Crime News – ಇಲ್ಲೋಬ್ಬ ವಿಕೃತ ಕಾಮಿ ತನ್ನ ಮೆಡಿಕಲ್ ಶಾಪ್ ಹಾಗೂ ಕ್ಲಿನಿಕ್ ಬರುವಂತಹ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ಅವರನ್ನು ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ಇದು ಸಾಲದು ಎಂಬಂತೆ ಅವರಿಗೆ ತಿಳಿಯದಂತೆ ಮೊಬೈಲ್ ನಲ್ಲಿ ಸರಸ ಸಲ್ಲಾಪದ ವಿಡಿಯೋ ಮಾಡಿಕೊಂಡಿದ್ದಾನೆ. ಜೊತೆಗೆ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋಗಳು ವೈರಲ್ ಆದ ಬಳಿಕ ವಿಕೃತ ಕಾಮಿಯ ಬಣ್ಣ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿರುವ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ಎಂಬಾತನೆ ಈ ವಿಕೃತಕಾಮಿ. ಈ ಕಾಮುಕ ಅಟ್ಟಹಾಸಕ್ಕೆ ಇದೀಗ ಮಹಿಳೆಯರ ಮಾನ ಹರಾಜಾಗಿದೆ ಎನ್ನಲಾಗುತ್ತಿದೆ. ಈ ಕಾಮುಕ ದಾವಣಗೆರೆ ನಗರದ ದೇವರಾಜ್ ಅರಸು ಬಡವಾಣೆಯ ಎ ಬ್ಲಾಖ್ ನಿವಾಸಿಯಾಗಿದ್ದ. ತನ್ನ ಮೆಡಿಕಲ್ ಸ್ಟೋರ್ ಹಾಗೂ ಕ್ಲಿನಿಕ್ ಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಹೀಗೆ ತನ್ನ ಕ್ಲಿನಿಕ್ ಗೆ ಬಂದಂತಹ ಶಾಲಾ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾನೆ. ಆ ಬಾಲಕಿ ಕೈ ಮುಗಿದು ಅತ್ತು ಕೆರೆದರೂ ಬಿಟ್ಟಿಲ್ಲ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಕಾಮಿ ನಾಪತ್ತೆಯಾಗಿದ್ದ. ಈ ಕಾಮುಕನ ಮೊಬೈಲ್ ನಲ್ಲಿ ಅರವತ್ತಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದೆ ಎನ್ನಲಾಗಿದೆ.
ಈ ವಿಕೃತ ಕಾಮಿ ಅಮ್ಜದ್ ತನ್ನ ಸರಸ ಸಲ್ಲಾಪದ ವಿಡಿಯೋವನ್ನು ಸೆರೆಹಿಡಿದುಕೊಂಡು ಅವುಗಳನ್ನು ಲ್ಯಾಪ್ ಟಾಪ್ ಗೆ ಹಾಕಿಕೊಂಡು ವೀಕ್ಷಣೆ ಮಾಡುತ್ತಾ ವಿಕೃತ ಆನಂದವನ್ನು ಪಡುತ್ತಿದ್ದನಂತೆ. ಮಹಿಳೆಯರಿಗೆ ತಿಳಿಯದೇ ಈ ರೀತಿಯ ವಿಡಿಯೋಗಳನ್ನು ಮಾಡಿಕೊಂಡು ಅವರ ಮಾನ ಹರಾಜು ಹಾಕುತ್ತಿದ್ದನಂತೆ. ಹೀಗೆ ಬಾಲಕಿಯನ್ನು ಪುಸಲಾಯಿಸಿ ಯಾವುದೋ ಮನೆಗೆ ಕರೆದುಕೊಂಡು ಹೋಗಿ ಬಲವಂತ ಮಾಡಿದ್ದಾನೆ. ಜೊತೆಗೆ ಅದನ್ನು ವಿಡಿಯೋ ಮಾಡಿಕೊಂಡು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಅಮ್ಜದ್ ವಿರುದ್ದ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.