Google Maps – ಇತ್ತೀಚಿಗೆ ತಿಳಿಯದ ಪ್ರದೇಶಗಳಿಗೆ ಹೋಗಲು ಬಹುತೇಕರು ಗೂಗಲ್ ಮ್ಯಾಪ್ಸ್ ಬಳಸುತ್ತಾರೆ. ನಮಗೆ ತಿಳಿಯದಂತಹ ಮಾರ್ಗಗಳನ್ನು ಗೂಗಲ್ ಮ್ಯಾಪ್ಸ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆದರೆ ಇದೇ ಗೂಗಲ್ ಮ್ಯಾಪ್ಸ್ ನಂಬಿಕೊಂಡ ಹೋದ ಮೂರು ಮಂದಿ ಇದೀಗ ದೇವರ ಪಾದ ಸೇರಿದ್ದಾರೆ. ಉತ್ತರಪ್ರದೇಶದ ಬರೇಲಿಯಲ್ಲಿ ನ.24 ರಂದು ದೊಡ್ಡ ಪ್ರಮಾದ ನಡೆದಿದೆ. ಗೂಗಲ್ ಮ್ಯಾಪ್ಸ್ (Google Maps) ನಂಬಿದ ಮೂರು ಮಂದಿ ಕಾರು ಚಲಾಯಿಸಿಕೊಂಡು ಹೋಗುತ್ತಾ ದಾರುಣ ಸಾವನ್ನು ಕಂಡಿದ್ದಾರೆ.

ನ.24 ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಈ ಪ್ರಮಾದ ನಡೆದಿದೆ. ಮೂರು ಮಂದಿ ಕಾರಿನಲ್ಲಿ ಗೂಗಲ್ ಮ್ಯಾಪ್ಸ್ ನಂಬಿ ಹೋಗುತ್ತಿದ್ದರು. ನಿರ್ಮಾಣದ ಹಂತದಲ್ಲಿದ್ದ ಸೇತುವೆಯ ಮೂಲಕ ಹೋಗಿ ನದಿಯಲ್ಲಿ ಬಿದಿದ್ದಾರೆ. ತುಂಬಾ ಎತ್ತರದಿಂದ ಕಾರು ವೇಗವಾಗಿ ಬಿದ್ದ ಪರಿಣಾಮ ಕಾರು ನುಜ್ಜುನುಜ್ಜಾಗಿದೆ. ಕಾರಿನಲ್ಲಿದ್ದ ಮೂರು ಮಂದಿ ಅಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಬದೌನ್ ಜಿಲ್ಲೆಯ ಬರೇಲಿಯಿಂದ ಡೇಟಾಗಂಜ್ ಗೆ ಪ್ರಯಾಣಿಸುತ್ತಿದ್ದಾಗ ಖಲ್ಪೂರ್-ದತಾಗಂಜ್ ರಹದಾರಿಯ ಮೂಲಕ ಹೋಗವಾಗ ನ.24 ರ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಬರೇಲಿಯ ಫರಿದಾಪೂರ್ ಪೊಲೀಸರು ಹಾಗೂ ಬದೌನ್ ನ ಡೇಟಾಗಂಜ್ ಪೊಲೀಸರು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಸಹಾಯದಿಂದ ಕಾರನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ. ಕಾರಿನಲ್ಲಿದ್ದ ಮೂರು ಮಂದಿಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ: Click Here
ಪೊಲೀಸ್ ಮೂಲಗಳ ಪ್ರಕಾರ ಈ ದುರಂತ GPS ನ್ಯಾವಿಗೇಷನ್ ನಿಂದ ಜರುಗಿದೆ ಎನ್ನಲಾಗಿದೆ. ಸೇತುವೆ ಅಪೂರ್ಣವಾಗಿರುವುದು ಕಾರಿನಲ್ಲಿ ಪ್ರಯಾಣಿಸುತ್ತಿರುವವರಿಗೆ ಗೊತ್ತಿಲ್ಲ. ಇತ್ತೀಚಿಗೆ ಸುರಿದ ಮಳೆಯ ಕಾರಣದಿಂದ ಪ್ರವಾಹಗಳು ಸಂಭವಿಸಿದೆ. ಈ ಕಾರಣದಿಂದಲೇ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ. ಆದರೆ ಈ ಸುದ್ದಿ ತಿಳಿಯದೇ ಜಿಪಿಎಸ್ ಮ್ಯಾಪ್ ಬಳಸಿ ವೇಗವಾಗಿ ಈ ರಸ್ತೆಯಲ್ಲಿ ಹೋದ ಕಾರಣ ಕಾರು ನೇರವಾಗಿ ಸೇತುವೆಯಿಂದ ಕೆಳಗೆ ಬಿದಿದ್ದೆ. ಕಾರಿನಲ್ಲಿದ್ದ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.