Viral: ಲಿಫ್ಟ್ ನಲ್ಲಿ ಮಹಿಳೆಗೆ ಕಿರುಕುಳ ಕೊಟ್ಟವನಿಗೆ ಗೂಸ ಕೊಟ್ಟ ಮಹಿಳೆ, ವೈರಲ್ ಆದ ವಿಡಿಯೋ….!

Viral News : ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾನೂನಿನಲ್ಲಿ ಕಠಿಣ ಕಾನೂನು ಇದ್ದರೂ ಸಹ ಅತ್ಯಾಚಾರಗಳು, ದೌರ್ಜನ್ಯಗಳೂ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಜನಜಂಗುಳಿ, ಬಸ್, ಟ್ರೈನ್ ಗಳಲ್ಲಿ ಕೆಲ ಕಾಮುಕರು ಬೇಕಂತಲೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ಲಿಫ್ಟ್ ನಲ್ಲಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ (Viral) ಮಾಡಿದ್ದಾನೆ. ಭಯಗೊಳ್ಳದ ಮಹಿಳೆ ಕೋಪದಿಂದ ಆತನ ಖಾಸಗಿ ಅಂಗಕ್ಕೆ ಒದ್ದು ಆತನಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾಳೆ. ಈ ಸಂಬಂಧ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

women beat men in lift 0

ಲಿಫ್ಟ್ ಒಂದರಲ್ಲಿ ಮಹಿಳೆಯೊಬ್ಬರು ಒಂಟಿಯಾಗಿದ್ದಾಗ, ಅಲ್ಲಿದ್ದ ಓರ್ವ ಪುರುಷ ಆಕೆಗೆ ಲೈಂಗಿಕ ಕಿರುಕುಳ ಕೊಡಲು ಮುಂದಾಗುತ್ತಾನೆ. ಈ ವೇಳೆ ಮಹಿಳೆ ಭಯಪಡದೇ ಆ ವ್ಯಕ್ತಿಯ ಖಾಸಗಿ ಅಂಗಕ್ಕೆ ಒದ್ದು ಆತನಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಈ ಕುರಿತ ವಿಡಿಯೋವನ್ನು TheFigen_ ಹೆಸರಿನ ಎಕ್ಸ್‌ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ತುಂಬಾ ಪರಿಪೂರ್ಣವಾದ ಕಿಕ್‌! ಮಹಿಳೆಯರೆಲ್ಲರೂ ಇದೇ ರೀತಿ ತಮ್ಮ ಸ್ವ-ರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂಬ ಟೈಟಲ್ ಬರೆದು ಈ ವಿಡಿಯೋ ಶೇರ್‍ ಮಾಡಲಾಗಿದೆ.  ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಲಿಫ್ಟ್‌ ಒಳಗೆ ಪ್ರವೇಶಿಸಿದ ಒಂಟಿ ಮಹಿಳೆಯ ಮೈ ಮುಟ್ಟಿ ವ್ಯಕ್ತಿಯೊಬ್ಬ ಮಹಿಳೆಗೆ ಕಿರುಕುಳ ನೀಡುವ ದೃಶ್ಯವನ್ನು ಕಾಣಬಹುದು. ಈತತನ್ನು ಹೀಗೆ ಬಿಟ್ರೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇರಲಾರದು ಎನ್ನುತ್ತಾ, ಆ ದಿಟ್ಟ ಮಹಿಳೆ, ಆತ ಇನ್ನೊಂದು ಬಾರಿ ಮೈ ಮುಟ್ಟಲು ಯತ್ನಿಸಿದಾಗ ಆತನ ಕಪಾಳಕ್ಕೆ ಬಾರಿಸಿ, ಖಾಸಗಿ ಅಂಗಕ್ಕೆ ಒದ್ದು, ಸರಿಯಾಗಿ ಪಾಠ ಕಲಿಸಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/TheFigen_/status/1843270136477938025

ಈ ವಿಡಿಯೋವನ್ನು ಕಳೆದ ಅ.07 ರಂದು ಟ್ವಿಟರ್‍ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಬರೊಬ್ಬರಿ 26.2 ಮಿಲಿಯನ್ ವೀಕ್ಷಣೆ ಕಂಡಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಕೆಲವರಂತೂ ಪ್ರತಿ ಮಹಿಳೆ ಇದೇ ರೀತಿ ಸ್ವಯಂ ರಕ್ಷಣೆಯನ್ನು ಮಾಡಿಕೊಳ್ಳುವುದನ್ನು ಕಲಿಯಬೇಕು. ಸ್ವಯಂ ರಕ್ಷಣೆಯ ಕಲಿಕೆ ಮಹಿಳೆಯರು ತುಂಬಾನೆ ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳೂ ಸಹ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಯ ಕುರಿತಂತೆ ಶಿಕ್ಷಣ ನೀಡಬೇಕು ಎಂದು ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Leave a Comment

Your email address will not be published. Required fields are marked *

Scroll to Top