Kannada Rajyostava – ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಂತಹ ಅಂದದ ಚೆಂದದ ಬೀಡನ್ನು ಅನೇಕ ಕವಿಗಳು ತಮ್ಮ ಕವನಗಳಲ್ಲಿ ಜಗದ್ವಿಖ್ಯಾತಗೊಳಿಸಿದ್ದಾರೆ. ಆದ್ದರಿಂದ ನಾಡು-ನುಡಿಯ ರಕ್ಷ ಣೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ತಿಳಿಸಿದರು.

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ (Kannada Rajyostava) ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹರಿದು ಹಂಚಿಹೋಗಿದ್ದ ರಾಜ್ಯಗಳ ಭಾಷಾವಾರು ಮರು ಸಂಘಟನೆಯ ಮೂಲಕ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯದ ಅಡಿಯಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಮೂಲಕ ತರಲಾಯಿತು. ನಂತರ 1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರವರು ಮೈಸೂರು ರಾಜ್ಯ ಎಂಬ ಹೆಸರಿನ ಬದಲಿಗೆ ಕರ್ನಾಟಕ ಎಂದು ನವೆಂಬರ್1 ರಂದು ಮರು ನಾಮಕರಣ ಮಾಡಿದ್ದರು. (Kannada Rajyostava) ಅಂದಿನ ಇಂದಿನ ವರೆಗೆ ನವೆಂಬರ್ ಒಂದು ಕರ್ನಾಟಕ ರಾಜ್ಯದ ರಾಜ್ಯೋತ್ಸವನ್ನು ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು. ಕನ್ನಡ ಏಕೀಕರಣ ಬಗ್ಗೆ, ಕಿತ್ತೂರು ರಾಣಿ ಚೆನ್ನಮ್ಮ, ಆಲೂರು ವೆಂಕಟರಾಯರ ಬಗ್ಗೆ ವಿವರವಾಗಿ ತಿಳಿಸಿ ಒಂದು ಕವನ ವಾಚನ ಮಾಡಿದರು.
ನಂತರ (Kannada Rajyostava) ಆದರ್ಶ ಶಾಲೆಯ ಮುಖ್ಯಶಿಕ್ಷಕಿ ಕೃಷ್ಣಕುಮಾರಿ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಗಳ ಹೆಚ್ಚು ಬಳಕೆಯಿಂದಾಗಿ ಕನ್ನಡ ಸಾಹಿತ್ಯ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕಗಳನ್ನು ಓದುವುದು, ದಿನಪತ್ರಿಕೆಗಳನ್ನು ಓದುವ ಕೆಲಸ ಮಾಡಬೇಕು. ಜೊತೆಗೆ ಇಂದಿನಿಂದ ಎರಡು ದಿನಗಳ ಒಳಗೆ ನಮ್ಮ ಶಾಲೆಯ ಯಾರಾದರೂ ಕವನ ರಚಿಸಿ ನೊಟೀಸ್ ಬೋರ್ಡ್‌ನಲ್ಲಿ ಹಾಕಬೇಕು. ಯಾರು ಬೇಗ ಹಾಕುತ್ತಾರೋ ಆ ಶಾಲೆಗೆ ಬಹುಮಾನವನ್ನು ನೀಡುತ್ತೇನೆ ಎಂದರು.
ನಂತರ (Kannada Rajyostava) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ಗುಡಿಬಂಡೆ ತಾಲ್ಲೂಕು ಆಂದ್ರಪ್ರದೇಶದ ಗಡಿ ಭಾಗದಲ್ಲಿ ಇದ್ದು ಇಲ್ಲಿ ತೆಲುಗು ಭಾಷೆಯ ಹೆಚ್ಚು ಮಾತನಾಡುತ್ತಾರೆ. ಕನ್ನಡ ರಾಜ್ಯದಲ್ಲಿ ಹುಟ್ಟಿರುವ ನಾವು ಎಲ್ಲರೂ ತಮ್ಮ ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ (Kannada Rajyostava) ಶಾಲಾ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿದರು. ಕನ್ನಡ ಬಗ್ಗೆ ಭಾಷಣ ಮಾಡಿದರು. ಈ ಸಮಯದಲ್ಲಿ ತಿರುಮಣಿ ಗ್ರಾ.ಪಂ ಅಧ್ಯಕ್ಷೆ ಮಮತಾ ಮಂಜುನಾಥ, ಕರವೇ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಯಾದವ್, ಕಸಾಪದ ಶ್ರೀನಿವಾಸ್ ಗಾಂಧಿ, ಇಸಿಓ ರಾಘವೇಂದ್ರ, ಬಿ.ಆರ್.ಪಿ ಮಂಜುನಾಥ, ಭಾರತಿ, ಆದರ್ಶ ವಿದ್ಯಾಲಯದ ಶಿಕ್ಷಕರಾದ ಲಕ್ಷ್ಮೀ ನರಸಿಂಹ ಗೌಡ, ಡಾ.ವಿಜಯ ಕುಮಾರ್, ಮುನಿಶ್ಯಾಮಣ್ಣ, ದೇವೇಂದ್ರ ಯಳಾವರ್, ಜಯಸಿಂಹ, ಮಹೇಶ್, ಕೃಷ್ಣ ಮೂರ್ತಿ, ವಿನಯ್, ಸುಶ್ಮ, ಸುಬ್ಬನಾರಾಯಣಪ್ಪ, ಹಂಸ ಸೇರಿದಂತೆ ಹಲವರು ಇದ್ದರು.