Health Tips : ಹಣ್ಣುಗಳ ಮಹಾರಾಜ ಎಂದೇ ಕರೆಯಲಾಗುವುದ ಮಾವಿನ ಹಣ್ಣು ಅನೇಕರಿಗೆ ಪಂಚಪ್ರಾಣ ಎನ್ನಬಹುದು. ಈ ಹಣ್ಣಿನ ರುಚಿಯ ಮುಂದೆ ಬೇರೆ ಯಾವುದೇ ಹಣ್ಣಿನ ರುಚಿ ಸಮನಲ್ಲ ಎಂದೇ ಹೇಳಬಹುದು. ಜೊತೆಗೆ ಮಾವಿನ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳಿವೆ ಎನ್ನಲಾಗುತ್ತದೆ. ಮಾವಿನ ಹಣ್ಣುಗಳನ್ನು ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇನ್ನೂ ಮಾವಿನ ಹಣ್ಣು ಮಾತ್ರವಲ್ಲದೇ ಮಾವಿನ ಎಲೆಗಳು ಸಹ ತುಂಬಾನೆ ಉಪಯುಕ್ತವಾಗಿದೆ. ಮಾವಿನ ಮರದ ಎಲೆಗಳಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿವೆ ಎಂದು ತಜ್ಞರು ಹೇಳುತ್ತಾರೆ.

Health Tips – ಮಾವಿನ ಹಣ್ಣುಗಳಲ್ಲಿ ವಿಟಮಿನ್ ಸಿ, ಬಿ ಹಾಗೂ ಎ ಗುಣಗಳು ಹೆಚ್ಚಾಗಿವೆ. ಜೊತೆಗೆ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಲಕ್ಷಣಗಳನ್ನು ಸಹ ಹೊಂದಿದೆ. ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಮುಖ ಮಾಡುವಂತಹ ಔಷಧೀಯ ಗುಣಗಳನ್ನು ಮಾವಿನ ಎಲೆಗಳು ಹೊಂದಿದೆ ಎನ್ನಬಹುದಾಗಿದೆ. ಇನ್ನೂ ಮಾವಿನ ಎಲೆಗಳಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬ ಮಾಹಿತಿಯನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ.
- ಡಯಾಬಿಟಿಸ್ ನಿಯಂತ್ರಣ : ಮಾವಿನ ಎಲೆಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಡುವ ಸಾಮರ್ಥ್ಯವನ್ನು ಹೊಂದಿವೆ. ಮಾವಿನ ಎಲೆಗಳಲ್ಲಿರುವ “ಟ್ಯಾನಿನ್ಸ್” ಮತ್ತು “ಆಂಥೋಸೈಯಾನಿನ್ಸ್” ಎಂಬ ನೈಸರ್ಗಿಕ ಸಂಯುಕ್ತಗಳು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಹಾಗೂ ರಕ್ತದಲ್ಲಿನ ಗ್ಲುಕೋಸ್ ಅನ್ನು ಸುಧಾರಿಸುತ್ತವೆ.

- ಹೃದಯದ ಆರೋಗ್ಯ : ಮಾವಿನ ಎಲೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವಂತಹ ಔಷಧೀಯ ಗುಣಗಳಿವೆ. ಈ ಎಲೆಗಳಿಂದ ತಯಾರಿಸುವಂತಹ ನೀರನ್ನು ಕುಡಿಯುವುದರಿಂದ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ ಜೊತೆಗೆ ಮಾವಿನ ಎಲೆಗಳಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
- ಬಾಯಿಯ ಆರೋಗ್ಯ : ಮಾವಿನ ಎಲೆಗಳಿಂದ ಬಾಯಿಯ ಆರೋಗ್ಯ ಕಾಪಾಡಬಹುದಾಗಿದೆ. ಬಾಯಿಯ ದುರ್ವಾಸನೆ ಹಾಗೂ ದಂತ ಸಮಸ್ಯೆಗಳನ್ನು ಶಮನಗೊಳಿಸುವಲ್ಲಿ ಮಾವಿನ ಎಲೆಗಳು ತುಂಬಾ ಉಪಯುಕ್ತವಾಗಿದೆ. ಮಾವಿನ ಎಲೆಗಳನ್ನು ಕುದಿಸಿದ ನೀರಿನಿಂದ ಬಾಯನ್ನು ತೊಳೆಯುವುದರಿಂದ ಕೆಲವೊಂದು ದಂತ ಸಮಸ್ಯೆಗಳು ದೂರವಾಗುತ್ತವೆ.
- ಚರ್ಮದ ಆರೈಕೆ : ಮಾವಿನ ಎಲೆಗಳಲ್ಲಿರುವ ಕೆಲವೊಂದು ಗುಣಗಳಿಂದ ಚರ್ಮದ ಆರೋಗ್ಯವನ್ನು ಗುಣಪಡಿಸುತ್ತದೆ. ಈ ಎಲೆಗಳಿಂದ ತಯಾರಿಸಿದ ಪೇಸ್ಟ್ ಅನ್ನು ಚರ್ಮದ ಗಾಯ ಅಥವಾ ಸೋಂಕುಗಳುಂಟಾದ ಜಾಗಗಳಲ್ಲಿ ಬಳಸಬಹುದು. ಇದರಿಂದ ಗಾಯಗಳು ಬೇಗ ಗುಣಮುಖವಾಗುತ್ತದೆ.
- ರೋಗನಿರೋಧಕ ಶಕ್ತಿ : ಮಾವಿನ ಎಲೆಗಳಲ್ಲಿ ನೈಸರ್ಗಿಕವಾದ ಆಂಟಿ ಆಕ್ಸಿಡೆಂಟ್ ಗಳಿರುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಪ್ರತಿ ದಿನ ಮಾವಿನ ಎಲೆಗಳಿಂದ ತಯಾರಿಸಿದ ಟೀ ಅಥವಾ ಕಷಾಯವನ್ನು ಸೇವಿಸುವುದರ ಮೂಲಕ ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ.
Health Tips – ಇನ್ನೂ ಮಾವಿನ ಎಲೆಗಳಲ್ಲಿ ಮತ್ತಷ್ಟು ಆರೋಗ್ಯಕರ ಪ್ರಯೋಜನಗಳಿದ್ದು, ವೈದ್ಯರ ಸಲಹೆಯನ್ನು ಪಾಲನೆ ಮಾಡುವುದು ಸೂಕ್ತವಾಗಿದೆ. ಮಾವಿನ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೇ ಕೆಲವರಿಗೆ ಅಲರ್ಜಿ ಅಥವಾ ಇತರೆ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ವೈದ್ಯರ ಸಲಹೆಯಂತೆ ಮಾವಿನ ಎಲೆಗಳಿಂದ ತಯಾರಿಸಿದ ಪದಾರ್ಥಗಳನ್ನು ಸೇವನೆ ಮಾಡುವುದು ಸೂಕ್ತ ಎನ್ನಲಾಗಿದೆ.