ನೀಲಿ ಚಿತ್ರಗಳ ಮೂಲಕ ಸುದ್ದಿಯಾಗಿದ್ದ ನಟಿ ಸನ್ನಿ ಲಿಯೋನ್ ಸದ್ಯ ಸೌತ್ ಅಂತ್ ನಾರ್ತ್ ನಲ್ಲಿ ಸಿನೆಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ನೀಲಿ ಚಿತ್ರಗಳಿಂದ ದೂರವಾಗಿ ಆಕೆ ಬಾಲಿವುಡ್ ಸಿನೆಮಾಗಳ ಜೊತೆಗೆ ಸೌತ್ ನಲ್ಲೂ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್ ಸಾಗಿಸುತ್ತಿದ್ದಾರೆ. ಜೊತೆಗೆ ಆಕೆ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕವೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದೀಗ ಕರ್ನಾಟಕದ ಮಂಡ್ಯದಲ್ಲಿ ಸನ್ನಿ ಬಾಯ್ಸ್ ಎಂಬ ಗುಂಪು ಆಕೆಯ ಹುಟ್ಟುಹಬ್ಬವನ್ನು ಆಚರಿಸಿದ್ದು, ಈ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನೀಲಿ ಸಿನೆಮಾಗಳ ಮೂಲಕ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ಸನ್ನಿ ಲಿಯೋನ್ ಇದೀಗ ಹಳೆಯ ಜೀವನವನ್ನು ಬಿಟ್ಟು ಹೊಸ ಜೀವನಕ್ಕೆ ಮರಳಿದ್ದಾರೆ. ಖ್ಯಾತ ನಟಿ ಸನ್ನಿಲಿಯೋನ್ ರವರ ಜನ್ಮ ದಿನಾಚರಣೆಯನ್ನು ಮಂಡ್ಯ ಜಿಲ್ಲೆಯಲ್ಲಿ ಅದ್ದೂರಿಯಾಗಿ ಹಾಗೂ ಸಂಭ್ರಮದಿಂದ ಆಚರಿಸಿದ್ದಾರೆ. ಮಂಡ್ಯ ಜಿಲ್ಲೆಯ ಕಾರ್ಕಳ್ಳೀ ಗ್ರಾಮದ ಕೆಲ ಯುವಕರಿಗೆ ಸನ್ನಿಲಿಯೋನ್ ಎಂದರೇ ತುಂಬಾ ಅಚ್ಚುಮೆಚ್ಚು. ಹೀಗಾಗಿ ಆಕೆಯ ಜನ್ಮದಿನವನ್ನು ಸನ್ನಿ ಬಾಯ್ಸ್ ಎಂಬ ಗುಂಪು ಸಂಭ್ರದಿಂದ ಆಚರಿಸಿದ್ದಾರೆ. ಗ್ರಾಮದ ಯುವಕರೆಲ್ಲರೂ ಸೇರಿ ಸನ್ನಿಲಿಯೋನ್ ರವರ ಬೃಹತ್ ಕಟೌಟ್ ನಿರ್ಮಿಸಿ ಅದರ ಮುಂದೆ ಕೇಕ್ ಕತ್ತರಿಸಿದ್ದಾರೆ. ಕೇಕ್ ಕತ್ತರಿಸಿ ಶುಭ ಕೋರಿ ಯುವಕರೆಲ್ಲರೂ ಕೇಕ್ ತಿನ್ನಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಪ್ರತಿ ವರ್ಷ ಮಂಡ್ಯದ ಕಾರ್ಕಳ್ಳಿ ಗ್ರಾಮದ ಯುವಕರು ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಕೆಲವೊಂದು ಕಡೆ ಆಕೆಯ ಹುಟ್ಟುಹಬ್ಬದಂದು ಅನ್ನಸಂತರ್ಪಣೆ, ರಕ್ತದಾನ ಶಿಬಿರಗಳನ್ನು ಸಹ ಹಮ್ಮಿಕೊಂಡಿದ್ದರು. ಇನ್ನೂ ಸನ್ನಿ ಲಿಯೋನ್ ಸಿನೆಮಾಗಳ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೂರಾರು ಅನಾಥ ಮಕ್ಕಳನ್ನು ಆಕೆ ಸಾಕುತ್ತಿದ್ದಾರೆ. ಅವರಲ್ಲಿರುವ ಒಳ್ಳೆಯ ಗುಣ ಹಾಗೂ ಸೇವಾ ಮನೋಭಾವ ನಮ್ಮನ್ನು ಅವರ ಅಭಿಮಾನಿಯಾಗುವಂತೆ ಮಾಡಿದೆ ಎಂಬುದು ಸನ್ನಿ ಬಾಯ್ಸ್ ಯುವಕರ ಮಾತಾಗಿದೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
