Love Marriage: ಫ್ರೆಂಚ್ ಮಹಿಳೆಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ತಮಿಳುನಾಡು ಹುಡುಗ…!

Love Marriage – ಪ್ರೀತಿಗೆ ಯಾವುದೇ ಗಡಿ, ಜಾತಿ, ವಯಸ್ಸು ಇಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿ ಅನೇಕರು ಪ್ರೀತಿಸಿ ಮದುವೆಯಾಗಿದ್ದಾರೆ. ಗಡಿಯಾಚೆಗಿನ ಪ್ರೀತಿಯೂ (Love Marriage) ಸಹ ಕೆಲವೊಂದು ಪ್ರಕರಣಗಳಲ್ಲಿ ಸಫಲವಾಗಿದೆ. ಇದೀಗ ಅಂತಹುದೇ ಮದುವೆಯೊಂದು ನಡೆದಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಫ್ರೆಂಚ್ ಮಹಿಳೆಯನ್ನು ಪ್ರೀತಿಸಿದ ತಮಿಳುನಾಡು ಯುವಕ ಪರಸ್ಪರ ಪ್ರೀತಿಸಿಕೊಂಡಿದ್ದು, (Love Marriage) ಇದೀಗ ಭಾರತೀಯ ಹಿಂದೂ ಸಂಪ್ರದಾಯದಂತೆ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

French women and Indian boy marriage 0

ಪ್ರೀತಿಗೆ ಕಣ್ಣಿಲ್ಲ ಎಂಬ ಮಾತುಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಜೊತೆಗೆ ಪ್ರೀತಿ (Love Marriage) ಮಾಡೋದು ಸಹ ಇತ್ತೀಚಿಗೆ ಒಂದು ರೀತಿಯ ಟ್ರೆಂಡ್ ಆಗಿದೆ ಎನ್ನಬಹುದು. ಸದ್ಯ ಫ್ರೆಂಚ್ ಮಹಿಳೆಯೊಬ್ಬಳನ್ನು ತಮಿಳುನಾಡು ಮೂಲದ ಯುವಕನೋರ್ವ ಮದುವೆಯಾಗಿದ್ದಾರೆ. ತಮಿಳುನಾಡಿನ ತೇಣಿ ಜಿಲ್ಲೆಯ ಮುತ್ತು ದೇವನಪಟ್ಟಿಯ ಭೋಜನ್ ಹಾಘೂ ಕಾಳಿಯಮ್ಮಾಳ್ ದಂಪತಿಯ ಪುತ್ರ ಕಲೈರಾಜನ್ ಎಂಬ ಯುವಕನೇ ಫ್ರೆಂಚ್ (Love Marriage) ಮಹಿಳೆಯನ್ನು ಮದುವೆಯಾಗಿದ್ದಾನೆ. ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್‍ ಆಗಿ ಕೆಲಸ ಮಾಡುತ್ತಿದ್ದ ಭೋಜನ್ ಮೃತಪಟ್ಟಿದ್ದರು. ಬಳಿಕ ಅವರ ಪುತ್ರ ಕಲೈರಾಜನ್ 2017ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಫ್ರಾನ್ಸ್ ಗೆ ಹೋಗಿರುತ್ತಾರೆ. ಅಲ್ಲಿ ವ್ಯಾಸಂಗ (Love Marriage) ಮಾಡುತ್ತಿರುವಾಗಲೇ ಮರಿಯಮ್ ಎಂಬ ಫ್ರೆಂಚ್ ಮಹಿಳೆಯೊಂದಿಗೆ ಕಲೈರಾಜನ್ ಸ್ನೇಹ ಬೆಳೆಸು‌ತ್ತಾರೆ ಬಳಿಕ ಆ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಇದೀಗ ಇಬ್ಬರೂ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನೂ ಕಲೈರಾಜನ್ ಹಾಗೂ ಮರಿಯಮ್ (Love Marriage) ಇಬ್ಬರೂ ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದರು. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಕಳೆದ ವರ್ಷ ಮೇ ಮಾಹೆಯಲ್ಲಿ ಫ್ರಾನ್ಸ್ ನಲ್ಲಿ ಮದುವೆಯಾಗಿದ್ದರು. ಇದೀಗ ತೇಣಿಯ ಬಳಿಯಿರುವ ವೀರಪಾಂಡಿಯಲ್ಲಿ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಮಹಿಳೆಯ ಪೋಷಕರು ಹಾಗೂ ಸಂಬಂಧಿಕರು ಭಾಗವಹಿಸಿದ್ದರು. ಈ ಮದುವೆಯಲ್ಲಿ ವಧುವಿನ ಕಡೆಯವರೂ ಸಹ ಭಾಗವಹಿಸಿದ್ದು, (Love Marriage) ಭಾರತೀಯ ಸಂಪ್ರದಾಯದಂತೆ ಉಡುಗೆ ತೊಟ್ಟಿದ್ದು ವಿಶೇಷವಾಗಿತ್ತು ಎನ್ನಲಾಗಿದೆ.

