KPSC Recruitment 2025 – ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಗ್ರೂಪ್ ‘ಬಿ’ ವೃಂದದ ಒಟ್ಟು 945 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ.
KPSC Recruitment 2025 ಹುದ್ದೆಯ ಅಧಿಸೂಚನೆಯ ಸಂಕ್ಷಿಪ್ತ ವಿವರ:
- ಇಲಾಖೆ ಹೆಸರು– ಕರ್ನಾಟಕ ಲೋಕಸೇವಾ ಆಯೋಗ (KPSC)
- ಹುದ್ದೆಗಳ ಹೆಸರು– ಸಹಾಯಕ ಕೃಷಿ ಅಧಿಕಾರಿ (AAO)
- ಒಟ್ಟು ಹುದ್ದೆಗಳು – 945
- ವೇತನ – ರೂ.40900-83900/- ಪ್ರತಿ ತಿಂಗಳು
- ಅರ್ಜಿ ಸಲ್ಲಿಸುವ ಬಗೆ– ಆನ್ಲೈನ್ (Online)
- ಉದ್ಯೋಗ ಸ್ಥಳ – ಕರ್ನಾಟಕ
KPSC Recruitment 2025 – ಹುದ್ದೆಗಳ ವಿವರ:
- ಕೃಷಿ ಅಧಿಕಾರಿಗಳು (Agriculture Officer) : 128 (42 ಹೈಕ) ಹುದ್ದೆಗಳು
- ಸಹಾಯಕ ಕೃಷಿ ಅಧಿಕಾರಿಗಳು (Assistant Agriculture Officer) : 817 (231 ಹೈಕ) ಹುದ್ದೆಗಳು
- ಒಟ್ಟು ಹುದ್ದೆಗಳು : 945
KPSC Recruitment 2025 – ವಿದ್ಯಾರ್ಹತೆ ವಿವರ : ಶೇ.85 ಹುದ್ದೆಗಳಿಗೆ ಬಿಎಸ್‌ಸಿ (ಕೃಷಿ) ಅಥವಾ ಬಿಎಸ್‌ಸಿ (ಆನರ್ಸ್) ಕೃಷಿ ಪದವಿ ಪಡೆದಿರಬೇಕು. ಇನ್ನುಳಿದ ಶೇ.15 ಹುದ್ದೆಗಳಿಗೆ ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ/ ಆಹಾರ ತಂತ್ರಜ್ಞಾನ/ ಜೈವಿಕ ತಂತ್ರಜ್ಞಾನ/ ಅಗ್ರಿಕಲ್ಬರಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಇಲ್ಲವೇ, ಕೃಷಿ ಮಾರುಕಟ್ಟೆ ಸಹಕಾರ/ ಕೃಷಿ ಮಾರಾಟ ಮತ್ತು ಸಹಕಾರ/ ಆಗ್ರಿ ಬಿಜಿನೆಸ್ ಮ್ಯಾನೇಜ್‌ಮೆಂಟ್/ ಕೃಷಿ ಜೈವಿಕ ತಂತ್ರಜ್ಞಾನ, ಆಗ್ರಿಕಲ್ಬರಲ್ ಇಂಜಿನಿಯರಿಂಗ್‌ನಲ್ಲಿ ಬಿಎಸ್‌ಸಿ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು.
KPSC Recruitment 2025 – ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 07-ನವೆಂಬರ್-2024 ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷ ಹೊಂದಿರಬೇಕು. SC/ST/Cat-1 ಅಭ್ಯರ್ಥಿಗಳು: 05 ವರ್ಷಗಳು, Cat-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು PWD/ವಿಧವೆ ಅಭ್ಯರ್ಥಿಗಳು: 10 ವರ್ಷಗಳು ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ.
KPSC Recruitment 2025 ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ., ಹಿಂದುಳಿದ ವರ್ಗಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ., ಪರಿಶಿಷ್ಟ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿ ಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ.
KPSC Recruitment 2025 – ಅರ್ಜಿಯನ್ನು ಸಲ್ಲಿಸುವ ವಿಧಾನ:
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ಬಳಿಕ “https://kpsconline.karnataka.gov.in” ಕ್ಲಿಕ್ ಮಾಡಿ
- ಖಾತೆ ಸೃಜಿಸಿ ಅಥವಾ ಲಾಗಿನ್ ಆಗಿರಿ
- ಮುಂದೆ “Apply to Post / ಹುದ್ದೆಗೆ ಅರ್ಜಿ ಸಲ್ಲಿಸಿ” ಕ್ಲಿಕ್ ಮಾಡಿ
- ಬಳಿಕ “ಕೃಷಿ ಇಲಾಖೆ (ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಗ್ರೂಪ್ ‘ಬಿ’ )” ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕ ಪಾವತಿಸಿ, ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ.
KPSC Recruitment 2025 : ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03-ಜನವರಿ-2025
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-ಫೆಬ್ರವರಿ-2025
KPSC Recruitment 2025: Important Links
CORRIGENDUM NOTIFICATION (RPC) | CLICK HERE |
CORRIGENDUM NOTIFICATION (HK) | CLICK HERE |
NOTIFICATION (NHK) | CLICK HERE |
NOTIFICATION (HK) | CLICK HERE |
APPLY ONLINE | CLICK HERE |