Healthy Hair – ಕೂದಲಿನ ಸಮಸ್ಯೆಗಳು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಪುರುಷರಿಗೂ ಇದು ದೊಡ್ಡ ತಲೆನೋವು. ಆದರೆ, ಮಹಿಳೆಯರಿಗಿಂತ ಹುಡುಗರಲ್ಲಿ ಕೂದಲಿನ ಸಮಸ್ಯೆಗಳು ಸ್ವಲ್ಪ ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಪುರುಷರು ಕೂದಲು ಹೆಚ್ಚು ಬೆಳೆಸುವುದಿಲ್ಲವಾದ್ದರಿಂದ, ಅವರಿಗೆ ಒಣ ಕೂದಲು (Dry Hair in Boys) ಮತ್ತು ತಲೆಹೊಟ್ಟು (Dandruff in Boys) ನಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಕೇವಲ ಶಾಂಪೂ ಅಥವಾ ಎಣ್ಣೆ ಹಚ್ಚುವುದರಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಕೂದಲಿನ ಆರೈಕೆಯಲ್ಲಿ ಕೆಲವು ದೈನಂದಿನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ.
Healthy Hair – ಆರೋಗ್ಯಕರ ಕೂದಲಿಗೆ ಇಲ್ಲಿದೆ ಪಂಚ ಸೂತ್ರ!
ನಿಮ್ಮ ಕೂದಲಿನಲ್ಲಿ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ಶುಷ್ಕತೆಯನ್ನು ಹೋಗಲಾಡಿಸಲು ಕೆಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಕೂದಲಿನ ಶುಷ್ಕತೆ ದೂರವಾಗುವುದಲ್ಲದೆ, ತಲೆಹೊಟ್ಟು ಕೂಡ ಕ್ರಮೇಣ ಮಾಯವಾಗುತ್ತದೆ. ಇದಕ್ಕೆ (Healthy Hair) ದುಬಾರಿ ಸಲೂನ್ ಚಿಕಿತ್ಸೆಗಳ ಅಗತ್ಯವಿಲ್ಲ, ನಿಮ್ಮ ದೈನಂದಿನ ಜೀವನದಲ್ಲಿ ಕೆಲವು ಸುಲಭ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಸಾಕು. ಆ ಐದು ಸುಲಭ ಅಭ್ಯಾಸಗಳು ಇಲ್ಲಿವೆ ನೋಡಿ. (ಈ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದ್ದು, ಉತ್ತಮ ಫಲಿತಾಂಶ ಅಥವಾ ಆರೋಗ್ಯಕ್ಕಾಗಿ, ವೈದ್ಯರನ್ನು ನೇರವಾಗಿ ಸಂಪರ್ಕಿಸುವುದು ಉತ್ತಮ.
1. ಶಾಂಪೂ ಬಳಕೆ ಮಿತವಾಗಿರಲಿ
ನಿಮ್ಮ ಕೂದಲು ಗುಂಗುರು ಆಗಿದ್ದರೆ ಅಥವಾ ಸಹಜವಾಗಿ ಒಣಗುವ ಪ್ರವೃತ್ತಿ ಹೊಂದಿದ್ದರೆ, ಪ್ರತಿದಿನ ಶಾಂಪೂ ಮಾಡುವುದನ್ನು ತಪ್ಪಿಸಿ. ಪ್ರತಿದಿನ ಶಾಂಪೂ ಬಳಸುವುದರಿಂದ ಕೂದಲಿನ ನೈಸರ್ಗಿಕ ಎಣ್ಣೆ (Natural Hair Oils) ಕಳೆದುಹೋಗುತ್ತದೆ, ಇದರಿಂದ ಕೂದಲು ಇನ್ನಷ್ಟು ಒಣಗುತ್ತದೆ. ವಾರಕ್ಕೆ ಎರಡು ಬಾರಿ ಮಾತ್ರ ಶಾಂಪೂ ಬಳಸಿ (Shampoo Frequency for Boys). ಉಳಿದ ದಿನಗಳಲ್ಲಿ ನಿಮ್ಮ ಕೂದಲನ್ನು ಸಾಮಾನ್ಯ ನೀರಿನಿಂದ ತೊಳೆಯಬಹುದು. ಇದು ನಿಮ್ಮ ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
2. ಸೂರ್ಯನ ಕಿರಣಗಳಿಂದ ಕೂದಲಿಗೆ ರಕ್ಷಣೆ
ಸೂರ್ಯನ ಅತಿನೇರಳೆ ಕಿರಣಗಳು (UV Rays Hair Damage) ಕೇವಲ ಚರ್ಮಕ್ಕೆ ಮಾತ್ರವಲ್ಲದೆ, ಕೂದಲಿನ ಹೊರಪದರಕ್ಕೂ ಹಾನಿ ಮಾಡುತ್ತವೆ. ಈ ಪದರವು ಕೂದಲಿನ ತೇವಾಂಶವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊರಗೆ ಹೋಗುವಾಗ ಟೋಪಿ ಅಥವಾ ಸ್ಕಾರ್ಫ್ (Hat for Hair Protection) ಬಳಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಕೂದಲನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಕೂದಲು ಒಣಗುವುದನ್ನು ತಡೆಯುತ್ತದೆ.