French women and Indian boy marriage 1

ಈ ಕುರಿತು ವರ ಕಲೈರಾಜನ್ ಮಾತನಾಡಿದ್ದಾರೆ. ನಾನು ಪದವಿ ಓದಲು ಫ್ರಾನ್ಸ್ ಗೆ ಹೋದಾಗ ಅಲ್ಲಿ ಮರಿಯಮ್ ನನ್ನು ಭೇಟಿಯಾಗಿದ್ದೆ. ಅಲ್ಲಿ ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಿತು. ಅದು ಪ್ರೀತಿಯಾಗಿ ಬದಲಾಯಿತು. (Love Marriage) ಮೊದಲಿಗೆ ನಮ್ಮ ಮನೆಯಲ್ಲಿ ವಿದೇಶಿ ಯುವತಿಯನ್ನು ಮದುವೆಯಾಗಲು ಕೊಂಚ ಯೋಚನೆ ಮಾಡಿದರು. ಆದರೆ ಮರಿಯಮ್ ತಮಿಳು ಸಂಸ್ಕೃತಿಯನ್ನು ತುಂಬಾ ಇಷ್ಟಪಡುವ ಹಿನ್ನೆಲೆಯಲ್ಲಿ ಒಪ್ಪಿಕೊಂಡರು. ನಂತರ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ (Love Marriage) ಫ್ರಾನ್ಸ್ ನಲ್ಲಿ ಮೇ ಮಾಹೆಯಲ್ಲಿ ಮದುವೆಯಾದೆವು. ಇದೀಗ ಭಾರತದಲ್ಲಿ ತಮಿಳು ಪದ್ದತಿಯಂತೆ ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ. ಅದೇ ರೀತಿ ವಧು ಮರಿಯಮ್ ಸಹ ಮಾತನಾಡಿದ್ದು, ಕಲೈರಾಜನ್ ಹಾಗೂ ನಾನು (Love Marriage) ಪ್ರೀತಿಸಿ ಮದುವೆಯಾದೆವು. ಭಾರತಕ್ಕೆ ಬಂದು ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದು ನನಗೆ ತುಂಬಾ ಸಂತಸ ತಂದಿದೆ. ಇದೀಗ ನಾನೂ ಸಹ ತಮಿಳರ ಕುಟುಂಬದಲ್ಲಿ ಒಬ್ಬಳು ಎಂಬುದು ತುಂಬಾ ಖುಷಿಯ ವಿಚಾರ ಎಂದರು.

Leave a Reply

Your email address will not be published. Required fields are marked *

Next Post

Puneeth Rajkumar: ಅಪ್ಪು ಅಗಲಿ ಇಂದಿಗೆ 3 ವರ್ಷ, ರಾಜ್ಯದಾದ್ಯಂತ ಅಪ್ಪು ಪುಣ್ಯಸ್ಮರಣೆ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ….!

Tue Oct 29 , 2024
ಸ್ಯಾಂಡಲ್ ವುಡ್ ನಟ ನಗುವಿನ ಅರ ಎಂದೇ ಪ್ರಸಿದ್ದಿ ಪಡೆದ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರು ಇಹಲೋಕ ತ್ಯೇಜಿಸಿ ಇಂದಿಗೆ ಮೂರು ವರ್ಷಗಳು ತುಂಬಿದೆ. ಅ.29 ರಂದು ಅವರ 3ನೇ ವರ್ಷದ ಪುಣ್ಯಸ್ಮರಣೆ ನಡೆದಿದ್ದು, ಅವರ ಕೋಟ್ಯಂತರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಶ್ರದ್ದಾಂಜಲಿಯನ್ನು (Puneeth Rajkumar) ಅರ್ಪಿಸಿದ್ದಾರೆ. ಡಾ.ರಾಜ್ ಕುಮಾರ್‍ ಕುಟುಂಬದಿಂದಲೂ ಸಹ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಪ್ಪು ರವರ 3ನೇ ವರ್ಷದ […]
Puneeth Rajkumars 3rd Death Anniversary 2
error: Content is protected !!