Snake Video – ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಹಾವುಗಳನ್ನು ಹಿಡಿಯವುದು, ಹಾವುಗಳೊಂದಿಗೆ ಆಟವಾಡುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಹಾವಿಗೆ ಮುತ್ತಿಡಲು ಹೋಗಿದ್ದಾನೆ. ಆದರೆ ಆ ಹಾವು ಆತನ ತುಟಿಗೆ (Snake Video) ಕಚ್ಚಿಕೊಂಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.
ಹಾವುಗಳು ಎಂದರೇ ಎಂತಹ ವ್ಯಕ್ತಿಗಳಿಗೂ ಭಯ ಆಗುತ್ತದೆ ಎನ್ನಲಾಗುತ್ತದೆ. ಆದರೆ ಕೆಲ ಉರಗ ಪ್ರೇಮಿಗಳು ಬರಿಗೈಲಿ ಹಾವುಗಳನ್ನು ಹಿಡಿಯುವ ಕೆಲಸ ಮಾಡುತ್ತಿರುತ್ತಾರೆ. ಕೆಲವರು ಹಾವುಗಳೊಂದಿಗೆ ಜೀವನ ಸಾಗಿಸುತ್ತಿರುತ್ತಾರೆ. (Snake Video)ಹಾವುಗಳೊಂದಿಗೆ ಸಾಹಸ ಮಾಡುವಂತಹ ಕೆಲಸಗಳನ್ನು ಸಹ ಮಾಡುತ್ತಿರುತ್ತಾರೆ. ಈ ಸಂಬಂಧ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ಇಲ್ಲೋಬ್ಬ ಭೂಪ ಹಾವಿಗೆ ಮುತ್ತಿಡಲು ಹೋಗಿದ್ದಾನೆ. ಜೀವಂತ ಹಾವಿಗೆ ಮುತ್ತಿಡಲು ಹೋದ ಅಸಾಮಿಯ ತುಟಿಗೆ (Snake Video) ಹಾವು ಕಚ್ಚಿ ಎಳೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋ ಇಲ್ಲಿದೆ ನೋಡಿ: Click Here
ಈ ವಿಡಿಯೋವನ್ನು @TheeDarkCircle ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ಬರಿಗೈಲಿ ಜೀವಂತ ಹಾವನ್ನು ಹಿಡಿದುಕೊಂಡಿದ್ದಾರೆ. (Snake Video) ಆ ಹಾವನ್ನು ಮುತ್ತಿಡಲು ಪ್ರಯತ್ನಿಸುವಂತಹ ದೃಶ್ಯವನ್ನು ಕಾಣಬಹುದಾಗಿದೆ. ಹೀಗೆ ಮುತ್ತಿಡಲು ಹೋದಾಗ ಒಮ್ಮೆಲೆ ಹಾವು ಆತನ ಮೇಲೆ ಎಗರಿ ಕೆಳ ತುಟಿಯನ್ನು ಕಚ್ಚಿ ಎಳೆದಿದೆ. ಕಳೆದ ಡಿ.11 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದೆ. ವಿಡಿಯೋ ನೋಡಿದವರು ಅನೇಕರು ನಿನಗಿದು ಬೇಕಿತ್ತಾ ಮಗನೇ ಎಂಬ ಅರ್ಥದಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.