Viral Video – ಸರ್ಕಾರಿ ಶಾಲೆಯ ಶಿಕ್ಷಕನೊರ್ವ ಶಾಲೆಯಲ್ಲಿಯೇ ವಿದ್ಯಾರ್ಥಿಯಿಂದ ಪಾದಕ್ಕೆ ಮಸಾಜ್ ಮಾಡಿಸಿಕೊಂಡ ಘಟನೆಯಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಆ ಶಿಕ್ಷಕನ್ನು ಅಮಾನುತುಗೊಳಿಸಲಾಗಿದೆ. ತಮಿಳುನಾಡಿನ ಪೂರ್ವ ರಾಜಪಾಳ್ಯಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಜಯಪ್ರಕಾಶ್ ಎಂಬುವವರು ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿಕೊಂಡು ಅಮಾನತ್ತಿನ ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನ ಪೂರ್ವ ರಾಜಪಾಳ್ಯಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಜಯಪ್ರಕಾಶ್ ಎಂಬುವವರು ಸುಮಾರು 17 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ 200 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾಧ್ಯಯರೂ ಸೇರಿದಂತೆ ಒಟ್ಟು 9 ಮಂದಿ ಶಿಕ್ಷಕರು ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯ ಶಿಕ್ಷಕ ಜಯಪ್ರಕಾಶ್ ಅದೇ ಶಾಲೆಯ ವಿದ್ಯಾರ್ಥಿಯಿಂದ ತನ್ನ ಪಾದಗಳನ್ನು ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಶಿಕ್ಷಕ ಜಯಪ್ರಕಾಶ್ ನನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಘಟನೆಯ ಸಂಬಂಧ ತಮಿಳುನಾಡು ನಾಗರೀಕ ಸೇವೆಗಳ ನಿಯಮ 17ರ ಉಪನಿಯಮ (ಇ) ಅಡಿಯಲ್ಲಿ ಮುಂದಿನ ಆದೇಶದವರೆಗೆ ಹಾಗೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಯಪ್ರಕಾಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಶಿಕ್ಷಕ ಜಯಪ್ರಕಾಶ್ ಶಾಲೆಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲವಂತೆ. ಶಾಲೆಗೆ ಬಂದರೂ ಪಾಠ ಮಾಡದೇ ಕಚೇರಿಯಲ್ಲಿಯೆ ವಿಶ್ರಾಂತಿ ಪಡೆಯುತ್ತಿದ್ದರಂತೆ. ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಕೊಠಡಿಗೆ ಕರೆಸಿಕೊಂಡು ಕಾಲು ಒತ್ತುವಂತೆ ಹೇಳುತ್ತಿದ್ದ. ಕಳೆದ ಶುಕ್ರವಾರ ವಿದ್ಯಾರ್ಥಿಯಿಂದ ತನ್ನ ಪಾದ ಒತ್ತಿಸಿಕೊಳ್ಳುತ್ತಿರುವಾಗ ಶಾಲೆಯ ಶಿಕ್ಷಕರೊಬ್ಬರು ವಿಡಿಯೋ ಮಾಡಿ ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ನೋಡಿದ ಅನೇಕರು ತಮ್ಮದೇ ಶಿಕ್ಷಕನಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.