HMPV – ಇಡೀ ವಿಶ್ವದಾದ್ಯಂತ ಕಳೆದೆರಡು ದಿನಗಳಿಂದ HMPV ವೈರಸ್ ಕುರಿತು ಭಾರಿ ಸಂಚಲನ ಸೃಷ್ಟಿಯಾಗಿದ್ದು, ಭಾರತದಲ್ಲೂ ಸಹ ಈ ವೈರಸ್ ಹಲವು ಕಡೆ ಪತ್ತೆಯಾಗಿದೆ. ಇದೀಗ ಈ ವೈರಸ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮಾಹಿತಿ ಹಂಚಿಕೊಂಡಿದ್ದಾರೆ. HMPV 2001 ರಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದು, ಇದು ಹೊಸ ವೈರಸ್ ಅಲ್ಲ. ಇದು ಸುಮಾರು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಆದ್ದರಿಂದ ಇದು ಹೊಸ ವೈರಸ್ ಎಂದು ಭಯಪಡಬೇಡಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳಿಂದ ಚೀನಾದಲ್ಲಿ HMPV ವೈರಸ್ ಹರಡುವಿಕೆ ಜೋರಾಗಿದೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಜೊತೆಗೆ ವಿಶ್ವದಾದ್ಯಂತ ಈ ವೈರಸ್ ವೇಗವಾಗಿ ಹರಡಲಾಗುತ್ತಿದೆ ಎಂದೂ ಸಹ ಹೇಳಲಾಗುತ್ತಿದೆ. ಜೊತೆಗೆ ಭಾರತದಲ್ಲೂ ಸಹ ಈ ವೈರಸ್ ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮಾತನಾಡಿದ್ದಾರೆ. HMPV ಹೊಸ ವೈರಸ್ ಅಲ್ಲ ಎಂದು ಆರೋಗ್ಯ ತಜ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದು ಗಾಳಿಯ ಮೂಲಕ ಹರಡುತ್ತದೆ. ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದ ಸಮಯದಲ್ಲಿ ಈ ವೈರಸ್ ಹೆಚ್ಚಾಗಿ ಹರಡುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾರವರ ಪೋಸ್ಟ್ ಇಲ್ಲಿದೆ ನೋಡಿ: Click Here
https://x.com/JPNadda/status/1876291214305304732
ಇನ್ನೂ ಆರೋಗ್ಯ ಸಚಿವಾಲಯ, ICMR ಹಾಗೂ NCDC ಜೊತೆಗೆ ಚೀನಾ ಹಾಗೂ ನೆರೆಯ ದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಈ ಸೋಂಕಿನ ಕುರಿತು ಎಚ್ಚರ ವಹಿಸಿದೆ. ಶೀಘ್ರದಲ್ಲೇ ಈ ವರದಿ ಸಹ ಹೊರಬರಲಿದೆ ಎಂದು ಹೇಳಿದ್ದಾರೆ. ಇನ್ನೂ HMPV ಸಾಮಾನ್ಯವಾಗಿ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ಚಳಿಗಾಲದ ಸಮಯದಲ್ಲಿ ಈ ವೈರಸ್ ಹೆಚ್ಚಾಗಿ ಸಕ್ರೀಯವಾಗಿರುತ್ತದೆ. ಈ ರೋಗದ ಬಗ್ಗೆ ಭಯಪಡುವ ಬದಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.