Sabarimala: ಅಯ್ಯಪ್ಪನ ಭಕ್ತರಿಗೆ ಅಲರ್ಟ್, ಶಬರಿಮಲೆ ಆವರಣದಲ್ಲಿ ವಿಷ ಸರ್ಪಗಳ ದರ್ಶನ….!

Sabarimala – ನವೆಂಬರ್‍ ಮಾಹೆ ಆರಂಭವಾಗುತ್ತಿದ್ದಂತೆ ಶಬರಿಮಲೆಗೆ ಭಕ್ತರು ದೀಕ್ಷೆ ತೊಟ್ಟು ಹೋಗುವುದು ಸಾಮಾನ್ಯ. ಶಬರಿಮಲೆ ಅಯ್ಯಪ್ಪ ಮಂಡಲ ದೀಕ್ಷೆ ಸೀಜನ್ ಆರಂಭವಾಗಿ ಕೆಲವು ದಿನಗಳಾಗಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಅಯ್ಯಪ್ಪನ ದರ್ಶನಕ್ಕಾಗಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಶಬರಿಮಲ ದೇವಾಲಯದ ಪರಿಸರದ ವ್ಯಾಪ್ತಿಯಲ್ಲಿ ಭಾರಿ ವಿಷಸರ್ಪಗಳು ಭಕ್ತರನ್ನು ಭಯಭೀತರನ್ನಾಗಿ ಮಾಡುವಂತೆ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ 33 ಹಾವುಗಳನ್ನು ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Snakes in sabarimala temple 1

Sabarimala – ಶಬರಿಮಲೆ ಭಕ್ತರು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ದೇವಾಲಯದ ಪರಿಸರ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ (Sabarimala) ವಿಷಸರ್ಪಗಳು. ಈಗಾಗಲೇ 33 ಸರ್ಪಗಳನ್ನು ಹಿಡಿಯಲಾಗಿದೆಯಂತೆ. ಈ ಹಾವುಗಳ ರಕ್ಷಣೆಗೆ ಸಂಬಂಧಿಸಿದ ವಿಡಿಯೋ, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಯ್ಯಪ್ಪನ ಭಕ್ತರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಕ್ತರು ಹಾಗೂ ಜನರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪೆರಿಯಾರ್‍ ವನ್ಯ ಜೀವಿ ಸಂರಕ್ಷಣಾ ಅರಣ್ಯ ಪ್ರಾಂತ್ಯದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

Snakes in sabarimala temple 2

ಈ ಹಿಂದೆಗಿಂತಲೂ ಈಗ ಕಡಿಮೆ ಸಂಖ್ಯೆಯಲ್ಲಿ ಹಾವುಗಳು ಶಬರಿಮಲೆ ಕ್ಷೇತ್ರದಲ್ಲಿ ಸಂಚರಿಸುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಹಿಂದೆ ಈ ಪ್ರಾಂತ್ಯದಲ್ಲಿ ಕಿಂಗ್ ಕೋಬ್ರಾ ಸೇರಿದಂತೆ ಹಲವು ವಿಷಪೂರಿತ ಸರ್ಪಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಸದ್ಯ ವಿಷಪೂರಿತ ಸರ್ಪಗಳು ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಿದೆ. ಒಂದು ವೇಳೆ ಹಾವು ಕಚ್ಚಿದರೂ ದೇವಾಲಯ ಹಾಗೂ ಪಂಪಾ ಬಳಿ ವೈದ್ಯಕೀಯ ಚಿಕಿತ್ಸೆ ಸಹ ಕಲ್ಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Snakes in sabarimala temple 0

ಇನ್ನೂ ಶಬರಿಮಲೆಗೆ ತೆರಳುವ ಭಕ್ತರು, ಯಾತ್ರಿಕರು ಕಾಲ್ನಡಿಗೆಯ ಮೂಲಕ ಹೋಗುವ ಮಾರ್ಗಗಳು, ರಹದಾರಿಗಳ ಕುರಿತು ಬೋರ್ಡ್‌ಗಳನ್ನು ಅನುಸರಿಸಬೇಕು. ಕತ್ತಲಿದ್ದಾಗ ಆದಷ್ಟು ಬೆಳಕು ಇರುವ ಪ್ರದೇಶಗಳಲ್ಲಿ ಸಂಚರಿಸಬೇಕು, ಜೊತೆಗೆ ಟಾರ್ಚ್‌ಗಳನ್ನು ಸಹ ಬಳಸಬೇಕು. ಎಲ್ಲಾದರೂ ಹಾವುಗಳು ಕಾಣಿಸಿದರೂ, ಎದುರು ಬಂದರು, ಅವುಗಳಿಗೆ ಹಾನಿ ಮಾಡುವುದಾಗಲಿ, ಅವುಗಳನ್ನು ಹಿಡಿಯುವುದಾಗಲಿ ಮಾಡಬಾರದು. ಆದಷ್ಟು ಹಾವುಗಳಿಂದ ದೂರ ಇರುವುದು ಒಳ್ಳೆಯದು ಅಗತ್ಯಬಿದ್ದರೇ ಸಮೀಪದಲ್ಲಿರುವ ಅಧಿಕಾರಿಗಳಿಗೆ ತಿಳಿಸಬೇಕೆಂದು ಕೆಲವೊಂದು ಸಲಹೆ ಸೂಚನೆಗಳನ್ನು ಅಯ್ಯಪ್ಪನ ಭಕ್ತರಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top