Madhya Pradesh: ಚಲಿಸುತ್ತಿದ್ದ ಕಾರಿನಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ, ಇಬ್ಬರ ಬಂಧನ….!

ಚಲಿಸುತ್ತಿರುವ ಕಾರಿನಲ್ಲೇ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‍ ನಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 9ನೇ ತರಗತಿ ಓದುತ್ತಿರುವ ಬಾಲಕಿಯ ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ವ್ಯಕ್ತಿಯೇ ಅತ್ಯಾಚಾರ ಮಾಡಿದ್ದಾನೆ.

ಸೋಷಿಯಲ್ ಮಿಡಿಯಾ (Madhya Pradesh)  ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂತ್ರಸ್ತೆ ಬಾಲಕಿ ಚಾಟಿಂಗ್ ಮಾಡುತ್ತಿದ್ದಳು. ಕಳೆದ ಜೂ.1 ರಂದು ಇಬ್ಬರು ವ್ಯಕ್ತಿಗಳೊಂದಿಗೆ ಆರೋಪಿ ಸಂತ್ರಸ್ತೆಯನ್ನು ಭೇಟಿಯಾಗಿದ್ದ. ಸಂತ್ರಸ್ತೆಯ ಗ್ರಾಮದಲ್ಲೇ ಭೇಟಿಯಾಗಿದ್ದಾನೆ. ಬಳಿಕ ಆಕೆಯನ್ನು ತನ್ನೊಂದಿಗೆ ಲಾಂಗ್ ಡ್ರೈವ್ ಗೆ ಬರುವಂತೆ ಕೇಳಿದ್ದಾನೆ. ಆದರೆ ಬಾಲಕಿ ಮೊದಲಿಗೆ ಒಪ್ಪಲಿಲ್ಲ. ಬಳಿಕ ಆರೋಪಿ ಪದೇ ಪದೇ ಪೀಡಿಸುತ್ತಿದ್ದ, ಈ ಕಾರಣದಿಂದ ಆಕೆ ಆತನೊಂದಿಗೆ ಕಾರಿನಲ್ಲಿ ಹೋದಳು ಎನ್ನಲಾಗಿದೆ. ಬಳಿಕ ಕಾರಿನಲ್ಲಿ ಹೋಗುತ್ತಿದ್ದಾಗ ಮೂವರ ಪೈಕಿ ಓರ್ವ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮತ್ತೋರ್ವ ಕಾರು ಓಡಿಸುತ್ತಿದ್ದು, ಇನ್ನೊಬ್ಬ ಈ ಕೃತ್ಯವನ್ನು ವಿಡಿಯೋ ಮಾಡಿದ್ದಾನೆ.

minor girl rapped in mp 1

ಬಳಿಕ ಕಾಮುಕ ಆಕೆಯನ್ನು ಪದೇ ಪದೇ ಭೇಟಿಯಾಗುವಂತೆ ಪೀಡಿಸಿದ್ದಾನೆ. ಬರದೇ ಹೋದರೇ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನಂತೆ. ಆದರೆ ಆಕೆ ಅವರೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಬಳಿಕ ಆರೋಪಿಗಳು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಚಾರ ಸಂತ್ರಸ್ತೆಯ ಕುಟುಂಬಸ್ಥರಿಗೆ ತಿಳಿದು ಬಾಲಕಿಯನ್ನು ವಿಚಾರಣೆ ಮಾಡಿದಾಗ ಎಲ್ಲಾ ಸಂಗತಿ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಮೂರನೇ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಈ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು (Madhya Pradesh)  ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Next Post

Viral Video: ಪ್ರಕೃತಿಯ ವಿಸ್ಮಯ, ಮಳೆಗೆ ತೋಟ ಮುಳುಗಿದರೂ, ಕೆಸರಾಗದ ಬಾವಿಯ ನೀರು, ವಿಡಿಯೋ ವೈರಲ್….!

Sun Jul 21 , 2024
ಸದ್ಯ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ಅನೇಕ ಕಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಮುಂಗಾರು ಆರ್ಭಟಕ್ಕೆ ಹಲವಾರು ಸಾವು ನೋವುಗಳೂ ಸಹ ಸಂಭವಿಸಿದೆ. ಮಳೆಯ ನೀರಿನಿಂದ ನದಿ, ಹೊಳೆಯ ನೀರು ಕೆಸರು ಬಣ್ಣಕ್ಕೆ ತಿರುಗುತ್ತದೆ. ಆದರೆ ಇಲ್ಲೊಂದು ವಿಸ್ಮಯ ನಡೆದಿದೆ. ಭಾರಿ ಮಳೆಗೆ ನದಿ ಹೊಳೆ ತುಂಬಿ ತೋಟಕ್ಕೆ ನೀರು ಹರಿದಿದೆ. ಆದರೆ ಆ ತೊಟದಲ್ಲಿರುವ ಬಾವಿಯ ನೀರು ಮಾತ್ರ ಕೆಸರಾಗದೇ ಸ್ವಚ್ಚವಾಗಿಯೇ ಉಳಿದಿದೆ. ಈ ಸಂಬಂಧ […]
environment mistery
error: Content is protected !!