HomeNationalPratapgarh School Incident : ಯುಪಿಯಲ್ಲಿ ಆಘಾತಕಾರಿ ಘಟನೆ, ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ್ದಕ್ಕೆ ಶಿಕ್ಷಕಿಯ ಕೂದಲು...

Pratapgarh School Incident : ಯುಪಿಯಲ್ಲಿ ಆಘಾತಕಾರಿ ಘಟನೆ, ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ್ದಕ್ಕೆ ಶಿಕ್ಷಕಿಯ ಕೂದಲು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಪೋಷಕರು…!

ಒಂದು ಕಾಲವಿತ್ತು, ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಹೊಡೆದರೆ, ಮನೆಗೆ ಬಂದಾಗ ಪೋಷಕರು ಮತ್ತೇರಡು ಪೆಟ್ಟು ಕೊಡುತ್ತಿದ್ದರು. ಆದರೆ ಈಗಿನ ಕಾಲಘಟ್ಟದಲ್ಲಿ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿದೆ. ಮಕ್ಕಳಿಗೆ ಶಿಕ್ಷಕರು ಕನಿಷ್ಠ ಬುದ್ಧಿವಾದ ಹೇಳಿದರೂ ಸಹ, ಪೋಷಕರು ಶಾಲೆಗೆ ಬಂದು ಜಗಳವಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಉತ್ತರ ಪ್ರದೇಶದಲ್ಲಿ (Pratapgarh School Incident) ನಡೆದಿರುವ ಇಂತಹದ್ದೇ ಒಂದು ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Pratapgarh school incident involving alleged attack on a teacher by a student’s parents

Pratapgarh School Incident – ಪ್ರತಾಪ್‌ಗಢದಲ್ಲಿ ಅಸಲಿಗೆ ನಡೆದಿದ್ದೇನು?

ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ದೆಲ್ಹೂಪುರದಲ್ಲಿರುವ ಪಾರ್ವತಿ ಗ್ಲೋಬಲ್ ಸೈನ್ಸ್ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದೆ. ತರಗತಿಯಲ್ಲಿ ಪಾಠ ಮಾಡುತ್ತಿದ್ದ ಮಹಿಳಾ ಶಿಕ್ಷಕಿಯೊಬ್ಬರ ಮೇಲೆ ವಿದ್ಯಾರ್ಥಿಯ ಪೋಷಕರು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಕನಿಷ್ಠ ಶಾಲೆಯ ಆಡಳಿತ ಮಂಡಳಿಯ ಜೊತೆ ಮಾತನಾಡುವ ಸೌಜನ್ಯವನ್ನೂ ತೋರದೆ ಪೋಷಕರು ಗೂಂಡಾಗಳಂತೆ ವರ್ತಿಸಿದ್ದಾರೆ.

ಪ್ರಾಣಿ ಹಿಂಸೆ ಮಾಡಿದ್ದ ವಿದ್ಯಾರ್ಥಿಗೆ ಬುದ್ಧಿ ಹೇಳಿದ್ದ ಶಿಕ್ಷಕಿ

ಶಾಲೆಯ ವಿದ್ಯಾರ್ಥಿಯಾದ ತ್ರಿವಿಕ್ ಮಿಶ್ರಾ ಎಂಬಾತ ಇತ್ತೀಚೆಗೆ ಶಾಲೆಯಲ್ಲಿ ಮೊಲವೊಂದನ್ನು ಕೊಂದಿದ್ದ. ಈ ಅಮಾನವೀಯ ಕೃತ್ಯವನ್ನು ಖಂಡಿಸಿ, ಶಿಕ್ಷಕಿ ಪಲಕ್ ಮಿಶ್ರಾ ಅವರು ಆತನಿಗೆ ಬುದ್ಧಿವಾದ ಹೇಳಿದ್ದರು. ಆದರೆ, ಈ ವಿಚಾರವನ್ನು ವಿದ್ಯಾರ್ಥಿ ಮನೆಗೆ ಹೋಗಿ ತನ್ನ ಪೋಷಕರಿಗೆ ತಿಳಿಸಿದ್ದಾನೆ. ತಮ್ಮ ಮಗ ತಪ್ಪು ಮಾಡಿದ್ದಾನಾ ಎಂದು ಕೇಳುವ ಬದಲು, (Pratapgarh School Incident) ಆತನಿಗೆ ಬೈದಿದ್ದಕ್ಕೇ ಕೋಪಗೊಂಡ ಪೋಷಕರು ನೇರವಾಗಿ ಶಾಲೆಗೆ ನುಗ್ಗಿದ್ದಾರೆ.