3. ನೀರಿನ ಗುಣಮಟ್ಟದತ್ತ ಗಮನವಿರಲಿ
ನಿಮ್ಮ ಮನೆಗೆ ಬರುವ ನೀರು ಉಪ್ಪು ಅಥವಾ ಕ್ಲೋರಿನ್ ಮಿಶ್ರಿತವಾಗಿದ್ದರೆ, ಅದು ಕ್ರಮೇಣ ಕೂದಲಿನ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವನ್ನು ಕಡಿಮೆ ಮಾಡಲು, ನಿಂಬೆ ನೀರು ಅಥವಾ ಆಪಲ್ ಸೈಡರ್ ವಿನೆಗರ್ (Lemon Water for Hair) ನಿಂದ ಕೂದಲನ್ನು ತೊಳೆಯುವುದು ಉತ್ತಮ. ಇದು ಕೂದಲಿನ pH ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
4. ಬಿಸಿನೀರಿನ ಸ್ನಾನಕ್ಕೆ ಗುಡ್ಬೈ ಹೇಳಿ!
ಬಿಸಿನೀರು ಕೂದಲನ್ನು ಒಣಗಿಸುತ್ತದೆ ಮತ್ತು ನೆತ್ತಿಯಿಂದ ನೈಸರ್ಗಿಕ ತೇವಾಂಶವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ, ಕೂದಲು ತೊಳೆಯುವಾಗ ಯಾವಾಗಲೂ (Healthy Hair) ತಣ್ಣನೆಯ ಅಥವಾ ಸಾಮಾನ್ಯ ತಾಪಮಾನದ ನೀರನ್ನು ಬಳಸಿ (Cold Water Hair Wash Benefits). ಇದು ಕೂದಲಿನ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೂದಲು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.
5. ಲೀವ್–ಇನ್ ಕಂಡಿಷನರ್ ಮರೆಯದಿರಿ
ಶಾಂಪೂ ಬಳಸಿದ ನಂತರ, ಲೀವ್-ಇನ್ ಕಂಡಿಷನರ್ (Leave-in Conditioner for Boys) ಬಳಸುವುದು ಅತ್ಯಂತ ಪರಿಣಾಮಕಾರಿ. ಇದು ಕೂದಲಿನಲ್ಲಿ ತೇವಾಂಶವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಕೂದಲಿಗೆ ಹಚ್ಚಿ 20-30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ನೀರಿನಿಂದ ತೊಳೆಯಿರಿ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿ ಮತ್ತು ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Read this also : ಅಡುಗೆ ಮನೆಯಲ್ಲಿರುವ ಪಾತ್ರೆಯನ್ನು ಬಳಸಿ ವಿಭಿನ್ನವಾದ ಹೇಯರ್ ಸ್ಟೈಲ್, ವೈರಲ್ ಆದ ವಿಡಿಯೋ…!
ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಹುಡುಗರು ತಮ್ಮ ಕೂದಲನ್ನು ಆರೋಗ್ಯಕರವಾಗಿ, ಹೊಳೆಯುವಂತೆ ಮತ್ತು ಯಾವುದೇ ಸಮಸ್ಯೆಗಳಿಂದ ಮುಕ್ತವಾಗಿ ಇರಿಸಿಕೊಳ್ಳಬಹುದು. ನಿಮ್ಮ ಕೂದಲಿನ ಬಗ್ಗೆ ಕಾಳಜಿ ವಹಿಸಲು ಇಂದೇ ಈ ಅಭ್ಯಾಸಗಳನ್ನು ಪ್ರಾರಂಭಿಸಿ!