Local News – ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವೂ ಸಹ ಅಷ್ಠೇ ಮುಖ್ಯ. ಪೋಷಕರ ಹಾಗೂ ಶಿಕ್ಷಕರ ಪರಸ್ಪರ ಸಹಕಾರ ಇದ್ದರೆ ಮಾತ್ರ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಕಾಣಲು ಸಾಧ್ಯ ಎಂದು ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಆರ್. ಹನುಮಂತರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪಿ.ಎ.ಶ್ರೀ ಶಾಲೆಯ ಸಭಾಂಗಣದಲ್ಲಿ (Local News) ನಡೆದ 2024-25ನೇ ಸಾಲಿನ ಎಸ್.ಡಿ.ಎಂ.ಸಿ ಮತ್ತು ಪೋಷಕರ ಸಭೆಯಲ್ಲಿ ಮಾತನಾಡಿ, ಪ್ರತಿಯೊಂದು ಮಗುವೂ ಸಹ ತನ್ನದೇ ಆದಂತಹ ವಿಭಿನ್ನವಾದಂತಹ ಅಲೋಚನೆಗಳನ್ನು ಹೊಂದಿರುತ್ತಾರೆ. ಪೋಷಕರು ತಮ್ಮ ಮಕ್ಕಳ ಅಲೋಚನೆಗಳಿಗೆ, ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾದ ಅಗತ್ಯವಿದೆ ಅಲ್ಲದೆ ಚಿಕ್ಕಂದಿನಿಂದಲ್ಲೇ ಅವರಿಗೆ ಆತ್ಮಸ್ಧೈರ್ಯ, ಸಕಾರಾತ್ಮಕ ಚಿಂತನೆ, ಪ್ರೇರಣೆ, ನಿರ್ದಿಷ್ಠ ಗುರಿ ಇತ್ಯಾಧಿಗಳ ಬಗ್ಗೆ ಮನದಟ್ಟು ಮಾಡುವಂತಹ ಕೆಲಸಕ್ಕೆ ಮುಂದಾಗಬೇಕು, ಮನೆಯಲ್ಲಿ ಮುಕ್ತ ವಾತಾವರಣ ಇರುವಂತೆ ನೋಡಿಕೊಳ್ಳಬೇಕು, ಮಕ್ಕಳ ಪ್ರಗತಿ, ಚಟುವಟಿಕೆಗಳ ಹಾಗೂ ನಡುವಳಿಕೆಗಳ ಬಗ್ಗೆ ಗಮನಹರಿಸಬೇಕು ಎಂದ ಅವರು ಇದೇ ರೀತಿಯಲ್ಲಿ ಶಾಲೆಯಲ್ಲಿ ಶಿಕ್ಷಕರು ಸಹ ಮಕ್ಕಳ ಶೈಕ್ಷಣಿಕ ಪ್ರಗತಿಯ ವಿಚಾರದಲ್ಲಿ ಜವಾಬ್ದಾರಿವಹಿಸಬೇಕೆಂದರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಪ್ರಭಾವತಿ ಮಾತನಾಡಿ, ಪೋಷಕರ ಸಭೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಮೌಲ್ಯಮಾಪನ ಮತ್ತು ಶಿಸ್ತು ಕಲಿಸುವಂತಹ ನಿರ್ಣಯಕ ಪಾತ್ರವಹಿಸಿಸುತ್ತ ಈ ನಿಟ್ಟಿನಲ್ಲಿ ಸಭೆಯಲ್ಲಿ ಪೋಷಕರು ತಮ್ಮ ಮಕ್ಕಳ ಅಭಿವೃದ್ದಿ, ಶಾಲೆಯಲ್ಲಿನ ಸಮಸ್ಯೆ ಇತ್ಯಾಧಿಗಳ ಬಗ್ಗೆ ಮುಕ್ತವಾಗಿ ಚರ್ಚೆ ಮತ್ತು ಸಲಹೆ ಸೂಚನೆಗಳನ್ನು ನೀಡಬೇಕೆಂದರು, ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷೆ ಉಷಾ, ಸಿ.ಆರ್.ಪಿ ಕುಶಾಲ್ ಕುಮಾರ್, ಶಿಕ್ಷಕರಾದ ಧರ್ಮಪುತ್ರಿ, ಬೇಬಿ ಮಂತಾಜ್, ಹರ್ಷಿಯಾ, ಮಂಜುನಾಥರೆಡ್ಡಿ, ಕಲ್ಪನಾ, ಕವಿತಾ, ರಾಧಿಕ, ರಜನಿ, ಗಣೇಶ್, ಬಾಬುರೆಡ್ಡಿ ಮತ್ತಿತರರು ಇದ್ದರು.