Sonu Sood – ನಟ ಸೋನು ಸೂದ್ ಸಿನೆಮಾಗಳಿಗಿಂತ ವೈಯುಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾದರು ಎನ್ನಬಹುದು. ಕೋವಿಡ್ ಸಮಯದಲ್ಲಿ ಅವರು ಮಾಡಿದಂತಹ ಸಾಮಾಜಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಂದ ಅವರ ಸಾಮಾಜಿಕ ಸೇವೆ ಇಂದಿಗೂ ಸಹ ಮುಂದುವರೆಯುತ್ತಲೇ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ, ಬಡತನದಿಂದ ಬಳಲುತ್ತಿರುವವರಿಗೆ ತುಂಬಾನೆ ಸಹಾಯ ಮಾಡುತ್ತಿದ್ದಾರೆ. ಇದೀಗ ಮೂರು ವರ್ಷದ ಮಗುವಿಗೆ ಸರ್ಜರಿ ಮಾಡಿಸಿ ಜೀವ ಉಳಿಸಿದ್ದಾರೆ. ಅವರ ಈ ಕೆಲಸಕ್ಕೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಬಾಲಿವುಡ್ ಮೂಲದ ನಟ ಸೋನು ಸೂದ್ ಕೇವಲ ಹಿಂದಿ ಮಾತ್ರವಲ್ಲದೇ ಸೌತ್ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಬಹುತೇಕ ಎಲ್ಲಾ ಸಿನೆಮಾಗಳಲ್ಲಿ ವಿಲನ್ ಆಗಿ ನಟಿಸಿದ್ದ ಸೋನು ಸೂದ್ ರಿಯಲ್ ಲೈಫ್ ನಲ್ಲಿ ಮಾತ್ರ ಹಿರೋ ಆಗಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವಲ್ಲಿ ಸೋನು ಸೂದ್ ಮೊದಲಿಗರಾಗಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಅನೇಕ ಜನರಿಗೆ ಸಹಾಯ ಮಾಡಿದ್ದರು. ನಟನ ಒಳ್ಳೆಯ ಕೆಲಸಗಳನ್ನು ಅಭಿಮಾನಿಗಳು ಹಾಡಿ ಹೊಗಳಿದ್ದರು. ಅನೇಕ ಸಿನಿಮಾದಲ್ಲಿ ಪವರ್ ಫುಲ್ ವಿಲನ್ ರೋಲ್ ಗಳಿಂದ ಜನರನ್ನ ಹೆದರಿಸಿರುವ ಸೋನು ಸೂದ್ ರಿಯಲ್ ಲೈಫ್ನಲ್ಲಿ ಅನೇಕರ ಪಾಲಿಗೆ ದೇವರು ಆಗಿದ್ದಾರೆ. ಅವರ ನೆರವಿನಿಂದ ಜೀವನ ಸಾಗಿಸುತ್ತಿರುವವರು ಅವರನ್ನು ದೇವರಂತೆ ಪೂಜೆ ಮಾಡುತ್ತಿದ್ದಾರೆ.
ನಟ ಸೋನು ಸೂದ್ ತಮ್ಮ ಫೌಂಡೇಷನ್ ಗಳ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಿದ್ದಾರೆ. ಅನೇಕ ಬಡವರಿಗೆ ಆಸರೆಯಾಗಿದ್ದಾರೆ. ಅನೇಕರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಿದ್ದಾರೆ. ಇದೀಗ ಮತ್ತೊಮ್ಮೆ ಅವರು ಮಾನವೀಯತೆಯನ್ನು ಮೆರೆದಿದ್ದಾರೆ. fyಕೃಷ್ಣ ಹಾಗೂ ಬಿಂದು ಪ್ರಿಯಾ ಎಂಬುವವರು ಬಡವರಾಗಿದ್ದು, ತುಂಬಾ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಈ ದಂಪತಿಯ ಮೂರು ವರ್ಷದ ಮಗಳು ಬಾಲ್ಯದಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ಮಗುವಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲು 6 ಲಕ್ಷ ರೂ ಗೂ ಹೆಚ್ಚು ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅಷ್ಟೊಂದು ಹಣ ಅವರ ಬಳಿಯಿರಲಿಲ್ಲ.

ಈ ಮಾಹಿತಿಯನ್ನು ಸಂಸ್ಥೆಯೊಂದು ಸೋನುಸೂದ್ ರವರ ಗಮನಕ್ಕೆ ತಂದಿದೆ. ಈ ಬಡಕುಟುಂಬದ ಪರಿಸ್ಥಿತಿಯನ್ನು ತಿಳಿದ ಸೋನುಸೂದ್ ಕೂಡಲೇ ಸಹಾಯ ಮಾಡಲು ಮುಂದಾಗಿದ್ದಾರೆ. ಇದೀಗ ಮುಂಬೈನಲ್ಲಿ ಮಗುವಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಬಡ ಮಗುವಿಗೆ ಚಿಕಿತ್ಸೆ ಕೊಡಿಸಿದ ಸೋನು ಸೂದ್ (Sonu Sood) ರವರ ಮಾನವೀಯತೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.