ಮಗನ ಪರವಾಗಿ ತರಗತಿಗೆ ನುಗ್ಗಿ ದಾಂಧಲೆ!

“ನಮ್ಮ ಮಗನಿಗೇ ಬೈಯುತ್ತೀಯಾ?” ಎಂದು ಆಕ್ರೋಶ ವ್ಯಕ್ತಪಡಿಸುತ್ತಾ, ಸೌಮ್ಯಾ ಮಿಶ್ರಾ ಮತ್ತು ಅಭಿಷೇಕ್ ಮಿಶ್ರಾ ಎಂಬ ದಂಪತಿ ನೇರವಾಗಿ ತರಗತಿಗೆ ಎಂಟ್ರಿ ಕೊಟ್ಟಿದ್ದಾರೆ. ಬಂದವರೇ (Pratapgarh School Incident) ಶಿಕ್ಷಕಿ ಪಲಕ್ ಮಿಶ್ರಾ ಅವರ ಕೂದಲು ಹಿಡಿದು ಎಳೆದಾಡಿ, ನೆಲಕ್ಕೆ ಕೆಡವಿ ಮನಬಂದಂತೆ ಥಳಿಸಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ಶಿಕ್ಷಕಿ ಕೆಲಕಾಲ ಆಘಾತಕ್ಕೊಳಗಾದರೂ, ನಂತರ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. Read this also : ಪ್ರೀತಿ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ! ಉತ್ತರ ಪ್ರದೇಶದ ಭೀಕರ ಘಟನೆ..!

ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿಗಳ ಬಂಧನ

ಹಲ್ಲೆಯಿಂದ ಪಾರಾದ ಶಿಕ್ಷಕಿ ಪಲಕ್ ಮಿಶ್ರಾ, ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತಮ್ಮ ಮೇಲೆ ಹಲ್ಲೆ ನಡೆಸಿದ ದಂಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು, (Pratapgarh School Incident) ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳಾದ ಸೌಮ್ಯಾ ಮಿಶ್ರಾ ಮತ್ತು ಅಭಿಷೇಕ್ ಮಿಶ್ರಾ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Pratapgarh school incident involving alleged attack on a teacher by a student’s parents

ಎಲ್ಲಿಗೆ ಬಂತು ಕಾಲ? ಆಕ್ರೋಶ ಹೊರಹಾಕಿದ ನೆಟ್ಟಿಗರು

ತರಗತಿಯೊಳಗೆ ನುಗ್ಗಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ (Viral Video Link Here) ಭಾರಿ ವೈರಲ್ ಆಗುತ್ತಿದೆ. ಶಾಲೆಯೆಂಬ ದೇವಾಲಯದಲ್ಲಿ, ವಿದ್ಯಾರ್ಥಿಗಳ ಮುಂದೆಯೇ ಗುರುವಿನ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಎಷ್ಟು ಸರಿ? ಎಂದು ನೆಟ್ಟಿಗರು (Pratapgarh School Incident) ಕಟುವಾಗಿ ಪ್ರಶ್ನಿಸುತ್ತಿದ್ದಾರೆ. ತಪ್ಪು ಮಾಡಿದ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳಬೇಕಾದ ಪೋಷಕರೇ ಈ ರೀತಿ ಗೂಂಡಾವರ್ತನೆ ತೋರಿರುವುದಕ್ಕೆ ಎಕ್ಸ್ (ಟ್ವಿಟರ್) ಸೇರಿದಂತೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt