ್ವಲ್ಪವೂ ಭಯಪಡದೆ ಆ (Snake CPR Video) ಹಾವನ್ನು ಕೈಯಲ್ಲಿ ಹಿಡಿದು, ಪ್ಲಾಸ್ಟಿಕ್ ಪೈಪ್ ಒಂದನ್ನು ಅದರ ಬಾಯಿಗೆ ಇಟ್ಟು ತನ್ನ ಬಾಯಿಂದ ಉಸಿರು (ಗಾಳಿ) ಊದಿದ್ದಾರೆ. ಬಳಿಕ ರಬ್ಬರ್ ಪೈಪ್ ಮೂಲಕ ಹಾವಿಗೆ ನಿಧಾನವಾಗಿ ನೀರು ಕುಡಿಸಿದ್ದಾರೆ. Read this also : ಬರಿಗೈಯಲ್ಲಿಯೇ ಹೆಡೆಬಿಚ್ಚಿದ ನಾಗರಹಾವನ್ನು ಹಿಡಿದ ಬ್ಯೂಟಿ, ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡಿದ ವಿಡಿಯೋ..!

ಮರುಜೀವ ಪಡೆದ ಹಾವು

ಆ ವ್ಯಕ್ತಿ ಹಾವಿಗೆ ಗಾಳಿ ಊದಿ, ನೀರುಣಿಸಿ, ಅದು ಚೇತರಿಸಿಕೊಳ್ಳುವಂತೆ ಸ್ವಲ್ಪ ಅತ್ತಿತ್ತ ಕದಲಿಸಿದ್ದಾರೆ. ಆಶ್ಚರ್ಯವೆಂಬಂತೆ ಬಹಳ ಹೊತ್ತಿನ ನಂತರ ಆ ಹಾವಿನಲ್ಲಿ ಮತ್ತೆ ಚಲನೆ ಕಂಡುಬಂದಿದೆ. ಅದು ನಿಧಾನವಾಗಿ ಕಣ್ತೆರೆದು ನೀರು ಕುಡಿದಿದೆ. ತನ್ನ ಉಸಿರಾಟವನ್ನು ಸಹಜ ಸ್ಥಿತಿಗೆ ತಂದುಕೊಂಡಿದೆ. ಇದನ್ನು ನೋಡಿದ ಸುತ್ತಲಿನ ಜನರ ಸಂತೋಷಕ್ಕೆ (Snake CPR Video) ಪಾರವೇ ಇರಲಿಲ್ಲ. ತನ್ನ ಪ್ರಾಣವನ್ನು ಪಣಕ್ಕಿಟ್ಟು ಯುವಕ ಮಾಡಿದ ಈ ಕೆಲಸಕ್ಕೆ ತಕ್ಕ ಫಲ ಸಿಕ್ಕಿತು. ಜೀವ ಉಳಿಸಿಕೊಂಡ ಆ ಹಾವು ನಿಧಾನವಾಗಿ ಹರಿದುಕೊಂಡು ಗಿಡಗಂಟಿಗಳತ್ತ ಸಾಗಿದೆ.

Viral Snake CPR video shows a man saving a dehydrated snake by giving it air and water during intense heatwave conditions.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್, ನೆಟ್ಟಿಗರು ಫಿದಾ!

ಈ ಇಡೀ ಘಟನೆಯನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ (Viral Video Here) ಹಂಚಿಕೊಂಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ವಿಡಿಯೋದಲ್ಲಿ ಲಭ್ಯವಿಲ್ಲ. ಆದರೆ, (Snake CPR Video) ವಿಡಿಯೋ ನೋಡಿದ ಪ್ರತಿಯೊಬ್ಬರೂ ಆ ಯುವಕನ ಧೈರ್ಯ ಮತ್ತು ಕರುಣೆಯನ್ನು ಕೊಂಡಾಡುತ್ತಿದ್ದಾರೆ.

“ಹ್ಯಾಟ್ಸ್ ಆಫ್ ಭೈಯ್ಯಾ.. ಮೂಕ ಜೀವಕ್ಕೆ ಮರುಜೀವ ನೀಡಿದ ನೀವು ನಿಜಕ್ಕೂ ಗ್ರೇಟ್” ಎಂದು ನೆಟ್ಟಿಗರು ಕಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ. ಈ ವಿಡಿಯೋ ನೋಡುವಾಗ ಯಾರಿಗಾದರೂ ಮೈ ಜುಮ್ ಎನ್ನುವುದು ಖಂಡಿತ!

Leave a Comment

Your email address will not be published. Required fields are marked *

Scroll to Top