Janapada: ಜಾನಪದ ಕಲೆಗಳ ಉಳಿವಿಗೆ ಎಲ್ಲರೂ ಮುಂದಾಗಿ: ಆನಂದ್

ಇಂದಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನ, ಮೊಬೈಲ್, ಇಂಟರ್‍ ನೆಟ್ ಗಳ ಕಾರಣದಿಂದ ನಮ್ಮ ಜಾನಪದ (Janapada) ಕಲೆಗಳು ಮರೆಯಾಗುತ್ತಿವೆ. ಇಂದಿನ ಯುವಕರು ಜಾನಪದ (Janapada) ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಪರಿಸರ ವೇದಿಕೆಯ ಗುಂಪು ಮರದ ಆನಂದ್ ತಿಳಿಸಿದರು.

Pandari Bhajane 0

ಚಿಕ್ಕಬಳ್ಲಾಪುರದ ಗುಡಿಬಂಡೆ ಪಟ್ಟಣದಲ್ಲಿ ದಸರಾ ಗಣೇಶ ಸಮಿತಿ ವತಿಯಿಂದ ಅಂಬೇಡ್ಕರ್‍ ವೃತ್ತದ ಬಳಿ ಹಮ್ಮಿಕೊಂಡಿದ್ದ ದಸರಾ ಗಣೇಶ ಉತ್ಸವದ ಅಂಗವಾಗಿ ಪಂಡರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಟಿವಿಗಳು, ಮೊಬೈಲ್ ಗಳ ಕಾರಣದಿಂದ ಜಾನಪದ ಕಲೆಗಳು ಮರೆಯಾಗುತ್ತಿವೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ. ಜಾನಪದ ಕಲೆಗಳು ಕೇವಲ ಮನರಂಜನೆಯಾಗಿ ಮಾತ್ರವಲ್ಲದೇ ಜೀವನವನ್ನು ರೂಪಿಸುವ ಅಂಶಗಳನ್ನು ಸಹ ಒಳಗೊಂಡಿರುತ್ತದೆ. ಮರೆಯಾಗುತ್ತಿರುವ ಈ ಕಲೆಯನ್ನು ಯುವಕರು ಉಳಿಸಿ ಬೆಳೆಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಬಳಿಕ ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ದಸರಾ ಗಣೇಶ ಉತ್ಸವ ಸಮಿತಿ ವತಿಯಿಂದ ಪಂಡರಿ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಹಾಗೂ ಮೆಚ್ಚುವಂತಹ ವಿಚಾರ. ಈ ರೀತಿಯ ಆಚರಣಾ ಸಮಿತಿಗಳು ಜನಪದ ಕಲೆಗಳನ್ನು ಪ್ರೋತ್ಸಾಹ ನೀಡಬೇಕು. ಅನೇಕರು ಭಜನೆ, ಕೋಲಾಟ, ಚಕ್ಕೆ ಭಜನೆ, ಹರಿಕಥೆ ಮೊದಲಾದವುಗಳನ್ನು ಮರೆತಿದ್ದಾರೆ. ನಮ್ಮ ಮಕ್ಕಳಿಗೆ ಅವುಗಳ ಬಗ್ಗೆ ಏನೂ ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಗಣೇಶ ಉತ್ಸವಗಳಂತಹ ಕಾರ್ಯಕ್ರಮಗಳಲ್ಲಿ ಈ ರೀತಿಯ ಜಾನಪದ ಕಲೆಗಳನ್ನು ಸಾರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಜಾನಪದ ಕಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.

Pandari Bhajane 1

ಇನ್ನೂ ರಾತ್ರಿಯಾದರೂ ಸಹ ಜನರು ಪಂಡರಿ ಭಜನೆಯನ್ನು ವೀಕ್ಷಣೆ ಮಾಡಿ ಮನರಂಜನೆ ಪಡೆದರು. ಈ ವೇಳೆ ದಸರಾ ಗಣೇಶ ಸಮಿತಿ ಅಧ್ಯಕ್ಷೆ ಅಂಬಿಕಾ, ಸಮಿತಿಯ ಸದಸ್ಯರಾದ ನಿತಿನ್, ಹರಿಕೃಷ್ಣ, ಮಧು, ಶಿಕ್ಷಕರಾದ ರಾಮಾಂಜಿ, ಮನೋಹರ್‍, ಮಂಜುನಾಥ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

Next Post

Viral: ಲಿಫ್ಟ್ ನಲ್ಲಿ ಮಹಿಳೆಗೆ ಕಿರುಕುಳ ಕೊಟ್ಟವನಿಗೆ ಗೂಸ ಕೊಟ್ಟ ಮಹಿಳೆ, ವೈರಲ್ ಆದ ವಿಡಿಯೋ….!

Thu Oct 10 , 2024
Viral News : ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾನೂನಿನಲ್ಲಿ ಕಠಿಣ ಕಾನೂನು ಇದ್ದರೂ ಸಹ ಅತ್ಯಾಚಾರಗಳು, ದೌರ್ಜನ್ಯಗಳೂ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಜನಜಂಗುಳಿ, ಬಸ್, ಟ್ರೈನ್ ಗಳಲ್ಲಿ ಕೆಲ ಕಾಮುಕರು ಬೇಕಂತಲೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ಲಿಫ್ಟ್ ನಲ್ಲಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ (Viral) ಮಾಡಿದ್ದಾನೆ. ಭಯಗೊಳ್ಳದ ಮಹಿಳೆ ಕೋಪದಿಂದ ಆತನ ಖಾಸಗಿ ಅಂಗಕ್ಕೆ ಒದ್ದು ಆತನಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾಳೆ. […]
women beat men in lift
error: Content is protected !!