Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಜೀವಿಕ ಸಂಘಟನೆಯ ನಾರಾಯಣಸ್ವಾಮಿ ರವರಿಗೆ 2024-25ನೇ ಸಾಲಿನ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಅವಾರ್ಡ್ ಲಭಿಸಿದ್ದು, ನವದೆಹಲಿಯಲ್ಲಿ ಈ ಅವಾರ್ಡ್ ಪ್ರಧಾನ ಮಾಡಲಾಗಿದೆ. ಈ ಸಂಬಂಧ ಜೀವಿಕ ಸಂಘಟನೆ ಹಾಗೂ ದಲಿತಪರ ಸಂಘಟನೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೀವಿಕ ಸಂಘಟನೆ ಹಾಗೂ ದಲಿತಪರ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಫೆಲೋಷಿಪ್ ಪಡೆದ ಜೀವಿಕ ನಾರಾಯಣಸ್ವಾಮಿ (Local News) ರವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜೀವಿಕ ಸಂಘಟನೆಯ ಚೆನ್ನರಾಯಪ್ಪ ಮಾತನಾಡಿ. ಬಡ ದಲಿತ ಕುಟುಂಬದಲ್ಲಿ ಜನಿಸಿದ ನಾರಾಯಣಸ್ವಾಮಿಯವರು ಬಾಲ್ಯದಿಂದಲೇ ತುಂಬಾ ಕಷ್ಟಗಳನ್ನು ಎದುರಿಸಿದ್ದಾರೆ. ಬಳಿಕ ತಮ್ಮಂತೆ ಯಾರಿಗೂ ಸಮಸ್ಯೆಯಾಗಬಾರದೆಂದು ಜೀವಿಕ ಸಂಘಟನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ದಲಿತಪರ ಶ್ರಮಿಸಿದ್ದಾರೆ. ಜೊತೆಗೆ ಅನೇಕ ಜೀತದಾಳುಗಳಿಗೆ ಜೀತದಿಂದ ವಿಮುಕ್ತಿ ಕೊಡಿಸಿದ್ದಾರೆ. ಸಫಾಯಿ ಕರ್ಮಚಾರಿ ಸಮಿತಿಯ ಸದಸ್ಯರಾಗಿಯೂ ಪೌರ ಕಾರ್ಮಿಕರ ಪರ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈ ರಾಷ್ಟ್ರೀಯ ಫೆಲೋಶಿಪ್ ದೊರೆತಿರುವುದು ನಮಗೆ ಅತೀವ ಸಂತಸದ ವಿಚಾರ ಎಂದರು.
ಬಳಿಕ ರಾಷ್ಟ್ರೀಯ ಫೆಲೋಶಿಪ್ ಪಡೆದ ನಾರಾಯಣಸ್ವಾಮಿ ಮಾತನಾಡಿ, ಜೀತ, ಬಾಲಕಾರ್ಮಿಕರು, ವರದಕ್ಷಣೆ, ಸಾವಯವ ಕೃಷಿ, ಆರೋಗದ ಬಗ್ಗೆ ಅಸ್ಪೃಶ್ಯತೆ ನಿರ್ಮೂಲನೆ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸುತ್ತಾ, ಒಬ್ಬ ತಮಟೆ ಕಲಾವಿದನಾಗಿ ದೆಹಲಿ, ಮುಂಬಾಯಿ ಮತ್ತು ರಾಜ್ಯ ಜಾನಪದ ಜಾತ್ರೆಗಳಲ್ಲಿ ರಾಷ್ಟ್ರೀಯ ಹಬ್ಬಗಳಲ್ಲಿ ತಮಟೆ ಹೊಡೆತ ಮತ್ತು ನೃತ್ಯವನ್ನು ಪ್ರರ್ದಶಿಸುತ್ತಾ ಸುಮಾರು 10 ವರ್ಷಗಳಿಂದ ತಮಟೆ ಹಬ್ಬವನ್ನು ಮಾಡಿಕೋಡು ಬರುತ್ತಿದ್ದೇನೆ. ನನಗೆ ಈಗಾಗಲೇ ನೀಡುಮಾಮಿಡಿ ಮಠದಿಂದ ಸದ್ಭಾವನಾ ಪ್ರಶಸ್ತಿ, ತಮಿಳುನಾಡಿನ ಗ್ಲೋಬಲ್ ಡ್ಯೂಮನ್ ಪೀಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದ್ದು, ಇದೀಗ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಅವಾರ್ಡ್ ದೊರೆತಿದ್ದು, ಈ ಅವಾರ್ಡ್ ಬರಲು ಗುಡಿಬಂಡೆ ತಾಲೂಕಿನ ಜನತೆಯ ಬೆಂಬಲ ಹಾಗೂ ಆರ್ಶಿವಾದ ಎಂದರು.
ಈ ವೇಳೆ ಜೀವಿಕ ಸಂಘಟನೆಯ ನಾರಾಯಣಪ್ಪ, ಅಮರಾವತಿ, ಮುನಿಯಪ್ಪ, ರಾಮಾಂಜಿ, ದಲಿತ ಸಂಘಟನೆಗಳ ಮುಖಂಡರಾದ ರಮಣ, ನರಸಿಂಹಪ್ಪ, ಮೂರ್ತಿ, ನರಸಿಂಹಪ್ಪ, ಸಂಜೀವಪ್ಪ ಸೇರಿದಂತೆ ಹಲವರು ಇದ್ದರು.